28
February, 2026

A News 365Times Venture

28
Saturday
February, 2026

A News 365Times Venture

ಮಾಧ್ಯಮ ನಿರ್ಬಂಧ ಆದೇಶ ವಾಪಸ್ ಪಡೆಯದಿದ್ರೆ ವಿಧಾನಸೌಧದಲ್ಲೇ ಮಲಗುವೆ- ವಾಟಾಳ್ ನಾಗರಾಜ್ ಎಚ್ಚರಿಕೆ

Date:

ಬೆಂಗಳೂರು,ಫೆಬ್ರವರಿ,27,2026 (www.justkannada.in):  ಕರ್ನಾಟಕದಲ್ಲಿ ವಿಧಾನಸೌಧದೊಳಗೆ ದೃಶ್ಯ ಮಾಧ್ಯಮ ಬಿಡಬಾರದೆಂದು ನಿರ್ಧಾರವಾಗಿದೆ. ಈ ನಿರ್ಧಾರವನ್ನು ವಾಪಸ್ ಪಡೆಯದಿದ್ದರೇ ವಿಧಾನಸೌಧದ ಬಾಗಿಲಲ್ಲೇ ಮಲಗಿ ಪ್ರತಿಭಟನೆ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ವಿಧಾನಸೌಧಕ್ಕೆ ದೃಶ್ಯ ಮಾಧ್ಯಮಗಳ ನಿರ್ಬಂಧ ಮಾಡಿರುವುದು ಅಪಚಾರ ಅವಲಕ್ಷಣ. ದೃಶ್ತ ಮಾಧ್ಯಮ ನಿರ್ಬಂಧ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಅದೇಶ ಹಿಂಪಡೆಯದಿದ್ದರೆ ಸರಕಾರದ ವಿರುದ್ದ ಹೋರಾಟ ಮಾಡುವೆ ಎಂದರು.

ಮಾಧ್ಯಮದವರನ್ನ ಗುಲಾಮರಂತೆ ನೋಡಬಾರದು. ಯಾರು ಈ ತೀರ್ಮಾನ ತೆಗೆದುಕೊಂಡಿದ್ದಾರೋ ವಾಪಸ್ ಪಡೆಯಬೇಕು. ಸರ್ಕಾರದ ಈ ಆದೇಶ ಪ್ರಜಾಪ್ರಭುತ್ವವನ್ನು  ಅಣಕಿಸುವಂತಿದೆ. ಸ್ಪೀಕರ್,  ಸಿಎಂ ಚಿಂತಿಸಬೇಕು. ನೀವೇನು ಪರದೆ ಹಿಂದೆ ಇದ್ದೀರಾ?  ಎಲ್ಲೆಂದರಲ್ಲಿ ನಿಮ್ಮನ್ನ ಕೇಳಬೇಕು.  ನಿಮ್ಮನ್ನು ಪ್ರಶ್ನಿಸಬಾರದು ಅಂದರೆ ಹೇಗೆ?  ನಾನು ಅಸೆಂಬ್ಲಿಯಲ್ಲಿ ಇದ್ದಿದ್ದರೇ ಅದರ ರೂಪವೇ ಬೇರೆ ಆಗುತ್ತಿತ್ತು ವಿಧಾನಸೌಧಕ್ಕೆ ದೃಶ್ಯ ಮಾದ್ಯಮ ನಿರ್ಬಂಧಿಸಿದ್ದು ಗಂಭೀರವಾದುದು.  15 ದಿನದಲ್ಲಿ ಸರ್ಕಾರ ತೀರ್ಮಾನಕ್ಕೆ ಬರದಿದ್ದರೇ ವಿಧಾನಸೌಧದ ಬಾಗಿಲಲ್ಲೇ ಮಲಗುವೆ ಎಂದು ವಾಟಾಳ್ ನಾಗರಾಜ್ ವಾರ್ನಿಂಗ್ ನೀಡಿದರು.

Key words: Vatal Nagaraj, warns, Vidhana Soudha, media, restriction

The post ಮಾಧ್ಯಮ ನಿರ್ಬಂಧ ಆದೇಶ ವಾಪಸ್ ಪಡೆಯದಿದ್ರೆ ವಿಧಾನಸೌಧದಲ್ಲೇ ಮಲಗುವೆ- ವಾಟಾಳ್ ನಾಗರಾಜ್ ಎಚ್ಚರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

2028ರಲ್ಲಿ JDS-BJP ಮೈತ್ರಿ ಅಧಿಕಾರಕ್ಕೆ- ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು

ವಿಜಯಪುರ,ಫೆಬ್ರವರಿ,27,2026 (www.justkannada.in):   ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು  ಬಿಜೆಪಿ...

തൊഴില്‍ മന്ത്രിയുടെ നിര്‍ദേശമടക്കം അംഗീകരിച്ചു; സമരം താത്ക്കാലികമായി നിര്‍ത്തിവെക്കുന്നതായി മാധ്യമം ജീവനക്കാര്‍

കോഴിക്കോട്: മാസങ്ങളായി ശമ്പളവും ആനുകൂല്യങ്ങളും നല്‍കാത്തതിനെ തുടര്‍ന്ന് നടത്തി വരികയായിരുന്ന പ്രത്യക്ഷ...

OTR: పర్యటన వివరాలు సీక్రెట్‌గా ఉంచడంలో ఆంతర్యం ఏంటి?

OTR: ఓ మంత్రి, ఇద్దరు ప్రభుత్వ సలహాదారులు కలిసి హెలికాప్టర్‌లో వెళ్ళి...