11
February, 2026

A News 365Times Venture

11
Wednesday
February, 2026

A News 365Times Venture

ಹೇಡಿ ಎಂಬ ಹೇಳಿಕೆ: ಸಿಎಂ ಸಿದ್ದರಾಮಯ್ಯ ತಕ್ಷಣವೇ ಪ್ರಧಾನಿ ಮೋದಿ ಬಳಿ ಕ್ಷಮೆ ಕೇಳಲಿ- ಛಲವಾದಿ ನಾರಾಯಣಸ್ವಾಮಿ ಆಗ್ರಹ

Date:

ಬೆಂಗಳೂರು,ಫೆಬ್ರವರಿ,10,2026 (www.justkannada.in):  ಪ್ರಧಾನಿ ಮೋದಿ ಹೇಡಿ ಎಂಬ ಹೇಳಿಕೆ ವಿಚಾರ ಸಿಎಂ ಸಿದ್ದರಾಮಯ್ಯ ತಕ್ಷಣವೇ ದೇಶದ ಮತ್ತು ಪ್ರಧಾನಿ ನರೇಂದ್ರ ಮೋದಿ ಬಳಿ ಕ್ಷಮೆ ಕೇಳಬೇಕು ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ,  ಸಿಎಂ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡು ಹೀಗೆ ಮಾತಾಡಿದ್ದಾರಾ ಅಥವಾ ರಾಹುಲ್ ಗಂಧಿ ಓಲೈಸಲು ಹೀಗೆ ಮಾತಾಡಿದ್ದಾರಾ? ಅಥವಾ ತಲೆಕೆಟ್ಟು ಸಿಎಂ ಸಿದ್ದರಾಮಯ್ಯ ಹೀಗೆ ಮಾತಾಡಿದ್ದಾರಾ?  ಸಿಎಂಗೆ ಪರೀಕ್ಷೆ ಮಾಡಿಸುವ ಅಗತ್ಯವಿದೆ. ಸಿಎಂ ತಕ್ಷಣ ದೇಶದ ಪ್ರಧಾನಿ ಮೋದಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ನಾಯಕರು ಇತ್ತೀಚೆಗೆ  ನಾಲಿಗೆಯ ಬೆಲೆ ಗೌರವ ಕಳೆಯುತ್ತಿದ್ದಾರೆ.  ಇಂಥ ನಾಲಿಗೆಗೆ ಗೌರವವಿಲ್ಲ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಹೇಡಿ ಎಂಬ ಕೆಟ್ಟ ಪದ ಬಳಸಿದ್ದಾರೆ. ಇಷ್ಟೊಂದು ಕೆಟ್ಟಪದಗಳಿಂದ ನಿಂದಿಸಿರುವುದು ವಿಪರ್ಯಾಸ.  ಪ್ರಿಯಾಂಕ್ ಖರ್ಗೆ ಕೂಡ ಹಾಗೆಯೇ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇವರನ್ನು ಮೋದಿ ಅಭಿಮಾನಿಗಳು ಕುನ್ನಿಗೆ ಹೋಲಿಸಿದ್ದಾರೆ.  ನಾನು ಹಾಗೆ ಹೇಳಲ್ಲ.  ನಾನು ಇವರಿಗೆ ಕುನ್ನಿ ಎಂಬ ಪದ ಬಳಸಲ್ಲ. ವ್ಯವಸ್ಥೆಯಲ್ಲಿ  ಒಬ್ಬರಿಗೊಬ್ಬರು ಗೌರವಿಸಬೇಕು ಸಿಎಂ ಸಿದ್ದರಾಮಯ್ಯ ಪ್ರಿಯಾಂಕ್ ಖರ್ಗೆ ಇಬ್ಬರು ಕುನ್ನಿಗಳು ಅಂತಾ ನಾನು ದೇವನಹಳ್ಳಿಗೆ ಹೋದಾಗ ಅಲ್ಲಿದ್ದ ಯುವಕರು ಹೇಳುತ್ತಿದ್ದರು ಮೋದಿ ಹೇಡಿ ಎಂದಿರುವ ಈ ಕುನ್ನಿಗಳಿಗೆ ಯಾರು ಹೆದರಿಕೊಳ್ಳಬೇಕು ಎನ್ನುತ್ತಿದ್ದರು ಎಂದು ಹೇಳಿದರು.

