4
March, 2026

A News 365Times Venture

4
Wednesday
March, 2026

A News 365Times Venture

ಪತ್ರಕರ್ತೆಯರಿಗೆ ವಿಶೇಷ ತರಬೇತಿಗೆ ಅರ್ಜಿ ಆಹ್ವಾನ

Date:

ಬೆಂಗಳೂರು, ಮಾರ್ಚ್ 4,2026 (www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿಯು Infosys Springboard ಸಿ.ಎಸ್.ಆರ್.‌ ಕಾರ್ಯಕ್ರಮದಡಿ ಮಹಿಳಾ ಪತ್ರಕರ್ತೆಯರಿಗಾಗಿಯೇ ವಿಶೇಷವಾಗಿ ತರಬೇತಿ ಆಯೋಜಿಸಿದ್ದು, ಪತ್ರಕರ್ತೆಯರಿಂದ ಅರ್ಜಿ ಆಹ್ವಾನಿಸಿದೆ.

ತರಬೇತಿಯು ಮಾರ್ಚ್‌ 25 ರಿಂದ 27ರ ವರೆಗೆ ಮೈಸೂರಿನ ಇನ್‌ ಫೋಸಿಸ್‌ ಕ್ಯಾಂಪಸ್‌ ನಲ್ಲಿ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ 5 ವರ್ಷ ಸೇವಾನುಭವ ಹೊಂದಿರುವ ಪತ್ರಕರ್ತೆಯರು ಅರ್ಜಿ ಸಲ್ಲಿಸಬಹುದು.

ಆಸಕ್ತ ಪತ್ರಕರ್ತೆಯರು ಗೂಗಲ್‌ ಫಾರ್ಮ್‌ https://forms.gle/tozr4GxUQibDHBvk9 ನಲ್ಲಿ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಮೂಲಕ ತರಬೇತಿಗೆ ನೋಂದಾಯಿಸಬಹುದಾಗಿದೆ.

ಅರ್ಜಿ ನಮೂನೆಯಲ್ಲಿ ಸೂಚಿಸಿರುವಂತೆ ಪತ್ರಕರ್ತೆಯರು ಭಾವಚಿತ್ರ, ವಯಸ್ಸಿನ ದಾಖಲೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಅಥವಾ ಕಚೇರಿಯ ಅಧಿಕೃತ ಗುರುತಿನಚೀಟಿ, ಸದರಿ ಮಾಧ್ಯಮ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕುರಿತ ದಾಖಲೆ ಹಾಗೂ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ಕುರಿತು ಸೇವಾನುಭವ ದಾಖಲೆಗಳನ್ನು ಸಲ್ಲಿಸಬೇಕು.

ಇದು ಮೂರು ದಿನಗಳ ವಸತಿಯುತ ತರಬೇತಿಯಾಗಿದ್ದು, ಪತ್ರಕರ್ತೆಯರಿಗೆ ನಿಯಮಾನುಸಾರ ಪ್ರಯಾಣ ಭತ್ಯೆ ನೀಡಲಾಗುವುದು.  ಈ ತರಬೇತಿ ಕಾರ್ಯಕ್ರಮದಲ್ಲಿ ಡಿಜಿಟಲ್‌ ಮಾಧ್ಯಮ, ಎಐ ಬಳಕೆ ಹಾಗೂ ಸಾಫ್ಟ್‌ ಸ್ಕಿಲ್‌ ಅಭಿವೃದ್ಧಿ  ಮತ್ತು ನಾಯಕತ್ವ ತರಬೇತಿ ನೀಡಲಾಗುವುದು.

ಪತ್ರಕರ್ತೆಯರ ಆಯ್ಕೆ ಕುರಿತ ಅಂತಿಮ ನಿರ್ಧಾರ ಅಕಾಡೆಮಿಯದ್ದೇ ಆಗಿರುತ್ತದೆ. ಅರ್ಜಿ ಸಲ್ಲಿಸಲು ಮಾರ್ಚ್ 10, 2026 ಕೊನೆಯ ದಿನವಾಗಿದೆ.

Key words: Karnataka Media Academy, Training Program, Women Journalists

The post ಪತ್ರಕರ್ತೆಯರಿಗೆ ವಿಶೇಷ ತರಬೇತಿಗೆ ಅರ್ಜಿ ಆಹ್ವಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Tamil Nadu: డీఎంకే-కాంగ్రెస్ సీట్ల పంపకం ఖరారు.. హస్తం పార్టీకి ఎన్ని సీట్లంటే..

Tamil Nadu: తమిళనాడు అసెంబ్లీ ఎన్నికలకు సమయం దగ్గర పడింది. అయితే,...

ഇറാനെതിരായ പ്രതിരോധ മിസൈലുകള്‍ തീരുന്നു; ഗള്‍ഫ് രാജ്യങ്ങള്‍ ആയുധക്ഷാമം നേരിടുന്നുവെന്ന് വെസ്റ്റേണ്‍ മീഡിയ

റിയാദ്: ഗള്‍ഫ് രാജ്യങ്ങളിലെ മിസൈല്‍ ഇന്റര്‍സെപ്റ്ററുകള്‍ തീര്‍ന്നുപോകുന്നതായി റിപ്പോര്‍ട്ടുകള്‍. ഈ കുറവ്...

TVK : `ஓம் சக்தி, பராசக்தி, திமுக ஒரு தீய சக்தி' – தஞ்சை கூட்டத்தில் தவெக தலைவர் விஜய்!

தஞ்சாவூா் அருகே செங்கிப்பட்டி பகுதியில் தவெக தலைவா் விஜய் பங்கேற்கும் நிா்வாகிகள்...

Trump: అదంతా అబద్దం.. అంతర్జాతీయ కథనాలపై ట్రంప్ క్లారిటీ

గత నెల 28న అకస్మాత్తుగా ఇరాన్ అధ్యక్ష భవనంపై ఇజ్రాయెల్ దాడి...