29
March, 2026

A News 365Times Venture

29
Sunday
March, 2026

A News 365Times Venture

ಮಹೇಶ್ ತಿಮರೋಡಿ ನಿರೀಕ್ಷಣಾ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್

Date:

ದಕ್ಷಿಣ ಕನ್ನಡ, ಅಕ್ಟೋಬರ್,4,2025 (www.justkannada.in):  ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಅಧಿಕಾರಿಗಳು ಶೋಧ ನಡೆಸುವ ವೇಳೆ ಅಕ್ರಮ ಶಸ್ತ್ರಾಸ್ತ್ರ ಪತ್ತೆಯಾಗಿದ್ದ ಪ್ರಕರಣ ಸಂಬಂಧ ಹೋರಾಟಗಾರ ಮಹೇಶ್ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಆದೇಶವನ್ನ ಕೋರ್ಟ್ ಕಾಯ್ದಿರಿಸಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಅಧಿಕಾರಿಗಳು ಶೋಧ ನಡೆಸುವ ವೇಳೆ ಮಹೇಶ ಶೆಟ್ಟಿ ತಿಮರೋಡಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ  ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮಹೇಶ್ ತಿಮರೋಡಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಾದ ಪ್ರತಿವಾದ ಆಲಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸೇಷನ್ಸ್ ಕೋರ್ಟ್ ನ್ಯಾಯಾಧೀಶರು ಜಾಮೀನು ಅರ್ಜಿ ಆದೇಶವನ್ನ ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದ್ದಾರೆ.

ಇನ್ನು ಮಹೇಶ್ ತಿಮರೋಡಿ ವಿರುದ್ದ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈ ನಡುವೆ ಮಹೇಶ್ ತಿಮರೋಡಿ ಅವರನ್ನ 1 ವರ್ಷಗಳ ಕಾಲ  ರಾಯಚೂರಿನ ಮಾನ್ವಿಗೆ ಗಡಿಪಾರು ಮಾಡಲಾಗಿತ್ತು. ಗಡಿಪಾರು ಆದೇಶ ಪ್ರಶ್ನಿಸಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯಕ್ಕೆ ಗಡಿಪಾರು ಮಾಡದಂತೆ ಮಹೇಶ್ ತಿಮರೋಡಿ ವಿರುದ್ದ ಬಲವಂತ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಈಗಾಗಲೇ ಸೂಚಿಸಿದೆ.

Key words: Court, Reserved, Mahesh Timarodi, Bail Order

The post ಮಹೇಶ್ ತಿಮರೋಡಿ ನಿರೀಕ್ಷಣಾ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಹಿಂದಿ ಕಲಿಯಬಾರದು ಅಂತೇನಿಲ್ಲ, ಆದ್ರೆ ಪರೀಕ್ಷೆ ಕಡ್ಡಾಯವಾಗಬಾರದಷ್ಟೆ- ಸಿಎಂ ಸಿದ್ದರಾಮಯ್ಯ

ಮೈಸೂರು,ಮಾರ್ಚ್,28,2026 (www.justkannada.in): ರಾಜ್ಯದಲ್ಲಿಈ ವರ್ಷದಿಂದಲೇ ದ್ವಿಭಾಷಾ ನೀತಿ ಜಾರಿ ಮಾಡಲಾಗುತ್ತದೆ. ...

ഐ.പി.എല്ലില്‍ ചരിത്രം കുറിച്ച സഞ്ജുവിന്റെ സെഞ്ച്വറി; വമ്പന്‍ ലിസ്റ്റില്‍ ഇടം നേടി ഇഷാന്‍ കിഷനും

ഐ.പി.എല്ലിലെ ഓപ്പണിങ് മത്സരത്തില്‍ തകര്‍പ്പന്‍ വിജയമാണ് റോയല്‍ ചലഞ്ചേഴ്സ് ബെംഗളൂരു സ്വന്തമാക്കിയത്....

தவெக: நீண்ட கால பணியாளரின் மகனை வேட்பாளராக்கிய விஜய்! – பின்னணி என்ன?

தவெகவின் வேட்பாளர் பட்டியலை இன்று விஜய் வெளியிட்டுள்ளார். சென்னை விருகம்பாக்கம் தொகுதியில்...

IAS Officer Transfers: ఏపీలో పలువురు ఐఏఎస్‌ అధికారుల బదిలీలు!

AP IAS Officer Transfers 2026: ఆంధ్రప్రదేశ్‌ రాష్ట్రంలో మరోసారి ఉన్నతాధికారుల...