20
February, 2026

A News 365Times Venture

20
Friday
February, 2026

A News 365Times Venture

ಕೂಡಲೇ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ಗಳ ತೆರವಿಗೆ ಮೈಸೂರು ಡಿಸಿ ಆದೇಶ

Date:

ಮೈಸೂರು,ಫೆಬ್ರವರಿ,19,2026 (www.justkannada.in): ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಕೂಡಲೇ ತೆರವುಗೊಳಿಸುವಂತೆ ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸಂಘ ಸಂಸ್ಥೆಗಳ, ಸಂಘಟನೆಗಳು, ಸಾರ್ವಜನಿಕರು ಹಾಗೂ ಇತರರು ಸಾರ್ವಜನಿಕ ಪ್ರದೇಶದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್  ಗಳನ್ನು ಅಳವಡಿಸಬೇಕಾದ್ದಲ್ಲಿ ಸಂಬಂಧಿಸಿದ ಪ್ರದೇಶದ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟಾಗದಂತೆ ನಿಗದಿತ ಅವಧಿ ಮುಕ್ತಾಯ ನಂತರ ತೆರವುಗೊಳಿಸಬೇಕಾಗುತ್ತದೆ. ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಿರುವುದು ಜಿಲ್ಲೆಯ ಪಾರಂಪಾರಿಕತೆ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ.

ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) (ತಿದ್ದುಪಡಿ) ಅಧಿನಿಯಮ 2020 ರನ್ವಯ ಕಾಯ್ದೆಯ ಕಲಂ 3 ರನ್ವಯ ಜಾಹೀರಾತುಗಳ ಮೂಲಕ ಅನಧಿಕೃತವಾಗಿ ವಿರೂಪಗೊಳಿಸುವುದಕ್ಕೆ ಗರಿಷ್ಠ 6 ತಿಂಗಳುಗಳ ಸೆರೆವಾಸದ ದಂಡನೆ ಅಥವಾ ಗರಿಷ್ಠ ಒಂದು ಸಾವಿರ ರೂಗಳವರೆಗೆ ದಂಡ ವಸೂಲಾತಿ ಅಥವಾ ಎರಡು ವಿಧವಾದ ದಂಡನೆ ವಿಧಿಸಲು ಅವಕಾಶವಿದೆ.

ಕರ್ನಾಟಕ ಮುನ್ಸಿಪಲ್ ಆಕ್ಟ್ 1964ರ ಕಲಂ 133 ಹಾಗೂ 136 ರಲ್ಲಿ ಕ್ರಮವಾಗಿ ಜಾಹೀರಾತು ಹಾಗೂ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಬಗ್ಗೆ ಸ್ಪಷ್ಟವಾದ ಆದೇಶವಿರುತ್ತದೆ. ಆದ್ದರಿಂದ ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳ, ಸಂಘಟನೆಗಳು, ಸಾರ್ವಜನಿಕರು, ಹಾಗೂ ಇತರರು ಸಾರ್ವಜನಿಕ ಪ್ರದೇಶದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಲು ಅನುಮತಿ ನೀಡುವಾಗ ಕಾರ್ಯಕ್ರಮಗಳ ನಿಗದಿತ ಅವಧಿಗೆ ಮಾತ್ರ ಸೀಮಿತಗೊಳಿಸಿ, ಕಾರ್ಯಕ್ರಮಗಳು ಮುಕ್ತಾಯವಾದ ನಂತರ ಸಂಬoಧಪಟ್ಟವರೇ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ ಸೂಚಿಸಿದ್ದಾರೆ.

ಒಂದು ವೇಳೆ ತೆರವುಗೊಳಿಸದಿದ್ದರೇ ಸಂಬಂಧಪಟ್ಟವರ ಮೇಲೆ Karnataka open places (prevention of disfigurement) act 1981 ಹಾಗೂ ಕರ್ನಾಟಕ ಮುನ್ಸಿಪಾಲಿಟಿಗಳ ಅಧಿನಿಯಮ 1964 ಕಾಯ್ದೆಗಳನ್ವಯ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Key words: Mysore DC, orders,  removal, flexes, banners

The post ಕೂಡಲೇ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ಗಳ ತೆರವಿಗೆ ಮೈಸೂರು ಡಿಸಿ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಅತಿಯಾದ ಮೊಬೈಲ್ ಬಳಕೆ, ಅನಾರೋಗ್ಯಗಳಿಗೆ ರಹದಾರಿ- ಡಾ. ನಿಶ್ಚಲಾನಂದನಾಥ ಸ್ವಾಮೀಜಿ

ಮಂಡ್ಯ,ಫೆಬ್ರವರಿ,20,2026 (www.justkannada.in):  ಜನಸಾಮಾನ್ಯರು ಅತಿಯಾದ ಮೊಬೈಲ್ ಬಳಕೆ ಮಾಡುತ್ತಿರುವ ಪರಿಣಾಮವಾಗಿ...

പ്രധാനമന്ത്രി രാജ്യത്തിന്റെ അഭിമാനം വിറ്റ് തുലച്ചു; എ. ഐ ഉച്ചകോടിയില്‍ യൂത്ത് കോണ്‍ഗ്രസ് പ്രതിഷേധം

ന്യൂദല്‍ഹി: എ.ഐ ഉച്ചക്കോടിയില്‍ പ്രധാനമന്ത്രി നരേന്ദ്ര മോദിക്കെതിരെ യൂത്ത് കോണ്‍ഗ്രസ് പ്രതിഷേധം....

Viral Video: ప్లీజ్.. మీ గుండె గట్టిదైతేనే వీడియో చూడండి.! నిజమైన పాములతో ‘స్నేక్స్ అండ్ లాడర్స్’ ఆట..

Viral Video: చిన్నప్పుడు మనందరం ‘స్నేక్స్ అండ్ లాడర్స్’ (నిచ్చెన-పాముల) ఆట...