ಹುಣಸೂರು, ನವೆಂಬರ್,12,2025 (www.justkannada.in): ಇನ್ನರ್ ವೀಲ್ ವಿಶ್ವದ ಅತಿದೊಡ್ಡ ಮಹಿಳಾ ಸ್ವಯಂ ಸೇವಾ ಸರ್ಕಾರೇತರ ಸಂಸ್ಥೆಯಾಗಿದ್ದು, ಸಮಾಜದ ನಿರ್ಗತಿಕ ಮತ್ತು ಹಿಂದುಳಿದ, ದುರ್ಬಲ ವರ್ಗಗಳಿಗೆ ಸಹಾಯ ಮಾಡಲು ಮತ್ತು ಸೇವೆ ಸಲ್ಲಿಸಲು ಶ್ರಮಿಸುತ್ತಿದೆ. ಇನ್ನರ್ ವೀಲ್ ನ ಧ್ಯೇಯವಾಕ್ಯವೇ ಸ್ನೇಹ ಮತ್ತು ಸೇವೆ ಎಂದು ಇನ್ನರ್ ವೀಲ್ 318ರ ಜಿಲ್ಲಾ ಚೇರ್ಮೇನ್ ಶಬರೀಕಡಿದಾಳು ಅವರು ಹೇಳಿದರು.
ನಗರದ ರೋಟರಿ ಭವನದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ , ಸಮುದಾಯದ ಸಮಸ್ಯೆಗಳ ಅರಿತು ನಮ್ಮ ಕ್ಲಬ್ ಗಳು ಯಾವುದೇ ಸ್ವಾರ್ಥವಿಲ್ಲದೆ ಮಾಡುವ ಸೇವೆಯೇ ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹುಣಸೂರು ಇನ್ನರ್ ವೀಲ್ ಕ್ಲಬ್ ಉತ್ತಮವಾಗಿ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕ ಶಾಲೆಗೆ ಶುದ್ದ ಕುಡಿಯುವ ನೀರು ಘಟಕ ನೀಡಲಾಯಿತು, ಶಾಲಾ ಮಕ್ಕಳಿಗೆ ಕ್ರೀಡಾ ಬಹುಮಾನ ನೀಡಲಾಯಿತು. ಜೊತೆಗೆ ಮೈಸೂರು ಜಿಲ್ಲಾ ಕನ್ನಡರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಧರ್ಮಾಪುರ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ತೇನ್ ಮೋಳಿ ತಂಗಮಾರಯಪ್ಪನ್, ನಿಕಟ ಪೂರ್ವ ಅಧ್ಯಕ್ಷೆ ಸ್ಮೀತಾ ದಯನಂದ್ , ಸದಸ್ಯರಾದ ಡಾ.ರಾಜಶೇಶ್ವರಿ, ಶಿವಕುಮಾರಿ, ಡಾ.ಸಂಗೀತಾ. ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಸದಸ್ಯ ಮಹೇಶ್, ಇನ್ನರ್ ವೀಲ್ಸ್ ನಿರ್ದೇಶಕರಾದ ಜಯಲಕ್ಷ್ಮೀ, ಡಾ.ಮಂಜುಳ, ರೋಟರಿ ಶಾಲಾ ಮುಖ್ಯ ಶಿಕ್ಷಕಿ ದೀಪಾ ಎಲ್, ಸುಜಾತ, ಅಂಜು,ಭಾಗ್ಯ, ಪ್ರಭ, ಸುಮಿತ್ರಾ ಮತ್ತಿತರು ಉಪಸ್ಥಿತರಿದ್ದರು.
Key words: Hunasur, Inner Wheel, service – Sabari Kadidalu
The post ಇನ್ನರ್ ವೀಲ್ ನ ಧ್ಯೇಯವಾಕ್ಯವೇ ಸ್ನೇಹ ಮತ್ತು ಸೇವೆ- ಶಬರೀಕಡಿದಾಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





