ಬೆಂಗಳೂರು,ನವೆಂಬರ್,11,2025 (www.justkannada.in): ದೆಹಲಿ ಕೆಂಪುಕೋಟೆ ಬಳಿ ಕಾರು ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದ ಸಚಿವ ಪ್ರಿಯಾಂಕ್ ಖರ್ಗೆಗೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಿ.ಟಿ ರವಿ, ದುರ್ಬುದ್ದಿ ಇರುವವರಿಗೆ ಬುದ್ದಿ ಹೇಳಲು ಆಗಲ್ಲ ಮೂರ್ಖರಿಗೆ ಬುದ್ದಿ ಹೇಳಿ ಏನು ಪ್ರಯೋಜನವಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರತಿದಿನ ಸ್ಪೋಟ ಸುದ್ದಿ ಬರುತ್ತಿತ್ತು. 2014ಕ್ಕೂ ಮುನ್ನ ವಾರ ತಿಂಗಳಿಗೊಂದು ಬಾಂಬ್ ಸ್ಪೋಟ್ ಆಗುತ್ತಿತ್ತು. ಈಗ ಮತ್ತೆ ಉಗ್ರರು ಬಾಲ ಬಿಚ್ಚಿದ್ದಾರೆ. ಇದರಲ್ಲಿ ವೈದ್ಯರು ಭಾಗಿಯಾಗಿರುವುದು ದುರ್ದೈವ. ಭಯೋತ್ಪಾದನೆಯನ್ನ ಬೇರು ಸಮೇತ ಕಿತ್ತು ಹಾಕಬೇಕು ಮಾನವ ಕುಲಕ್ಕೆ ಅದು ಮಾರಕ ಎಂದರು.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಾವು ಆಪರೇಷನ ಸಿಂಧೂರ ಮೂಲಕ ಉತ್ತರ ಕೊಟ್ಟಿದ್ದೇವೆ. ಪುಲ್ವಾಮಾ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ನೀಡಿದ್ದೇವೆ. ಜೈಲಿನಲ್ಲಿ ಉಗ್ರರಿಗೆ ಮೊಬೈಲ್ ಕೊಡುತ್ತಿರುವುದು ಯಾರು? ಜೈಲು ರೆಸಾರ್ಟ್ ಆಗಿ ಪರಿವರ್ತನೆ ಆಗಿರುವುದು ದುರ್ದೈವ . ನಿಮ್ಮಿಂದ ನಾವು ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಸಿ.ಟಿ ರವಿ ಟಾಂಗ್ ಕೊಟ್ಟರು.
Key words: CT Ravi, Priyank Kharge, Prime Minister, Modi, Amit Shah
The post ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದ ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟ ಸಿ.ಟಿ ರವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





