29
March, 2026

A News 365Times Venture

29
Sunday
March, 2026

A News 365Times Venture

ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ: ಕಾವೇರಿ, ರೂಪಾ ಆನೆಗಳು ಸಾಥ್

Date:

ಮೈಸೂರು,ಅಕ್ಟೋಬರ್,2,2025 (www.justkannada.in):  ಅರಮನೆ ನಗರಿ,   ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಪ್ರದಾಯಿಕ ಗತವೈಭವ ಕಳೆಗಟ್ಟಿದ್ದು ಈಗಾಗಲೇ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದೆ. ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ವಿರಾಜಮಾನರಾಗಿರುವ ಚಿನ್ನದ ಅಂಬಾರಿಯನ್ನ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಪಥದಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.

ಅಂಬಾರಿ ಹೊತ್ತು ಸಾಗುತ್ತಿರುವ ಅಭಿಮನ್ಯುವಿಗೆ ಕುಮ್ಕಿ ಆನೆಗಳಾಗಿ ಕಾವೇರಿ, ರೂಪಾ ಆನೆಗಳು ಸಾಥ್ ನೀಡಿವೆ.  ಜಂಬೂಸವಾರಿ ಮೆರವಣಿಗೆ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5.3 ಕಿ.ಮೀ. ದೂರ ಸಾಗುತ್ತಿದೆ.

ಮೆರವಣಿಗೆಯುದ್ದಕ್ಕೂ ಸ್ತಬ್ದಚಿತ್ರಗಳು, ಕಲಾತಂಡಗಳು ನೋಡುಗರ ಮನಸೂರೆಗೊಳ್ಳುತ್ತಿದ್ದು ಲಕ್ಷಾಂತರ ಜನ ಜಂಬೂಸವಾರಿ ವೈಭವವನ್ನ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಜಂಬೂ ಸವಾರಿ ವೀಕ್ಷಣೆಗೆ ಎಲ್ಲಾ ಕಡೆಗಳಲ್ಲೂ ಪ್ರವಾಸಿಗರ ದಂಡೇ ಹರಿದು ಬಂದಿದೆ.   ಕ್ಯಾಪ್ಟನ್ ಅಭಿಮನ್ಯು 6ನೇ ಬಾರಿಗೆ ಅಂಬಾರಿ ಹೊತ್ತು ಸಾಗುತ್ತಿದ್ದು,  ಜಂಬೂಸವಾರಿ ಬನ್ನಿಮಂಟಪಕ್ಕೆ ಸಾಗಿದ ನಂತರ ನಾಡಹಬ್ಬ ಮೈಸೂರು ದಸರಾಗೆ ತೆರೆ ಬೀಳಲಿದೆ.

Key words: Mysore dasara, Jambu savari, Captain, Abhimanyu, Ambari

The post ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ: ಕಾವೇರಿ, ರೂಪಾ ಆನೆಗಳು ಸಾಥ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪತಿ ಮರಣದ ನಡುವೆಯೂ ಕರ್ತವ್ಯ ನಿಭಾಯಿಸಿದ ಶಿಕ್ಷಕಿ: ಶಾಸಕರಿಂದ ಶ್ಲಾಘನೆ

  ಮೈಸೂರು, March.29,2026: ವೈಯಕ್ತಿಕ ದುಃಖದ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿದ...

കോണ്‍ഗ്രസ് ചെലവാക്കിയതിനേക്കാള്‍ അഞ്ചിരട്ടി പണം ബി.ജെ.പി കേരളത്തിനായി ചെലവിട്ടു; വികസനത്തിനുള്ള പണം സര്‍ക്കാര്‍ കൊള്ളയടിച്ചു: മോദി

പാലക്കാട്: കേരളത്തില്‍ ബി.ജെ.പി സര്‍ക്കാരുണ്ടാക്കുമെന്ന അവകാശവാദവുമായി പ്രധാനമന്ത്രി നരേന്ദ്ര മോദി. പാലക്കാട്...

தவெக: '24 பெண்கள்; 11 இஸ்லாமியர்கள்; 11 கிறிஸ்துவர்கள்' – விஜய்யின் வேட்பாளர் பட்டியலின் ஹைலைட்!

தவெக சார்பில் 234 தொகுதிகளிலும் போட்டியிடும் வேட்பாளர்களின் பட்டியலை விஜய் இன்று...

Rain Alert: రెయిన్ అలర్ట్.. రేపటి నుంచి ఈ ప్రాంతాల్లో భారీ వర్షాలు..

తెలంగాణ రాష్ట్రవ్యాప్తంగా గత కొన్ని రోజులుగా భానుడి భగభగలతో అల్లాడిపోతున్న ప్రజలకు...