30
March, 2026

A News 365Times Venture

30
Monday
March, 2026

A News 365Times Venture

ಕೋರ್ಟ್ ನಲ್ಲಿ ನಟ ದರ್ಶನ್ ಅರ್ಜಿ ವಿಚಾರಣೆ: ಪಲ್ಲಂಗ ಕೇಳಿದ್ರೆ ಕೊಡಲು ಸಾಧ್ಯವಿಲ್ಲ ಎಂದ ಸರ್ಕಾರಿ ವಕೀಲರು

Date:

ಬೆಂಗಳೂರು,ಸೆಪ್ಟಂಬರ್,30,2025 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ  ನಟ ದರ್ಶನ್‌ ಹೆಚ್ಚುವರಿ ದಿಂಬು ಹಾಸಿಗೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಬೆಂಗಳೂರಿನ57ನೇ ಸೇಷನ್ಸ್ ನ್ಯಾಯಾಲಯಲ್ಲಿ ನಡೆಯುತ್ತಿದೆ.

ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿದ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ಕೊಲೆ ಆರೋಪಿ ದರ್ಶನ್ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಯಿತು.  ಈ ವೇಳೆ ಸರ್ಕಾರಿ ವಕೀಲರು ಮತ್ತು ಆರೋಪಿ ನಟ ದರ್ಶನ್ಪ ರ ವಕೀಲರ ನಡುವೆ ವಾದ ಕಾವೇರಿತು.

ಜೈಲು ಅಧಿಕಾರಿಗಳ ಪರವಾಗಿ ವಾದ ಮಂಡಿಸಿದ ಎಸ್‍ಪಿಪಿ ಪ್ರಸನ್ನಕುಮಾರ್, ಜೈಲು ಕೈಪಿಡಿಯಂತೆ ಕ್ರಮ ಕೈಗೊಳ್ಳಲಾಗಿದೆ. ಟೆಲಿಫೋನ್ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಸಹ ಮಾಡಲಾಗಿದೆ. ಚಾದರ್, ಹಾಸಿಗೆ ದಿಂಬು ಕೊಡಲಾಗಿದೆ. ಪಲ್ಲಂಗ ಕೇಳಿದರೆ ಕೊಡಲು ಅವಕಾಶ ಇಲ್ಲ ಓಡಾಡಲು ಅವಕಾಶ ಕೇಳಿದರು ಅದನ್ನು ಸಹ ಕೊಟ್ಟಿದ್ದೇವೆ ಎಂದು ವಾದಿಸಿದರು.

ಈ ವೇಳೆ ನಟ ದರ್ಶನ್ ಪರ ವಕೀಲರು ನಾವು ಹೆಚ್ಚುವರಿ ದಿಂಬು ಹಾಸಿಗೆ ಕೇಳಿದ್ದೇವೆ . ಚಿನ್ನದ ಮಂಚವನ್ನಲ್ಲ ಎಂದು ಹೇಳಿದರು. ನ್ಯಾಯಾಲಯ ವಿಚಾರಣೆಯನ್ನ ಕೆಲ ಕಾಲ ಮುಂದೂಡಿಕೆ ಮಾಡಿತು.

Key words: Renukaswamy Murder case, Actor, Darshan,  petition, court

The post ಕೋರ್ಟ್ ನಲ್ಲಿ ನಟ ದರ್ಶನ್ ಅರ್ಜಿ ವಿಚಾರಣೆ: ಪಲ್ಲಂಗ ಕೇಳಿದ್ರೆ ಕೊಡಲು ಸಾಧ್ಯವಿಲ್ಲ ಎಂದ ಸರ್ಕಾರಿ ವಕೀಲರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಉತ್ತರ ಕರ್ನಾಟಕದ ಅಭಿವೃದ್ಧಿ: ಶಾಸಕ ಅರವಿಂದ ಬೆಲ್ಲದ್ ತಿರುಗೇಟು ನೀಡಿದ  ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಮಾರ್ಚ್,28,2026 (www.justkannada.in): ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆ, ನೀರಾವರಿ ಸೌಲಭ್ಯ...

ഇറാനെതിരായുള്ള അമേരിക്ക – ഇസ്രഈൽ സംയുക്ത ആക്രമണം: പ്രതിഷേധിച്ച 18 പേരെ അറസ്റ്റ് ചെയ്ത് ഇസ്രഈൽ

ടെൽ അവീവ്: ഇറാനെതിരായുള്ള അമേരിക്ക – ഇസ്രഈൽ സംയുക്ത ആക്രമണത്തിനെതിരെ പ്രതിഷേധിച്ച...

'நாங்க செய்ததெல்லாம் வேஸ்ட்டா கோபால்?' – நண்பரை இறக்கிய விஜய்; கொந்தளிக்கும் தூத்துக்குடி தவெக!

'தூத்துக்குடியில் நண்பர் நிற்கிறார்' என தன்னுடைய நண்பரும் நடிகருமான ஸ்ரீநாத்தை வேட்பாளராக...

LPG Crisis: ఎల్పీజీ సంక్షోభం మధ్య కిరోసిన్‌పై కేంద్రం కీలక నిర్ణయం..

LPG Crisis: పశ్చిమాసియాలో కొనసాగుతున్న యుద్ధం భారత ఇంధనరంగంపై పడింది. ఇరాన్...