4
May, 2026

A News 365Times Venture

4
Monday
May, 2026

A News 365Times Venture

ಕಬ್ಬಿಗೆ ಬೆಲೆ ನಿಗದಿ: ಹೋರಾಟ ಹಿಂಪಡೆದು ರೈತರ ಸಂಭ್ರಮಾಚರಣೆ: ಮತ್ತೊಂದೆಡೆ ರೈತರಿಂದ ಪ್ರತಿಭಟನೆ

Date:

ಬೆಳಗಾವಿ,ನವೆಂಬರ್,8,2025 (www.justkannada.in): ಪ್ರತಿಟನ್  ಕಬ್ಬಿಗೆ 3300 ರೂಪಾಯಿ ಬೆಂಬಲ ಬೆಲೆ  ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹಿನ್ನೆಲೆಯಲ್ಲಿ  ಬೆಳಗಾವಿ ಗುರ್ಲಾಪುರದಲ್ಲಿ ರೈತರು ನಡೆಸುತ್ತಿದ್ದ ಹೋರಾಟವನ್ನ ಹಿಂಪಡೆದು ಸಂಭ್ರಮನಿಸಿದ್ದಾರೆ.

ಕಬ್ಬಿಗೆ 3500 ರೂ. ನಿಗದಿಗೆ ಆಗ್ರಹಿಸಿ ಕಬ್ಬುಬೆಳಗಾರರು ಬೃಹತ್ ಹೋರಾಟ ನಡೆಸಿದ್ದು ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ನಿನ್ನೆ ಸಭೆ ನಡೆಸಿ ಪ್ರತಿಟನ್  ಕಬ್ಬಿಗೆ 3300 ರೂಪಾಯಿ ನೀಡುವುದಾಗಿ ಘೋಷಿಸಿತ್ತು.  ಇದೀಗ ಇಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಬೆಳಗಾವಿ ಗುರ್ಲಾಪುರದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತ ಮುಖಂಡ ಚೂನಪ್ಪ ಪೂಜಾರಿ ಅವರುಗೆ ಸರ್ಕಾರದ ಆದೇಶ ಪತ್ರ ನೀಡಿದರು. ಕಬ್ಬು ಬೆಳೆಗೆ ಬೆಲೆ ನಿಗದಿಗೆ ಸರ್ಕಾರ ಒಪ್ಪಿದ್ದು, ಹೋರಾಟ ಕೈಬಿಡುವಂತೆ  ಮನವ ಮಾಡಿದರು. ಸರ್ಕಾರದ ಆದೇಶ ಪ್ರತಿ ಸಿಗುತ್ತಿದಂತೆಯೇ ಕಬ್ಬು ಬೆಳೆಗಾರರು ಪ್ರತಿಭಟನೆ ಹಿಂಪಡೆದು ಸಂಭ್ರಮಾಚರಿಸಿದರು.

ಬಾಗಲಕೋಟೆಯಲ್ಲಿ ಮುಂದುವರೆದ ಪ್ರತಿಭಟನೆ

ಪ್ರತಿಟನ್  ಕಬ್ಬಿಗೆ 3300 ರೂಪಾಯಿ ಬೆಂಬಲ ಬೆಲೆ  ನಿಗದಿ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ 3,500 ರೂ ನಿಗದಿ ಮಾಡಲೇಬೇಕೆಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.

ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ರೈತರು ರಸ್ತೆ ತಡೆದು  ಪ್ರತಿಭಟನೆ ನಡೆಸಿದ್ದು,  ಸ್ಥಳದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರೈತರು ಸೇರಿದ್ದಾರೆ.  ಪ್ರತಿ ಟನ್ ಕಬ್ಬಿಗೆ 3500 ರೂ ಮತ್ತು ಬಾಕಿ ನೀಡುವಂತೆ ಒತ್ತಾಯ ಮಾಡಿದ್ದಾರೆ.

Key words: Sugarcane price, fixing, Farmers, celebrate,

The post ಕಬ್ಬಿಗೆ ಬೆಲೆ ನಿಗದಿ: ಹೋರಾಟ ಹಿಂಪಡೆದು ರೈತರ ಸಂಭ್ರಮಾಚರಣೆ: ಮತ್ತೊಂದೆಡೆ ರೈತರಿಂದ ಪ್ರತಿಭಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഖലിസ്ഥാനെ തീവ്രവാദികളെ രാജ്യസുരക്ഷാ ഭീഷണിയായി പ്രഖ്യാപിച്ച് കാനഡ

  ഒട്ടാവ: ഖലിസ്ഥാന്‍ തീവ്രവാദികളെ രാജ്യസുരക്ഷാ ഭീഷണിയായി പ്രഖ്യാപിച്ച് കാനഡ. രഹസ്യാന്വേഷണ...

4 States Election Results: அனல் பறக்கும் அரசியல் களம் – வெல்லப் போவது யார்? – நாளை வாக்கு எண்ணிக்கை | Live Updates

புதுச்சேரி, கேரளா மற்றும் அஸ்ஸாம் ஆகிய மூன்று மாநிலச் சட்டமன்றத் தேர்தல்கள்...

Mamata Banerjee: ఫలితాలకు ముందే దీదీ షాకింగ్ నిర్ణయం.. సీఎం నివాసం ఖాళీ..?

పశ్చిమ బెంగాల్ రాజకీయాల్లో ప్రస్తుతం ఒక వార్త తీవ్ర సంచలనం సృష్టిస్తోంది....

മുഖ്യമന്ത്രി ഫേസ്ബുക്ക് ബയോ തിരുത്തിയത് ഇന്നല്ല, വോട്ടെണ്ണല്‍ കാരണവുമല്ല; പി.ബി അംഗമെന്ന് മാറ്റിയത് മാര്‍ച്ച് 16ന്

തിരുവനന്തപുരം: വോട്ടെണ്ണലിന് തൊട്ടുമുമ്പ് മുഖ്യമന്ത്രി പിണറായി വിജയന്‍ തന്റെ ഫേസ്ബുക്ക് ബയോ തിരുത്തിയെന്ന...