27
March, 2026

A News 365Times Venture

27
Friday
March, 2026

A News 365Times Venture

ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಸುಲಭ- ಡಿಸಿಎಂ ಡಿಕೆ ಶಿವಕುಮಾರ್  

Date:

ಬೆಂಗಳೂರು,ಅಕ್ಟೋಬರ್,15,2025 (www.justkannada.in): ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬೆಂಗಳೂರಿನ ನಾಗರಿಕರಿಗೆ ಅನುಕೂಲವಾಗಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ-ಖಾತಾವನ್ನು ಆನ್‌ಲೈನ್‌ನಲ್ಲೇ ಪಡೆಯುವುದಕ್ಕೆ ಇಂದು ಚಾಲನೆ ನೀಡಲಾಯಿತು.

ಜಿಬಿಎ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್ ಲೈನ್ ವ್ಯವಸ್ಥೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಚಾಲನೆ ನೀಡಿದರು.

ಈ ಕುರಿತು ಟ್ವಿಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್,  2000 ಚ.ಮೀ.ಗಳವರೆಗಿನ ನಿವೇಶನಗಳಿಗೆ https://bbmp.karnataka.gov.in/BtoAKhata ವೆಬ್‌ಸೈಟ್‌ನಲ್ಲಿ ಹಾಗೂ 2000 ಚ.ಮೀ.ಗೂ ಹೆಚ್ಚಿನ ನಿವೇಶನಗಳಿಗೆ https://bpas.bbmp.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದ್ದು, ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ತಾಪತ್ರಯ ಕಡಿಮೆ ಆಗಲಿದೆ ಎಂದಿದ್ದಾರೆ.

ನವೆಂಬರ್ 1 ನೇ‌ ತಾರೀಕಿನಿಂದ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾವಣೆ ಮಾಡುವ ಐತಿಹಾಸಿಕ ನಿರ್ಣಯಕ್ಕೆ ಸರ್ಕಾರ ತೀರ್ಮಾನ ಮಾಡಿದೆ. ಇದು ಬೆಂಗಳೂರಿನ 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗುತ್ತದೆ. ಇದೊಂದು ಕ್ರಾಂತಿಕಾರಕ ತೀರ್ಮಾನ.‌ ಆಸ್ತಿ ಶುದ್ಧೀಕರಣಕ್ಕೆ ನಾಂದಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ‌ಅವರು  ತಿಳಿಸಿದ್ದಾರೆ.

Key words: A-Khata, B-Khata, conversion, DCM, DK Shivakumar

The post ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಸುಲಭ- ಡಿಸಿಎಂ ಡಿಕೆ ಶಿವಕುಮಾರ್   appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಅತಿವೃಷ್ಠಿ, ಹುಲಿ ದಾಳಿಯಾದ ಕುಟುಂಬಕ್ಕೆ ಪರಿಹಾರ ನೀಡಲಿಲ್ಲ, ಅದೇ ಕೇರಳಕ್ಕೆ 10 ಕೋಟಿ ಪರಿಹಾರ-ನಿಖಿಲ್ ಕುಮಾರಸ್ವಾಮಿ ಕಿಡಿ

ಮೈಸೂರು,ಮಾರ್ಚ್,27,2026 (www.justkannada.in): ರಾಜ್ಯದಲ್ಲಿ ಅತಿವೃಷ್ಠಿಯಾದಾಗ ಪರಿಹಾರ ನೀಡಲಿಲ್ಲ,  ಹುಲಿ ದಾಳಿಯಾದ...

`எங்கள் கூட்டணியில் எந்த இழுபறியும் இல்லை; விரும்பிய தொகுதிகள் கிடைத்துள்ளன!' – திருமாவளவன்

சென்னை அண்ணா அறிவாலயத்தில் விசிக தொகுதி ஒதுக்கீடு தொடர்பான பேச்சுவார்த்தைக்குப் பின்...

Allu Arjun: సరిహద్దులు దాటిన ‘రామ’ నామం.. జపాన్ దిగ్గజానికి అల్లు అర్జున్ అరుదైన కానుక!

సినిమాలతోనే కాదు, తన వ్యక్తిత్వంతోనూ దేశం గర్వించేలా చేస్తున్నారు ఐకాన్ స్టార్...