25
February, 2026

A News 365Times Venture

25
Wednesday
February, 2026

A News 365Times Venture

ಖಾಲಿ ಹುದ್ದೆಗಳ ಭರ್ತಿಗೆ ಹೋರಾಟ: ಜಿಲ್ಲಾಧಿಕಾರಿಗಳ ಮನವೊಲಿಕೆಗೂ ಬಗ್ಗೆದ ವಿದ್ಯಾರ್ಥಿಗಳು

Date:

ಧಾರವಾಡ,ಫೆಬ್ರವರಿ,24,2026 (www.justkannada.in): ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳ ಮನವಿ ಆಲಿಸಿದರು.

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಜುಬಿಲಿ ವೃತ್ತದಲ್ಲಿ ಸಾವಿರಾರು ವಿದ್ಯಾರ್ಥಿಗಳು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ನೇಹಲ್ ಅವರು ಭೇಟಿ ವಿದ್ಯಾರ್ಥಿಗಳ ಬೇಡಿಕೆ ಆಲಿಸಿದರು.

ಈ ವೇಳೆ ಮಾತನಾಡಿದ ಡಿಸಿ ಸ್ನೇಹಲ್, ಬೆಳಿಗ್ಗೆಯಿಂದ ನಡೆದ ಹೋರಾಟದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ.  ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದ್ದೇನೆ. ರಾಜ್ಯ ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ನೀವು ನಿಮ್ಮ ಸಿದ್ದತೆ ಆರಂಭಿಸಿ ಎಂದು ಭರವಸೆ ನೀಡಿದರು.

ಆದರೆ ಜಿಲ್ಲಾಧಿಕಾರಿಗಳ ಮಾತಿಗೆ ವಿರೋಧ ವ್ಯಕ್ತಪಡಿಸಿದ ಉದ್ಯೋಗಾಕಾಂಕ್ಷಿಗಳು ಯಾವುದೇ ಕಾರಣಕ್ಕೂ ಇಲ್ಲಿಂದ ಹೋಗಲ್ಲ ಅಧಿಸೂಚನೆ ಹೊರಡಿಸುವವರೆಗೂ ಹೋರಾಟ ನಿಲ್ಲಿಸಲ್ಲ. ಬೇಕೆ ಬೇಕು ನ್ಯಾಯಬೇಕು ಎಂದು ಆಗ್ರಹಿಸಿದರು. ಕೆಲ ಮಹಿಳಾ ಉದ್ಯೋಗಾಕಾಂಕ್ಷಿಗಳು ಡಿಸಿ ಎದುರೇ ಕಣ್ಣೀರು ಹಾಕಿ ಅಳಲು ತೋಡಿಕೊಂಡರು.

ಸ್ಥಳದಿಂದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ತೆರಳಿದ ಬಳಿಕ  ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಸ್ ನಲ್ಲಿ ಕರೆದೊಯ್ದಿದ್ದಾರೆ.

Key words: fill, vacant posts, Students, Protest, Dharwad, DC

The post ಖಾಲಿ ಹುದ್ದೆಗಳ ಭರ್ತಿಗೆ ಹೋರಾಟ: ಜಿಲ್ಲಾಧಿಕಾರಿಗಳ ಮನವೊಲಿಕೆಗೂ ಬಗ್ಗೆದ ವಿದ್ಯಾರ್ಥಿಗಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ತೀವ್ರಗೊಂಡ ಹೋರಾಟ: ಬಿಜೆಪಿ ನಾಯಕರು ಸಾಥ್

ಧಾರವಾಡ,ಫೆಬ್ರವರಿ,24,2026 (www.justkannada.in): ರಾಜ್ಯದಲ್ಲಿ 2.80 ಲಕ್ಷ ಹುದ್ದೆಗಳು ಖಾಲಿ ಇದ್ದರೂ...

എന്‍.സി.ഇ.ആര്‍.ടി പാഠപുസ്തക വിവാദം; രാഷ്ട്രീയ അഴിമതികള്‍ പരവതാനിക്കുള്ളില്‍ ഒളിപ്പിക്കുന്നു: കപില്‍ സിബല്‍

ന്യൂദല്‍ഹി: പരിഷ്‌കരിച്ച എന്‍.സി.ഇ.ആര്‍.ടി പാഠപുസ്തകത്തിനെതിരെ രൂക്ഷ വിമര്‍ശനവുമായി മുതിര്‍ന്ന അഭിഭാഷകന്‍ കപില്‍...

முதல்வர் ஸ்டாலின் பத்திரிகை வாசிக்க, ஆமோதித்த அழகிரி; கலைஞர் குடும்பத்தில் களைகட்டிய விசேஷம்!

பிப்ரவரி 22 சென்னையில் நடந்த முதல்வர் வீட்டு விசேஷத்தில் முதல்வர் மு.க.ஸ்டாலினும்...

Railway ALP Recruitment 2026: పది పాసైతే చాలు.. 11,127 అసిస్టెంట్ లోకో పైలట్ పోస్టులు మీవే.. పూర్తి వివరాలు

రైల్వేలో ఉద్యోగాల జాతర కొనసాగుతోంది. ఇటీవలే ఆఆర్బీ గ్రూప్ డీ...