23
March, 2026

A News 365Times Venture

23
Monday
March, 2026

A News 365Times Venture

ರೈತನ ಮೇಲೆ ಹುಲಿ ದಾಳಿ, ಸ್ಥಿತಿ ಗಂಭೀರ

Date:

ಮೈಸೂರು,ಅಕ್ಟೋಬರ್,16,2025 (www.justkannada.in): ಜಮೀನಿನಲ್ಲಿ ಹತ್ತಿ ಬೆಳೆ ಬಿಡಿಸುತ್ತಿದ್ದ ವೇಳೆ ಹುಲಿ ರೈತನ ಮೇಲೆ ದಾಳಿ ನಡೆಸಿದ್ದು, ರೈತನಿಗೆ ಗಂಭೀರ ಗಾಯಗಳಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬಡಗಲಪುರ ಗ್ರಾಮದಲ್ಲಿ ನಡೆದಿದೆ.

ಬಡಗಲಪುರ ಗ್ರಾಮದ ರೈತ ಮಹದೇವಾ ಎಂಬ ವ್ಯಕ್ತಿಗೆ ಹುಲಿ ದಾಳಿ ನಡೆಸಿದೆ. ಗ್ರಾಮದ ಬಳಿ ಹುಲಿ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದ್ದು, ಜಮೀನಿನಲ್ಲಿ ಹತ್ತಿ ಬೆಳೆ ಬಿಡಿಸುತ್ತಿದ್ದ ಮಹದೇವನಿಗೆ ಹುಲಿ ದಾಳಿ ನಡೆಸಿದೆ ಎನ್ನಲಾಗಿದೆ. ರೈತನ ಮುಖದ ಮೇಲೆ ಗಂಭೀರ ಗಾಯಗಳಾಗಿವೆ.

ಗ್ರಾಮದಲ್ಲಿ ಎರಡು ತಿಂಗಳಿಂದ ನಿರಂತರವಾಗಿ ಹುಲಿ ಕಾಣಿಸಿಕೊಂಡು ಹಲವು ಜಾನುವಾರುಗಳ ಮೇಲೆ ದಾಳಿ ಮಾಡಿದೆ. ಹುಲಿ ಇರುವಿಕೆಯನ್ನು ಖಾತ್ರಿ ಮಾಡಿಕೊಂಡು ಇಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಸಾಕಾನೆಗಳ ಮೂಲಕ ಕೊಂಬಿಂಗ್ ಕಾರ್ಯಚರಣೆ ನಡೆಸುತ್ತಿದ್ದರು. ಕೊಂಬಿಂಗ್ ನಡೆಸುತ್ತಿದ್ದ ಅಣತಿ ದೂರದಲ್ಲೇ ಹುಲಿ ದಾಳಿ ನಡೆಸಿದೆ. ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ವಾಹನಕ್ಕೆ ಕಲ್ಲು ತೂರಾಟ ಮಾಡಿ ಜಖಂಗೊಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Mysore, Tiger,  attack, farmer, condition, critical

The post ರೈತನ ಮೇಲೆ ಹುಲಿ ದಾಳಿ, ಸ್ಥಿತಿ ಗಂಭೀರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

എക്കാലത്തുമുള്ളത് കോ-ലീ-ബി സഖ്യം; പി.ഡി.പി മതരാഷ്ട്രവാദം ഉള്ളവരല്ല, വര്‍ഷങ്ങളായി ഇടതുപക്ഷത്തെ പിന്തുണയ്ക്കുന്നു: തോമസ് ഐസക്

തിരുവനന്തപുരം: പാലക്കാട് എന്‍.എം.ആര്‍ റസാഖിനെ സ്ഥാനാര്‍ത്ഥിയാക്കിയതിന് പിന്നില്‍ പാലക്കാട് സി.പി.ഐ.എം-ബി.ജെ.പി ഡീലാണെന്ന...

இறுதி வரை திக் திக்.! `புதுச்சேரியில் காங்கிரஸ் – திமுக கூட்டணி தொடர்கிறது’ – கூட்டாக அறிவிப்பு

புதுச்சேரி சட்டப்பேரவைக்கான வாக்குப்பதிவு ஏப்ரல் 9-ம் தேதி நடைபெற  இருக்கும் நிலையில்,...

Iran Counter: అమెరికాతో ఎలాంటి చర్చలు జరగలేదు.. ‘ట్రంప్ భయపడ్డాడు’.. ఇరాన్ కౌంటర్..

అమెరికా , ఇరాన్ మధ్య ఉద్రిక్తతలు కొనసాగుతున్న వేళ.. అమెరికా అధ్యక్షుడు...

ಏ.1ರಿಂದ ಅರಣ್ಯ ಇಲಾಖೆ ಹಂಗಾಮಿ ನೌಕರರ ಮುಷ್ಕರ..

ಬೆಂಗಳೂರು,ಮಾರ್ಚ್,23,2026 (www.justkannada.in):  ಹೊರಗುತ್ತಿಗೆ ರದ್ದುಪಡಿಸಿ ಅರಣ್ಯ ಇಲಾಖೆಯಿಂದಲೇ ವೇತನ ನೀಡುವುದು...