25
February, 2026

A News 365Times Venture

25
Wednesday
February, 2026

A News 365Times Venture

ಖಾಲಿ ಹುದ್ದೆಗಳ ಭರ್ತಿಗೆ ಸಿದ್ದ: ಈಗಲೂ 35ರಿಂದ 40 ಸಾವಿರ ಹುದ್ದೆ ಭರ್ತಿಯಾಗಿದೆ ಎಂದ ಸಚಿವ ಪ್ರಿಯಾಂಕ್ ಖರ್ಗೆ

Date:

ಬೆಂಗಳೂರು,ಫೆಬ್ರವರಿ,25,2026 (www.justkannnada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಸರಿಯಾಗಿ ನೇಮಕಾತಿಗಳನ್ನ ಮಾಡದೇ ಖಾಲಿ ಹುದ್ದೆಗಳ ಭರ್ತಿಗೆ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಅತ್ತ ಉದ್ಯೋಗಾಕಾಂಕ್ಷಿಗಳು  ಧಾರವಾಡದಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಆದರೆ ಇತ್ತ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಈಗಲೂ 35 ರಿಂದ 40 ಸಾವಿರ ಹುದ್ದೆ ಭರ್ತಿ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಖಾಲಿ ಹುದ್ದೆಗಳ ಭರ್ತಿಗಾಗಿ ನಿನ್ನೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ನಡೆದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ , ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಸಿದ್ದವಿದೆ. ಈಗಲೂ 35ರಿಂದ 40 ಸಾವಿರ ಹುದ್ದೆ ಭರ್ತಿ ಮಾಡಿದ್ದೇವೆ. ಈಗ ಒಳ ಮೀಸಲಾತಿ ವಿಚಾರವಾಗಿ ಸ್ವಲ್ಪ ಸಮಸ್ಯೆ ಇದೆ ಎಲ್ಲವನ್ನೂ ಸರಿಪಡಿಸಿಕೊಂಡು ನೇಮಕಾತಿ ಆಗುತ್ತೆ ಎಂದರು.

ಗುರುವಾರ ಕ್ಯಾಬಿನೆಟ್ ನಲ್ಲೂ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಮೀಸಲಾತಿ ಇರಬೇಕು. ಸಾಮಾಜಿಕ ನ್ಯಾಯಪರನೂ ಇರಬೇಕು ಹೈಕೋರ್ಟ್  ಸುಪ್ರೀಂಕೋರ್ಟ್ ಗೆ  ಹೋದಾಗ ಕೆಲವು ತಡವಾಗಬಹುದು ವಯೋಮಿತಿ ಹೆಚ್ಚಳದ ಬಗ್ಗೆಯೂ ಸರ್ಕಾರ ಕ್ರಮ ಕೈಗೊಂಡಿದೆ ಬಿಜೆಪಿ ಅವಧಿಯಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿತ್ತು ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.

Key words: Ready, fill, vacant, posts, Minister, Priyank Kharge

The post ಖಾಲಿ ಹುದ್ದೆಗಳ ಭರ್ತಿಗೆ ಸಿದ್ದ: ಈಗಲೂ 35ರಿಂದ 40 ಸಾವಿರ ಹುದ್ದೆ ಭರ್ತಿಯಾಗಿದೆ ಎಂದ ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಬಾಲ್ಯ ವಿವಾಹ, ವರದಕ್ಷಿಣೆ ಕಾಯ್ದೆ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಿ-ಜಿಲ್ಲಾಧಿಕಾರಿ – ಡಾ. ಕುಮಾರ

ಮಂಡ್ಯ ಫೆಬ್ರವರಿ,25,2026 (www.justkannada.in): ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ವರದಕ್ಷಿಣೆ...

900ത്തിലേറെ തവണ വെടിയുതിര്‍ത്തു;രക്ഷപ്പെടാന്‍ ശ്രമിച്ചവര്‍ക്ക് ‘വധശിക്ഷ’; ഗസയിലെ മെഡിക്കല്‍ സംഘത്തോടുള്ള ഇസ്രഈല്‍ സേനയുടെ ക്രൂരത

ഗസ: ഗസയില്‍ ഫലസ്തീനില്‍ അടിയന്തര സേവനം നടത്തുകയായിരുന്ന മെഡിക്കല്‍ സംഘത്തെ ഇസ്രഈല്‍...

Maruthi : మారుతికి హీరో కావలెను!

దర్శకుడు మారుతి ప్రస్తుతం తన కెరీర్‌లో అత్యంత క్లిష్టమైన దశను ఎదుర్కొంటున్నారు....