17
June, 2026

A News 365Times Venture

17
Wednesday
June, 2026

A News 365Times Venture

ಮೈಸೂರಿನಲ್ಲಿ ಸರಣಿ ಕೊಲೆ ಪ್ರಕರಣ: ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ನಾಳೆ ಸಭೆ

Date:

ಮೈಸೂರು, ಅಕ್ಟೋಬರ್,10,2025 (www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಿಲ್ಕಿ ವೆಂಕಟೇಶ್ ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ಸ್ಥಳದ ಇನ್ನೊಂದು ಬದಿಯಲ್ಲಿ  ಬಲೂನ್ ಮಾರುವ ಬಾಲಕಿ ಮೇಲೆ ದುಷ್ಕರ್ಮಿ ಅತ್ಯಾಚಾರವೆಸಗಿ ಅಮಾನುಷವಾಗಿ ಕೊಲೆ  ಮಾಡಿರುವ ಘಟನೆ ಎಲ್ಲರನ್ನ ಬೆಚ್ಚಿಬೀಳಿಸಿದೆ.  ಹೀಗೆ ಸರಣಿ ಕೊಲೆಗಳಾದರೂ ಸಹ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರುಗಳು ಧ್ವನಿ ಎತ್ತುತ್ತಿಲ್ಲ ಎಂದು ವಿಪಕ್ಷಗಳಿಂದ ಸಾಕಷ್ಟು ಟೀಕೆ ಗಳು ಬಂದಿವೆ.

ಇದೀಗ  ಕಡೆಗೂ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ನಾಳೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ನಾಳೆ ಸಂಜೆ 7.25ಕ್ಕೆ ಮೈಸೂರಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಕೊಲೆ ಪ್ರಕರಣ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.

ಬಳಿಕ ಖಾಸಗಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ವಾಪಾಸಾಗಲಿದ್ದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ಪಟ್ಟಿ ಬಿಡುಗಡೆಯಾಗಿದೆ. ಪ್ರಕರಣಗಳ ಸಂಬಂಧ ಈಗಾಗಲೇ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಗಿಲ್ಕಿ ವೆಂಕಟೇಶ್ ಕೊಲೆ ಪ್ರಕರಣ 6 ಮಂದಿ ಹಾಗೂ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಕಾರ್ತಿಕ್ ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Key words: Serial murder case, Mysore, CM Siddaramaiah, meeting, tomorrow

The post ಮೈಸೂರಿನಲ್ಲಿ ಸರಣಿ ಕೊಲೆ ಪ್ರಕರಣ: ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ನಾಳೆ ಸಭೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പി.എം. ശ്രീയും എസ്.എസ്.കെയും രണ്ട് പദ്ധതികള്‍: മുന്‍ സര്‍ക്കാര്‍ കാരണം പി.എം. ശ്രീയില്‍ തുടരുന്നെന്ന വി.ഡി സതീശന്റെ വാദം തെറ്റെന്ന് വി.ശിവന്‍കുട്ടി

തിരുവനന്തപുരം: പി.എം. ശ്രീ പദ്ധതിയില്‍ കഴിഞ്ഞ സര്‍ക്കാര്‍ ഒപ്പുവച്ചതിനാല്‍ ഇപ്പോഴത്തെ സര്‍ക്കാര്‍...

102 நாள்களுக்குப் பிறகு தகனம் செய்யப்பட்ட ஆகாஷ் டெலிசன் உடல்; கதறித் துடித்த பெற்றோர்!

சிவகங்கை மாவட்டம், மானாமதுரை, கிருஷ்ணராஜபுரம் காலனியைச் சேர்ந்த ரஜேஷ்கண்ணன் - ஆனந்தி...

Gudivada Amarnath: హోంమంత్రి గారు ఆ రోజు మహిళా లోకం గుర్తుకు రాలేదా?.. ఎక్కడైనా ఫిర్యాదు చేసుకోండి!

హోంమంత్రి వంగలపూడి అనితపై చేసిన వ్యాఖ్యల వివాదంపై వైసీపీ నేత, మాజీ...

ನಿಯತಕಾಲಿಕೆಗಳು ಜೂ. 30 ರೊಳಗೆ ವಾರ್ಷಿಕ ವರದಿ ಸಲ್ಲಿಸದಿದ್ದರೆ 10,000 ರೂ. ದಂಡ

ನವದೆಹಲಿ / ಬೆಂಗಳೂರು, ಜೂನ್‌,17,2026 (www.justkannada.in): ವಾರ್ಷಿಕ ವರದಿಗಳನ್ನು (Annual...