3
March, 2026

A News 365Times Venture

3
Tuesday
March, 2026

A News 365Times Venture

ಒಮನ್ ನಲ್ಲಿ ತೈಲ ಟ್ಯಾಂಕರ್‌ ಮೇಲೆ ದಾಳಿ; ಓರ್ವ ಭಾರತೀಯ ಸಾವು

Date:

ನವದೆಹಲಿ,ಮಾರ್ಚ್,2,2026 (www.justkannada.in): ಇಸ್ರೇಲ್‌-ಅಮೆರಿಕದ ಜಂಟಿ ದಾಳಿ ನಡೆಸುತ್ತಿರುವ ಪರಿಣಾಮ ಇರಾನ್‌ ನಿಂದ ಪ್ರತಿಕಾರದ  ಪ್ರತಿ ದಾಳಿ ಮುಂದುವರೆದಿದ್ದು ಒಮನ್‌ ನಲ್ಲಿ ತೈಲ ಟ್ಯಾಂಕರ್‌ ಮೇಲೆ ದಾಳಿಯಾಗಿದೆ.

ಈ ಮಧ್ಯೆ ಈ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಒಮನ್ ದೃಢಪಡಿಸಿದೆ.  ಸುಲ್ತಾನ್ ಕಬೂಸ್ ಬಂದರು ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದೆ. ಇದರಲ್ಲಿ ಭಾರತೀಯ ಮೃತಪಟ್ಟಿರುವ ಬಗ್ಗೆ ಒಮನ್ ದೃಢಪಡಿಸಿದೆ.

ಒಮನ್ ಕರಾವಳಿಯಲ್ಲಿ ಮಾನವರಹಿತ ಡ್ರೋನ್ ಹಡಗು ತೈಲ ಟ್ಯಾಂಕರ್‌ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಇರಾನ್- ಇಸ್ರೇಲ್ ನಡುವಿನ ಯುದ್ಧದಲ್ಲಿ ಮೊದಲ ಭಾರತೀಯನ ಸಾವಾಗಿದೆ ಎನ್ನಲಾಗಿದೆ. ಈ ಹಡಗಿನಲ್ಲಿ 16 ಭಾರತೀಯರು, ನಾಲ್ವರು ಬಾಂಗ್ಲಾದೇಶಿಯರು ಮತ್ತು ಒಬ್ಬ ಉಕ್ರೇನಿಯನ್ ಸೇರಿದಂತೆ 21 ಸಿಬ್ಬಂದಿ ಇದ್ದರು. ಬದುಕುಳಿದ ಎಲ್ಲರನ್ನೂ ಪನಾಮ ಧ್ವಜದ ಅಡಿಯಲ್ಲಿ ಸಾಗುವ ವ್ಯಾಪಾರಿ ಹಡಗಿಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Iran, Israel, conflict, Oil tanker, Oman, Indian dead

The post ಒಮನ್ ನಲ್ಲಿ ತೈಲ ಟ್ಯಾಂಕರ್‌ ಮೇಲೆ ದಾಳಿ; ಓರ್ವ ಭಾರತೀಯ ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಿ- ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು,ಮಾರ್ಚ್,2,2026 (www.justkannada.in):  ಇರಾನ್ ಮೇಲೆ ಇಸ್ರೇಲ್ , ಅಮೇರಿಕಾ ಜಂಟಿ...

പശ്ചിമേഷ്യയിലെ സംഘര്‍ഷം: ഫ്രാന്‍സ് ആണവായുധ ശേഖരം വര്‍ധിപ്പിക്കും: ഇമ്മാനുവല്‍ മാക്രോണ്‍

പാരീസ്: പശ്ചിമേഷ്യയിലെ സംഘര്‍ഷങ്ങളുടെ പശ്ചാത്തലത്തില്‍ ആണവായുധ ശേഖരം വര്‍ധിപ്പിക്കുമെന്ന് ഫ്രഞ്ച് പ്രസിഡന്റ്...

திருப்பரங்குன்றம் விவகாரம்: `நிபந்தனையற்ற மன்னிப்பு கோரத் தயார்' – மாவட்ட ஆட்சியர் அபிடெவிட் மனு

திருப்பரங்குன்றம் தீப விவகாரம் தொடர்பான வழக்கு  நீதிபதி ஜி.ஆர் சுவாமிநாதன் அமர்வில்...

Off The Record: ఆ ఉమ్మడి జిల్లాల్లో తగ్గిన జనసేన జోష్..!

Off The Record: 2024 ఎన్నికల్లో జనసేనకు వెన్నెముకగా నిలబడింది ఉమ్మడి...