22
February, 2026

A News 365Times Venture

22
Sunday
February, 2026

A News 365Times Venture

CS ಶಾಲಿನಿ ರಜನೀಶ್ ಬಳಿ ಕ್ಷಮೆಯಾಚಿಸಿದ ಸ್ನೇಹಮಯಿ ಕೃಷ್ಣ

Date:

ಬೆಂಗಳೂರು,ಫೆಬ್ರವರಿ,21,2026 (www.justkannada.in):  ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ದ ಮುಂಬಡ್ತಿ ನೀಡಲು ಹಣ ಪಡೆದ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇದೀಗ ಕ್ಷಮೆ ಕೇಳಿದ್ದಾರೆ.

ನಕಲಿ ಆಡಿಯೋ ಹಾಗೂ ದಾಖಲಾತಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ ಆರೋಪ ಪ್ರಕರಣದಡಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ನಂತರ ಅವರನ್ನ ಬಿಡುಗಡೆಗೊಳಿಸಿದ್ದು  ಫೆ.24ರಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.

ಮುಡಾ ಮಾಜಿ ಆಯುಕ್ತ ನಟೇಶ್ ಹಾಗೂ ಮೈಸೂರು ಮೂಲದ ವಿನೋದ್ ಎಂಬಾತನ ಹಣಕಾಸು ವ್ಯವಹಾರದಲ್ಲಿ ಇಬ್ಬರ ನಡುವೆ ವೈಮನಸ್ಸಿತ್ತು. ನಟೇಶ್​ ಅವರೊಂದಿಗಿನ ವೈಷ್ಯಮದ ಲಾಭ ಪಡೆಯಲು ಸ್ನೇಹಮಯಿ ಕೃಷ್ಣರನ್ನು ವಿನೋದ್ ಬಳಸಿಕೊಂಡಿದ್ದ. ಮುಂಬಡ್ತಿಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ ಲಂಚ ನೀಡಿರುವುದಾಗಿ ತಪ್ಪು ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಸ್ನೇಹಮಯಿ ಕೃಷ್ಣ, ಶಾಲಿನಿ ರಜನೀಶ್ ಮೇಲೆ ಲಂಚದ ಆರೋಪ  ಮಾಡಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.  ಈ ಸಂಬಂಧ ಆರೋಪಿ ವಿನೋದ್ ಎಂಬುವನನ್ನು ಬಂಧಿಸಲಾಗಿದೆ.

ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಡಿಬಿ  ನಟೇಶ್ ಅವರು ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದು,  ಬಿಡುಗಡೆಗೊಳಿಸಿದ ಆಡಿಯೋದಲ್ಲಿ ನಟೇಶ್ ಮಾತನಾಡಿದ್ದಾರೆ. ಆದರೆ ಮುಂಬಡ್ತಿ ವಿಚಾರ ಸಂಬಂಧ ಶಾಲಿನಿ ರಜನೀಶ್ ಲಂಚ ಪಡೆದಿದ್ದಾರೆ ಎಂದು ವಿನೋದ್ ತನಗೆ ಸುಳ್ಳು ಮಾಹಿತಿ ನೀಡಿದ್ದ. ವಿಚಾರಣೆಯಲ್ಲಿ ಹಣವನ್ನು ಪ್ರಭಾವಿ ವ್ಯಕ್ತಿಗಳಿಗೆ ನೀಡಿರುವುದು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಹೀಗಾಗಿ ಮುಖ್ಯ ಕಾರ್ಯದರ್ಶಿ ಅವರಿಗೆ ಕ್ಷಮೆ ಕೇಳುವೆ ಎಂದು ಮಾಧ್ಯಮದ ಮೂಲಕ ಕ್ಷಮೆಯಾಚಿಸಿದ್ದಾರೆ.

ನಟೇಶ್ ಹಾಗೂ ವಿನೋದ್ ಮಧ್ಯೆ ಹಣಕಾಸಿನ ವಿಚಾರಕ್ಕೆ ಮನಸ್ತಾಪವಿತ್ತು. ತನ್ನನ್ನು ಸಂಪರ್ಕಿಸಿ ಶಾಲಿನಿ ರಜನೀಶ್ ಬಗ್ಗೆ‌ ವಿನೋದ್ ಸುಳ್ಳು ಮಾಹಿತಿ ನೀಡಿದ್ದ. ಈ ಮೂಲಕ ತನ್ನನ್ನು ದುರ್ಬಳಕೆ ಮಾಡಿಕೊಂಡಿದ್ದ. ಬಂಧನದಲ್ಲಿರುವ ವಿನೋದ್ ನೀಡಿದ ದಾಖಲಾತಿ ಆಧರಿಸಿ ಸಿಎಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದೆ ಎಂದು ಸ್ನೇಹಮಯಿ ಕೃಷ್ಣ ಸ್ಪಷ್ಟಪಡಿಸಿದರು.

Key words: Snehamayi Krishna, apologizes, CS Shalini Rajneesh

The post CS ಶಾಲಿನಿ ರಜನೀಶ್ ಬಳಿ ಕ್ಷಮೆಯಾಚಿಸಿದ ಸ್ನೇಹಮಯಿ ಕೃಷ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಜಾತಿಧರ್ಮಗಳನ್ನು ಮೀರಿ ಮಾನವೀಯತೆಯಿಂದ ಸೇವೆ ಸಲ್ಲಿಸಿ- ಸಿಎಂ ಸಿದ್ದರಾಮಯ್ಯ ಕಿವಿಮಾತು

ಬೆಂಗಳೂರು, ಫೆಬ್ರವರಿ ,21,2026 (www.justkannada.in):  ವೈದ್ಯಕೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು....

വിദേശികള്‍ക്ക് മുന്നില്‍ രാജ്യത്തെ നാണംകെടുത്തി; എ.ഐ ഉച്ചകോടിയിലെ കോണ്‍ഗ്രസ് പ്രതിഷേധത്തെ തള്ളി സഖ്യ കക്ഷികള്‍

ന്യൂദല്‍ഹി: എ.ഐ ഇംപാക്ട് ഉച്ചകോടിയില്‍ കേന്ദ്ര സര്‍ക്കാരിനും പ്രധാനമന്ത്രി നരേന്ദ്ര മോദിക്കുമെതിരെ...

NTK: "தேர்தல் அரசியலில்… இரண்டு கட்சிகளும் வெவ்வேறு அல்ல" – திருச்சி மாநாட்டில் சீமான் உரை

'மாற்றத்தை விரும்பும் மக்கள் மாநாடு' என்ற தலைப்பில் நாம் தமிழர் கட்சியின்...

Off The Record : కరీంనగర్ మున్సిపల్ కార్పొరేషన్‌లో హస్తం ఉల్టా

Off The Record : ఉమ్మడి కరీంనగర్ జిల్లాలో మున్సిపల్‌ ఎన్నికల్లో...