ಸರ್ಕಾರಿ ಖಜಾನೆ ಖಾಲಿ: 2.8 ಲಕ್ಷ ಹುದ್ದೆಗಳು ಖಾಲಿ ಇದ್ರೂ ಎರಡುವರೆ ವರ್ಷದಿಂದ ನೇಮಕಾತಿ ಇಲ್ಲ

ಇದೇ ವೇಳೆ ಎರಡುವರೆ ವರ್ಷದಿಂದ ಸರಿಯಾಗಿ ನೇಮಕಾತಿಗಳನ್ನ ಮಾಡದೇ ಕುಂಟುನೆಪ ಹೇಳುತ್ತಿರುವ ಸರ್ಕಾರದ ವಿರುದ್ದ ಕಿಡಿಕಾರಿದ ಛಲವಾದಿ ನಾರಾಯಣಸ್ವಾಮಿ, ಎರಡುವರೆ ವರ್ಷದಿಂದ ಬ್ಯಾಕ್ ಲಾಗ್ ಹುದ್ದೆ ಭರ್ತಿ ಇಲ್ಲ. ರಾಜ್ಯದಲ್ಲಿ  2.8 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ.  ಒಳ ಮೀಸಲಾತಿ ಜಾರಿ ಆಗಲಿಲ್ಲ. ಈ  ಸಂಬಂಧ ವಿಧೇಯಕ ರಾಜ್ಯಪಾಲರ  ಬಳಿ ಇದೆ ಸರ್ಕಾರ ಖಜಾನೆ ಖಾಲಿಯಾಗಿದೆ  ನೇಮಕಾತಿಗಳು ನಡೆಯುತ್ತಿಲ್ಲ ಎಂದು ಗುಡುಗಿದರು.

Key words:  statement, CM Siddaramaiah, PM Modi, Chalavadi Narayanaswamy

The post ಹೇಡಿ ಎಂಬ ಹೇಳಿಕೆ: ಸಿಎಂ ಸಿದ್ದರಾಮಯ್ಯ ತಕ್ಷಣವೇ ಪ್ರಧಾನಿ ಮೋದಿ ಬಳಿ ಕ್ಷಮೆ ಕೇಳಲಿ- ಛಲವಾದಿ ನಾರಾಯಣಸ್ವಾಮಿ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ವಿಳಂಬ ಮಾಡದೇ ಹೈಕಮಾಂಡ್ ತಮ್ಮ ನಿರ್ಣಯ ಹೇಳಬೇಕು- ಶಾಸಕ ದೇಶಪಾಂಡೆ

ಬೆಂಗಳೂರು,ಫೆಬ್ರವರಿ,10,2026 (www.justkannada.in):  ರಾಜ್ಯದಲ್ಲಿ ಮತ್ತೆ ಸಿಎಂ ಕುರ್ಚಿ ವಿಚಾರ ಚರ್ಚೆಯಾಗುತ್ತಿದ್ದು...

ഏറ്റവും വില കുറച്ച് ലഭിക്കുന്നിടത്ത് നിന്നും ഇന്ത്യ എണ്ണ വാങ്ങും; പാര്‍ലമെന്ററി പാനലിനോട് കേന്ദ്രം

ന്യൂദല്‍ഹി: മികച്ച ഗുണനിലവാരത്തില്‍ ഏറ്റവും വിലകുറച്ച് ലഭിക്കുന്നിടത്തു നിന്നും ഇന്ത്യ ക്രൂഡ്...

TVK: “100-க்கும் மேற்பட்ட ரெளடிகள் அராஜகத் தாக்குதல்" – தவெக தலைவர் விஜய் காட்டமான பதிவு!

தமிழ்நாட்டில் நடைபெற உள்ள சட்டசபை தேர்தலில் விஜய்யின் தமிழக வெற்றிக் கழகம்...

Monalisa: తన ఫస్ట్‌ మూవీ రెమ్యునరేషన్‌తో స్కూల్‌ పెడుతోన్న మోనాలిసా..

Monalisa: ప్రయాగ్‌రాజ్‌లో జరిగిన మహా కుంభమేళాలో దండలు అమ్ముతూ ఒక్కసారిగా దేశవ్యాప్తంగా...