23
February, 2026

A News 365Times Venture

23
Monday
February, 2026

A News 365Times Venture

ಹುಳುಕು ಮುಚ್ಚಿಕೊಳ್ಳಲು ವಿಪಕ್ಷದವರೇ ದಲಿತ ಸಿಎಂ ಕೂಗು ತಂದಿದ್ದಾರೆ-ಗೃಹ ಸಚಿವ ಡಾ.ಜಿ.ಪರಮೇಶ್ವರ್

Date:

ಬೆಂಗಳೂರು,ಫೆಬ್ರವರಿ,23,2026 (www.justkannada.in): ತಮ್ಮ ಹುಳುಕು ಮುಚ್ಚಿಕೊಳ್ಳಲು ವಿಪಕ್ಷದವರೇ ದಲಿತ ಸಿಎಂ ಕೂಗು ತಂದಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ನಮ್ಮಲ್ಲಿ ಸಿಎಂ ಆಡಳಿತ ಮಾಡುತ್ತಿಲ್ಲವಾ? ಆಡಳಿತ ನಡೆಯುತ್ತಿಲ್ಲವಾ?  ಸುಮ್ಮನೆ ದಲಿತ ಸಿಎಂ ವಿಚಾರ ತರುತ್ತಿರುವುದು ವಿಪಕ್ಷಗಳೇ.  ದಲಿತರನ್ನು ಸಿಎಂ ಮಾಡೋದು ಕಾಂಗ್ರೆಸ್ ಪಕ್ಷನೇ. ಇನ್ಯಾರು ಮಾಡುತ್ತಾರೆ?  ಯಾವಾಗ ದಲಿತ ಸಿಎಂ ಮಾಡಬೇಕೆಂದು ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.

ಬಿಜೆಪಿ ಶಾಸಕ ಚಂದ್ರು ಲಮಾಣಿ ಮೇಲೆ ಲೋಕಾಯುಕ್ತ ದಾಳಿ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಲೋಕಾಯುಕ್ತ ಎಲ್ಲಾ ಮಾಹಿತಿ ಪಡೆದು ಟ್ರ್ಯಾಪ್ ಮಾಡುತ್ತಾರೆ ಎಲ್ಲವನ್ನೂ ನೋಡದೇ ಲೋಕಾಯುಕ್ತ ಪೊಲೀಸರು ರೇಡ್ ಮಾಡುತ್ತಾರಾ?  ಲೋಕಾಯುಕ್ತದವರು ಪರಿಶೀಲನೆ ಮಾಡಿ ಅವರ ಹಿನ್ನೆಲೆ ನೋಡಿ ಎಲ್ಲಾ ವಿದ್ಯಾನಮಾನವನ್ನು ನೋಡಿಕೊಂಡು ಟ್ರ್ಯಾಪ್ ಮಾಡುತ್ತಾರೆ.  ಪ್ರಕರಣ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದರು.

Key words: opposition Party,  Dalit CM, Minister , Dr. G. Parameshwar

The post ಹುಳುಕು ಮುಚ್ಚಿಕೊಳ್ಳಲು ವಿಪಕ್ಷದವರೇ ದಲಿತ ಸಿಎಂ ಕೂಗು ತಂದಿದ್ದಾರೆ-ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಿಎಂ ಸಿದ್ದರಾಮಯ್ಯ ದಾರಿ ತಪ್ಪಿದ ಮಗ ಆಗಿದ್ದಾರೆ-ಕೇಂದ್ರ ಸಚಿವ ವಿ.ಸೋಮಣ್ಣ

ನವದೆಹಲಿ,ಫೆಬ್ರವರಿ,23,2026 (www.justkannada.in): ಸಿಎಂ ಸಿದ್ದರಾಮಯ್ಯ ದಾರಿ ತಪ್ಪಿದ ಮಗ ಆಗಿದ್ದಾರೆ....

‘ഓപ്പറേഷന്‍ സുഭാഷ്’ രക്ഷാപ്രവര്‍ത്തനം ഒറ്റയ്ക്ക് നടത്തുന്ന ദൗത്യമല്ല, ഇത് ടീം വിജയം: കൊച്ചി മെട്രോ

കൊച്ചി: രക്ഷാപ്രവര്‍ത്തനം ഒരിക്കലും ഒറ്റയ്ക്ക് നടത്തുന്ന ദൗത്യമല്ലെന്നും ഒരുമിച്ച് നിന്നാല്‍ നമുക്കതിന്...