5
March, 2026

A News 365Times Venture

5
Thursday
March, 2026

A News 365Times Venture

‘ಕರ್ನಾಟಕ ದರ್ಶನ’ : ಶ್ರೀರಂಗಪಟ್ಟಣ ವೈಭವಕ್ಕೆ ಮನಸೋತ ಬಾಗೇವಾಡಿ ಪ್ರತಿಭೆಗಳು

Date:

ಮಂಡ್ಯ,ಮಾರ್ಚ್,5,2026 (www.justkannada.in): ರಾಜ್ಯದ ಐತಿಹಾಸಿಕ ತಾಣಗಳ ಪರಿಚಯ ಮಾಡಿಸುವ ‘ಕರ್ನಾಟಕ ದರ್ಶನ’ ಕಾರ್ಯಕ್ರಮದ ಅಂಗವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ಆಪ್ತವಾಗಿ ಸಂವಾದ ನಡೆಸಿದರು.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳು ಈ ಐತಿಹಾಸಿಕ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆ, ದರಿಯಾ ದೌಲತ್, ಗುಮ್ಮಟ ಮತ್ತು ಜೀವನದಿ ಕಾವೇರಿಯ ಸೊಬಗನ್ನು ವೀಕ್ಷಿಸಿದ ವಿದ್ಯಾರ್ಥಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ಮಾತುಕತೆ ನಡೆಸಿದರು. ಈ ವೇಳೆ ಮಕ್ಕಳ ಕಲಿಕೆಯ ಉತ್ಸಾಹವನ್ನು ಕಂಡು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

“ಪಠ್ಯಪುಸ್ತಕದ ಪುಟಗಳಲ್ಲಿ ಕೇವಲ ಚಿತ್ರಗಳಾಗಿ ಮತ್ತು ಅಕ್ಷರಗಳಾಗಿ ಕಂಡಿದ್ದ ಇತಿಹಾಸವು, ಇಂದು ನಮ್ಮ ಕಣ್ಣೆದುರು ಜೀವಂತವಾಗಿ ತೆರೆದುಕೊಂಡಿದೆ” ಎಂದು ವಿದ್ಯಾರ್ಥಿಗಳು ತಮ್ಮ ರೋಮಾಂಚನಕಾರಿ ಅನುಭವಗಳನ್ನು ಸಚಿವ ಮಧು ಬಂಗಾರಪ್ಪ ಮುಂದೆ ಹಂಚಿಕೊಂಡರು.

ಉತ್ತರ ಕರ್ನಾಟಕದ ಬಸವನ ಬಾಗೇವಾಡಿಯಂತಹ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹಳೇ ಮೈಸೂರು ಭಾಗದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವಲ್ಲಿ “ಕರ್ನಾಟಕ ದರ್ಶನ” ಯೋಜನೆ ಒಂದು ಭದ್ರ ಸೇತುವೆಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಮಕ್ಕಳ ಭವಿಷ್ಯವು ಈ ಜ್ಞಾನದ ಬೆಳಕಿನಲ್ಲಿ ಉಜ್ವಲವಾಗಿರಲಿ ಎಂದು ಸಚಿವ ಮಧು ಬಂಗಾರಪ್ಪ ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು.

ಈ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, “ಪುಸ್ತಕದ ಜ್ಞಾನದ ಜೊತೆಗೆ ಪ್ರಾಯೋಗಿಕವಾಗಿ ಇತಿಹಾಸವನ್ನು ನೋಡಿ ಕಲಿಯುವುದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಇಂತಹ ಪ್ರವಾಸಗಳು ವಿದ್ಯಾರ್ಥಿಗಳಲ್ಲಿ ನಾಡಿನ ಬಗ್ಗೆ ಹೆಮ್ಮೆ ಮೂಡಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Key words: ‘Karnataka Darshan, Minister,Madhu Bangarappa, students, Srirangapatna

The post ‘ಕರ್ನಾಟಕ ದರ್ಶನ’ : ಶ್ರೀರಂಗಪಟ್ಟಣ ವೈಭವಕ್ಕೆ ಮನಸೋತ ಬಾಗೇವಾಡಿ ಪ್ರತಿಭೆಗಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

BRAND KARNATAKA: 4,000 ಎಂಎಸ್‌ಎಂಇಗಳಿಗೆ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಬೆಂಬಲ- ರೋಹಿಣಿ ಸಿಂಧೂರಿ.

  ಬೆಂಗಳೂರು, ಮಾರ್ಚ್ 5: ‘ಬ್ರ್ಯಾಂಡ್ ಕರ್ನಾಟಕ’ (Brand Karnataka) ಕಾರ್ಯಕ್ರಮದ...

ഇറാനിയന്‍ കപ്പല്‍ രാജ്യത്തിന്റെ അതിഥിയല്ലെന്ന കേന്ദ്ര നിലപാട് അമേരിക്കന്‍ വിധേയത്വം; പ്രവാസികളുടെ സുരക്ഷ ഉറപ്പാക്കണം: മുഖ്യമന്ത്രി

തിരുവനന്തപുരം: പശ്ചിമേഷ്യയിലെ സംഘര്‍ഷത്തില്‍ ആശങ്ക രേഖപ്പെടുത്തിയും പ്രവാസികളുടെ സുരക്ഷ ഉറപ്പാക്കണമെന്ന് കേന്ദ്ര...

ஆனந்த் போஸ் ராஜினாமா: தமிழக ஆளுநர் ஆர்.என் ரவி மேற்கு வங்கத்திற்கு மாற்றமா?!

மேற்கு வங்கம், தமிழ்நாடு உட்பட 5 மாநிலங்களுக்கு அடுத்த இரண்டு மாதங்களில்...

India vs England: రఫ్ఫాడించిన సంజు, దూబే.. ఇంగ్లాండ్ ముందు భారీ టార్గెట్

T20 వరల్డ్ కప్ 2026 రెండవ సెమీ-ఫైనల్ ముంబైలోని వాంఖడే స్టేడియంలో...