4
March, 2026

A News 365Times Venture

4
Wednesday
March, 2026

A News 365Times Venture

ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಭ್ರಷ್ಟಾಚಾರವಲ್ಲ,ಇತಿಹಾಸ-KPSC ಕಾರ್ಯದರ್ಶಿ ಜ್ಯೋತಿ

Date:

ಬೆಂಗಳೂರು,ಮಾರ್ಚ್, 4,2026 (www.justkannada.in): ಕೆಪಿಎಸ್‌ ಸಿ ಪ್ರಕಟಿಸಿದ ಕೆಎಎಸ್ ಮುಖ್ಯ ಪರೀಕ್ಷಾ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಒಂದೇ ಪರೀಕ್ಷಾ ಕೊಠಡಿಯಲ್ಲಿ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿರುವುದು ಅನುಮಾನಕ್ಕೆ  ಎಡೆ ಮಾಡಿಕೊಟ್ಟಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಆದರೆ   ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೆಪಿಎಸ್‌ ಸಿ ಕಾರ್ಯದರ್ಶಿ ಜ್ಯೋತಿ ಅವರು, ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಭ್ರಷ್ಟಾಚಾರವಲ್ಲ,ಇತಿಹಾಸ ಎಂದಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಅವರು, ‘ಕೆಪಿಎಸ್‌ಸಿ ಫಲಿತಾಂಶದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಫಲಿತಾಂಶ ಬಿಡುಗಡೆ ಮಾಡಲಾಗಿದೆ. ಯಾವುದೇ ಆಧಾರವಿಲ್ಲದೆ ಭ್ರಷ್ಟಾಚಾರದ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

5,700ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳು ಇರುತ್ತಾರೆ. ಅದರಲ್ಲಿ 10 ರಿಂದ 12 ಅಭ್ಯರ್ಥಿಗಳು ಆಯ್ಕೆಯಾಗುವುದು ಸಂಭವನೀಯ. ಆದರೆ, ಕೆಪಿಎಸ್‌ಸಿ ಇತಿಹಾಸದಲ್ಲೇ ಒಂದೇ ಕೊಠಡಿಯಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪಾಸ್ ಆಗಿರುವುದು ಇದೇ ಮೊದಲು ಎನಿಸುತ್ತದೆ. ಇದು ಭ್ರಷ್ಟಾಚಾರವಲ್ಲ, ಇತಿಹಾಸ.  ಇದನ್ನು ನಾನು ಖುದ್ದಾಗಿ ತನಿಖೆ ನಡೆಸುತ್ತಿದ್ದೇನೆ, ಇದಕ್ಕಾಗಿ ಯಾವುದೇ ಪ್ರತ್ಯೇಕ ಸಮಿತಿ ರಚಿಸುವುದಿಲ್ಲ ಎಂದು ಹೇಳಿದರು.

Key words: KPSC, KAS, Result, corruption, KPSC Secretary, Jyoti

The post ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಭ್ರಷ್ಟಾಚಾರವಲ್ಲ,ಇತಿಹಾಸ-KPSC ಕಾರ್ಯದರ್ಶಿ ಜ್ಯೋತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮೈಸೂರು ವಿಭಾಗ ಬಿಜೆಪಿ ಸಹ ಪ್ರಭಾರಿಯಾಗಿ ಡಾ.ಈ.ಸಿ.ನಿಂಗರಾಜ್ ಗೌಡ ನೇಮಕ.

ಮೈಸೂರು,ಮಾರ್ಚ್,4,2026 (www.justkannada.in): ಭಾರತೀಯ ಜನತಾ ಪಾರ್ಟಿಯ ಮೈಸೂರು ವಿಭಾಗದ ಸಹ...

ശ്രീലങ്കന്‍ തീരത്ത് ഇറാനിയന്‍ യുദ്ധക്കപ്പല്‍ മുക്കിയത് യു.എസ് അന്തര്‍വാഹിനി: സ്ഥിരീകരിച്ച് യു.എസ്

വാഷിങ്ടണ്‍: ശ്രീലങ്കന്‍ തീരത്തിന് സമീപത്ത് വെച്ച് ഇറാന്റെ യുദ്ധക്കപ്പല്‍ മുക്കിയത് യു.എസ്...

` மண்ணுக்கு போற உடம்பு; படிப்புக்கு உதவட்டுமே!'- உடல் தானப் பதிவுசெய்த அற்புதம் அம்மாள், பேரறிவாளன்

"ரொம்ப நாள் ஆசைய்யா... ஆனா யார்கிட்ட கேட்டாலும் யாராவது சொந்தக்காரங்க...