26
March, 2026

A News 365Times Venture

26
Thursday
March, 2026

A News 365Times Venture

ದಯವಿಟ್ಟು ತಂದೆ ಶವ ಕೊಡಿ; ಪುತ್ರನ ಆಕ್ರೋಶ.

Date:

ಮೈಸೂರು,ಅಕ್ಟೋಬರ್,27,2025 (www.justkannada.in):  ದಯವಿಟ್ಟು ನನಗೆ ನಮ್ಮ ಅಪ್ಪನ ಶವ ಕೊಟ್ಟು ಬಿಡಿ ಸಾಕು ಯಾವ ಮಿನಿಸ್ಟರ್ ಬರೋದು ಬೇಡ, ನಮಗ್ಯಾವ ಪರಿಹಾರವೂ ಬೇಡ ಹೀಗೆ ಅಕ್ರೋಶ ವ್ಯಕ್ತಪಡಿಸಿದ್ದು ನಿನ್ನೆ ಹುಲಿ ದಾಳಿಗೆ ಬಲಿಯಾದ  ರೈತ ರಾಜಶೇಖರ್ ಅವರ ಪುತ್ರ  ಶಿವಾನಂದ.

ನಿನ್ನೆ  ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ದನ ಮೇಯಿಸಲು ಹೋಗಿದ್ದ ರೈತ ರಾಜಶೇಖರ್(58) ಎಂಬುವವರ ಮೇಲೆ ಹುಲಿ ದಾಳಿ ಮಾಡಿತ್ತು. ಈ ವೇಳೆ  ರಾಜಶೇಖರ್  ಸಾವನ್ನಪ್ಪಿದ್ದರು.

ಪದೇ ಪದೇ ಹುಲಿ ದಾಳಿ ಹಿನ್ನೆಲೆಯಲ್ಲಿ  ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ತಡರಾತ್ರಿವರೆಗೂ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ನಂತರ ಶವವನ್ನ ಪೋಸ್ಟ್ ಮಾರ್ಟಮ್ ಮಾಡಲು ಮೈಸೂರಿಗೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಮೃತ ರಾಜಶೇಖರ್ ಅವರ ಪುತ್ರ ಶಿವಾನಂದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪುತ್ರ ಶಿವಾನಂದ, ನಿನ್ನೆ ತಡರಾತ್ರಿವರೆಗೂ ಸ್ಥಳದಲ್ಲೇ ಶವವಿಟ್ಟು ಪ್ರತಿಭಟನೆ ಮಾಡಿದ್ದವು. ಸರಗೂರಿನಲ್ಲಿ ಪೋಸ್ಟ್ ಮಾರ್ಟಂ ಮಾಡುತ್ತೇವೆ ಅಂತ ಮೈಸೂರಿಗೆ ತಂದಿದ್ದಾರೆ. ಯಾವ ಕಾರಣಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಗೂರು, ಹೆಚ್.ಡಿ ಕೋಟೆ ಬಿಟ್ಟು ಮೈಸೂರಿಗೆ ಶವ ಯಾಕೆ ತಂದಿರಿ? ದಯಮಾಡಿ ನನಗೆ ನಮ್ಮ ತಂದೆಯ ಶವ ಕೊಡಿ. ನಿಮ್ಮ ಮಿನಿಸ್ಟರ್ ಬರ್ತಾರೆ ಅಂತ ಶವ ಅಲ್ಲಿಂದ ಮೈಸೂರಿಗೆ ತಂದರಾ? ನಿನ್ನೆ 10 ಕಿಲೋ ಮೀಟರ್ ದೂರದಿಂದ ಮಿನಿಸ್ಟರ್ ಈಶ್ವರ ಖಂಡ್ರೆ ಬರಲಿಲ್ಲ. ನಮ್ಮ ತಂದೆ ಸಾವಿಗೆ ಅಲ್ಲಿನ ಅರಣ್ಯ ಅಧಿಕಾರಿಗಳೇ ಕಾರಣ. ಅವರು ಅಮಾನತ್ತು ಆಗಬೇಕು. ನಾವು ಕಾಡಿಗೆ ಹೋಗಿಲ್ಲ. ಕಾಡಿನಿಂದ 30 ಕಿಲೋ ಮೀಟರ್ ದೂರ ಬಂದು ಹುಲಿ ದಾಳಿ ಮಾಡಿದೆ ಎಂದು ಕಿಡಿಕಾರಿದರು.

ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಹಿನ್ನಲೆಯಲ್ಲಿ  ಹುಲಿಗಳು ಕಾಡಿನಿಂದ ನಾಡಿಗೆ ಬಂದಿದೆ. ಇದನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡ್ತಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳ ಹಿತಕ್ಕಾಗಿ  ರೈತರ ಸಾವಿಗೆ ಬೆಲೆ ಯಾಕೆ ಕಟ್ಟುತ್ತೀರಿ?  ಥೂ, ನಿಮ್ಮ ಜನ್ಮಕ್ಕೆ ನಾಚಿಕೆ ಆಗಲ್ವಾ? ಅಧಿಕಾರಿಗಳು, ರಾಜಕಾರಣಿಗಳ ದಾಹಕ್ಕೆ ರೈತರ ಸಾವಾಗಿದೆ ಎಂದು ಶಿವಾನಂದ್ ಹರಿಹಾಯ್ದರು.

Key words: Mysore, tiger, attack farmer, Hospital, body

The post ದಯವಿಟ್ಟು ತಂದೆ ಶವ ಕೊಡಿ; ಪುತ್ರನ ಆಕ್ರೋಶ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಟಿಪ್ಪರ್- ಖಾಸಗಿ ಬಸ್ ಡಿಕ್ಕಿ: 13 ಮಂದಿ ಸಜೀವ ದಹನ

ಪ್ರಕಾಶಂ, ಮಾರ್ಚ್,26,2026 (www.justkannada.in):  ಟಿಪ್ಪರ್ ಮತ್ತು ಖಾಸಗಿ ಬಸ್ ಗಳ...

ഹോർമുസ് കടലിടുക്കിൽ സാഹചര്യങ്ങൾ പഴയപോലെയാകില്ല: ഇറാൻ

ടെഹ്‌റാൻ: ഹോർമുസ് കടലിടുക്കിലെ സാഹചര്യം പഴയപടിയാകില്ലെന്ന് ഇറാൻ സൈന്യത്തിന്റെ ഖാത്തം അൽ-അൻബിയ...

பாபநாசம் தொகுதி அமமுக-வுக்கு இல்லை; ரூட் போடும் வைத்தி! – திமுகவில் இணைகிறாரா டிடிவி விசுவாசி?

அமமுக-வின் துணை பொதுச்செயலாளர் எம்.ரெங்கசாமி. டி.டி.வி.தினகரனுக்கு அடுத்தபடியாக டெல்டா அமமுக-வின் முகமாக...