28
March, 2026

A News 365Times Venture

28
Saturday
March, 2026

A News 365Times Venture

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿ ಟೀಕಿಸಿದ ಹಿರಿಯ ಕಾಂಗ್ರೆಸ್ ಶಾಸಕ

Date:

ಬೆಂಗಳೂರು,ಅಕ್ಟೋಬರ್,13,2025 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದ್ದು, ಯಾವುದೇ ಅಭಿವೃದ್ದಿಕಾರ್ಯಗಳು ನಡೆಯುತ್ತಿಲ್ಲ ಎಂದು ವಿಪಕ್ಷ ಬಿಜೆಪಿಯಿಂದ ಆರೋಪಗಳು ಈಗಾಗಲೇ ಕೇಳಿಬಂದಿವೆ. ಆದರೆ ಇದೀಗ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವಪಕ್ಷದ ಹಿರಿಯನಾಯಕರೇ ಆದ ಆರ್.ವಿ ದೇಶಪಾಂಡೆ ಟೀಕಿಸಿದ್ದಾರೆ.

ಹೌದು, ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶಾಸಕ ಆರ್.ವಿ ದೇಶಪಾಂಡೆ,  ಸರ್ಕಾರ ಜಾರಿಗೆ ತಂದಿರುವ ಯೋಜನೆ ಒಂದಾ ಎರಡಾ. ಉಚಿತ ಬಸ್ ಯೋಜನೆಯಿಂದ ಬರೀ ಮಹಿಳೆಯರೇ ಎಲ್ಲಿ ನೋಡಿದ್ರೂ ಬಸ್ ನಲ್ಲಿ ಮಹಿಳೆಯರೇ ಇರುತ್ತಾರೆ.  ಸರ್ಕಾರಿ ಬಸ್ ನ ಪರಿಸ್ಥಿತಿ ಬಗ್ಗೆ ಹೇಳೋದು ಬೇಡ ಯಾರಾದರೂ  4ಜನ ಗಂಡಸರು ಹೋಗೋದೇ ಕಷ್ಟ. ಇಂತಹ ಯೋಜನೆಗಳನ್ನ ಸಿದ್ದರಾಮಯ್ಯ ತಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಈಗ 5 ಕೆಜಿ ಅಕ್ಕಿ ಬದಲು ತೊಗರಿ ಸೇರಿ ಬೇರೆ ದಿನಸಿ ಕೊಡಲು ನಿರ್ಧಾರ ಮಾಡಿದ್ದಾರೆ. ಸಿಎಂ ಏನೇನೋ ಮಾಡುತ್ತಾರೋ ನನಗೆ ಗೊತ್ತಿಲ್ಲ ಎಂದು ಶಾಸಕ ಆರ್.ವಿ ದೇಶಪಾಂಡೆ ಲೇವಡಿ ಮಾಡಿದರು.

Key words: Senior, Congress MLA ,criticizes, government, guarantee schemes

The post ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿ ಟೀಕಿಸಿದ ಹಿರಿಯ ಕಾಂಗ್ರೆಸ್ ಶಾಸಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪ್ರಚಾರದ ವೇಳೆ ಹೈಡ್ರಾಮಾ: ‘ಕೈ’ಶಾಸಕ ಪ್ರದೀಪ್ ಈಶ್ವರ್ ಗೆ ಚಪ್ಪಲಿ , ಪೊರಕೆ ಪ್ರದರ್ಶನ

ದಾವಣಗೆರೆ,ಮಾರ್ಚ್,28,2026 (www.justkannada.in):  ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣಾ ಕಣ ರಂಗೇರಿದ್ದು...

ഇറാനിലെ കരയുദ്ധം അമേരിക്കയെ ചെളിക്കുണ്ടിലാക്കും; വിയറ്റ്നാം ആവര്‍ത്തിക്കുമെന്ന മുന്നറിയിപ്പുമായി റഷ്യ

മോസ്‌കോ: ഇറാനെതിരായ ഏതൊരാക്രമണത്തിന്റെയും വിധി പരാജയമായിരിക്കുമെന്ന് അമേരിക്കയ്ക്ക് മുന്നറിയിപ്പുമായി റഷ്യന്‍ സുരക്ഷാ...

நாமக்கல்: `தொகுதி வேட்பாளரை மாற்ற வேண்டும்'- தங்கமணிக்கு எதிராக கட்சி நிர்வாகிகள் போர்க்கொடி

நாமக்கல் மாவட்டத்தில் முன்னாள் அமைச்சர் தங்கமணிக்கு எதிராக கட்சி நிர்வாகிகள் போர்க்கொடி...

India Receives Good News Amid Conflict: యుద్ధం మధ్యలో భారత్‌కు శుభవార్త..

India Receives Good News Amid Conflict: మధ్యప్రాచ్యంలో కొనసాగుతున్న యుద్ధ...