ಬೆಂಗಳೂರು,ನವೆಂಬರ್,8,2025 (www.justkannada.in): ಕರ್ನಾಟಕ ಬಿಹಾರ ಮಹಾರಾಷ್ಟ್ರ ಹರಿಯಾಣದಲ್ಲಿ ಮತಗಳ್ಳತನವಾಗಿದೆ. ಆದರೆ ಚುನಾವಣಾ ಆಯೋಗ ತನಿಖೆ ಮಾಡದೆ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಅಡಿಯಾಳಾಗಿ ಕೆಲಸ ಮಾಡುತ್ತಿದೆ ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಮತಗಳ್ಳತನದ ವಿರುದ್ದ ಸಹಿ ಅಭಿಯಾನ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ, ಬಿಹಾರ, ಮಹಾರಾಷ್ಟ್ರ ಹರಿಯಾಣದಲ್ಲಿ ಮತಗಳ್ಳತನವಾಗಿದೆ. ಇಷ್ಟೆಲ್ಲಾ ನಡೆದರೂ ಚುನಾವಣಾ ಆಯೋಗ ತನಿಖೆ ಮಾಡಿಲ್ಲ ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಸೂಚನೆಯಂತೆ ಕೆಲಸ ಮಾಡುತ್ತಿದೆ ಕೇಂದ್ರ ಹೇಳಿದ ಹಾಗೆ ಇವರು ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರ ಸಂಸ್ಥೆಗಳನ್ನು ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಡಿ ಐಟಿ ಈಗ ಚುನಾವನಾ ಆಯೋಗ ದುರ್ಬಳಕೆಯಾಗುತ್ತಿದೆ ಕೇಂದ್ರದ ಅಡಿಯಾಳಾಗಿ ಕೇಂದ್ರ ಚುನಾವಣಾ ಆಯೋಗ ಕೆಲಸ ಮಾಡುತ್ತಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಮತ ಹಾಕಿರೋರು ಬಿಹಾರದಲ್ಲಿ ಮತ ಹಾಕುತ್ತಾರೆ. ಆನೇಕ ರಾಜ್ಯಗಳಲ್ಲಿ 1ಮತಕ್ಕಿಂತ ಹೆಚ್ಚು ಮತ ಹಾಕೋಕೆ ಆಗಲ್ಲ. ದೆಹಲಿ ಬಿಹಾರದಲ್ಲೂ ಮತ ಹಾಕತ್ತಾರೆ ಇದು ಸಂವಿಧಾನ ಬಾಹಿರ. ಚುನಾವಣಾ ಆಯೋಗವು ನಿಷ್ಮಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು ಸಂವಿಧಾನದಲ್ಲಿ ಆಯೋಗ ಒಂದು ಸ್ವತಂತ್ರ ಸಂಸ್ಥೆಯಾಗಿದೆ ಚುನಾವಣಾ ಆಯೋಗವು ಯಾರ ಪ್ರಭಾವಕ್ಕೂ ಒಳಗಾಗಬಾರದು ಎಂದರು.
ಬಿಜೆಪಿ ಸುಳ್ಳಿನ ಸರದಾರ ಅಷ್ಟೆ ಅಲ್ಲ ಸುಳ್ಳೇ ಅವರ ಮನೆ ದೇವರು ಮತಗಳ್ಳತನ ಮಾಡುವಲ್ಲೂ ನಿಸ್ಸಿಮರು ಅಂತಾ ಸಾಬೀತು ಪಡಿಸಿದ್ದಾರೆ ಮತಗಳ್ಳತನ ಮಾಡಿಯೇ ಹಲವೆಡೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಲೋಕಸಭೆ ವಿಧಾನಸಭೆ ಚುನಾವಣೆಯಲ್ಲೂ ಮತಗಳ್ಳತನ ಮಾಡಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಮತಗಳ್ಳತನ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
Key words: Election Commission, democracy, Vote, CM Siddaramaiah
The post ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆ, ಅಡಿಯಾಳಾಗಿ ಕೆಲಸ: ಪ್ರಜಾಪ್ರಭುತ್ವಕ್ಕೆ ಮಾರಕ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





