20
February, 2026

A News 365Times Venture

20
Friday
February, 2026

A News 365Times Venture

ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ವಾಪಸ್, ಮಾ.2ಕ್ಕೆ ಡೆಡ್ ಲೈನ್: ಮುಖಂಡರ ನಡೆಗೆ ಆಕ್ರೋಶ

Date:

ಬೆಂಗಳೂರು,ಫೆಬ್ರವರಿ,19,2026 (www.justkannada.in): ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜಂಟಿ ಕ್ರಿಯಾ ಸಮಿತಿ ವತಿಯಿಂದ ಮುಷ್ಕರ ನಡೆಸಲಾಗುತ್ತಿತ್ತು. ಈ ಮಧ್ಯೆ ಸರ್ಕಾರದ ವತಿಯಿಂದ ಕೆಎಸ್ ಆರ್ ಟಿಸಿ ಎಂಡಿ ಅಕ್ರಂ ಪಾಷ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆ ಆಲಿಸಿ ಭರವಸೆ ನೀಡಿದ್ದರು.

ಈ ಮಧ್ಯೆ ಜಂಟಿ ಕ್ರಿಯಾ ಸಮಿತಿ ಮುಖಂಡರು  ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದು ಬೇಡಿಕೆಗಳನ್ನ ಈಡೇರಿಸಲು ಸರ್ಕಾರಕ್ಕೆ ಮಾರ್ಚ್ 2ರವರೆಗೆ ಗಡುವು ನೀಡಿದ್ದಾರೆ. ಮಾರ್ಚ್ 2ರೊಳಗೆ ಬೇಡಿಕೆ ಈಡೇರಿಸದಿದ್ದರೇ ಮತ್ತೆ ಮುಷ್ಕರ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

 ಮುಖಂಡ ನಿರ್ಧಾರಕ್ಕೆ ಪ್ರತಿಭಟನಾನಿರತ ಸಾರಿಗೆ ನೌಕರರ ಆಕ್ರೋಶ

ಜಂಟಿ ಕ್ರಿಯಾ ಸಮಿತಿ ಮುಖಂಡರು ತೆಗೆದುಕೊಂಡ ಈ ನಿರ್ಧಾರಕ್ಕೆ ಪ್ರತಿಭಟನಾನಿರತ ಸಾರಿಗೆ ನೌಕರರ ಆಕ್ರೋಶ ವ್ಯಕ್ತಪಡಿಸಿದ್ದು ಮುಷ್ಕರ ನಿಲ್ಲಿಸದಂತೆ ಆಗ್ರಹಿಸಿದ್ದಾರೆ. ವೇದಿಕೆಯ ಮೇಲೆಯೇ ಆಗಮಿಸಿ ಸಾರಿಗೆ ನೌಕರರು ಕಿಡಿಕಾರಿದ್ದಾರೆ.

Key words: Transport workers, strike, deadline, March 2

The post ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ವಾಪಸ್, ಮಾ.2ಕ್ಕೆ ಡೆಡ್ ಲೈನ್: ಮುಖಂಡರ ನಡೆಗೆ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತ:  ಸವಾರ ಸಾವು: ಪತ್ನಿ ಸ್ಥಿತಿ ಗಂಭೀರ

ಮಡಿಕೇರಿ, ಫೆಬ್ರವರಿ,19,2026 (www.justkannada.in): ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳುವ...

നല്ല ചൂട് പൊറോട്ടയും ബീഫും; ‘ദി കേരള സ്റ്റോറി’ക്കെതിരെ എസ്.എഫ്.ഐ ക്യാമ്പയിന്‍

തിരുവനന്തപുരം: ‘ദി കേരള സ്റ്റോറി’ക്കെതിരെ ക്യാമ്പയിനുമായി എസ്.എഫ്.ഐ. ‘നല്ല ചൂട് പൊറോട്ടയും...

சீமான் எடுத்த முடிவு; 21-ம் தேதியை எதிர்நோக்கும் நாதக-வினர்; பரபரக்கும் மாநாட்டு ஏற்பாடுகள்!

திருச்சியில் வரும் பிப்ரவரி 21-ம் தேதி மக்கள் மாநாட்டை நடத்துகிறது, நாம்...