ಬೆಂಗಳೂರು,ಸೆಪ್ಟಂಬರ್,26,2025 (www.justkannada.in): ಸೀರೆ ಕದಿಯುತ್ತಿದ್ದಳೆಂದು ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದ ಸೀರೆ ಅಂಗಡಿಯ ಮಾಲೀಕ ಮತ್ತು ಆತನ ಸಹಾಯಕನನ್ನ ಬೆಂಗಳೂರು ನಗರ ಪಶ್ಚಿಮ ವಿಭಾಗ, ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಪೇಟೆ, ಅವೆನ್ಯೂ ರಸ್ತೆಯಲ್ಲಿರುವ ಮಾಯಾ ಸಿಲ್ಕ್ & ಸ್ಯಾರೀಸ್ ಅಂಗಡಿಯ ಮಾಲೀಕ ಉಮೇದರಾಮ ಹಾಗೂ ಆತನ ಅಂಗಡಿಯಲ್ಲಿ ಕೆಲಸ ಮಾಡುವ ಮಹೇಂದ್ರ ಸಿರ್ವಿ ಬಂಧಿತರು. ಬಂಧಿತರು ಸೆಪ್ಟಂಬರ್ 21 ರಂದು ಆಂಧ್ರಪ್ರದೇಶದ ಗುಂತಕಲ್ ವಾಸಿ ಮಹಿಳೆಗೆ ಅಮಾನುಷವಾಗಿ ಅಂಗಡಿಯ ಮುಂದೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಹಲ್ಲೆ ಮಾಡಿದ್ದ ಬಗ್ಗೆ ಮಾಹಿತಿ ದೊರೆತ ತಕ್ಷಣ ಪ್ರಕರಣ ದಾಖಲಿಸಿ ಪೊಲೀಸರು ಅಂಗಡಿಯ ಮಾಲೀಕ ಉಮೇದರಾಮ ಮತ್ತು ಸಹಾಯಕ ಮಹೇಂದ್ರ ಸಿರ್ವಿಯನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ
ಪ್ರಕರಣದಲ್ಲಿ ಮಾಯಾ ಸಿಲ್ಕ್ & ಸ್ಯಾರೀಸ್ ಅಂಗಡಿಯ ಮಾಲೀಕನಾದ ಉಮೇದರಾಮ ತಮ್ಮ ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿಯ ಮುಂಭಾಗದಲ್ಲಿ ಇಟ್ಟಿದ್ದ ಸೀರೇಯ ಬಂಡಲ್ ಅನ್ನು ಮಹಿಳೆ ಕದಿಯುತ್ತಿದ್ದರೆಂದು 112 ಗೆ ದೂರು ನೀಡಿದ್ದು, ಅದರಂತೆ ಠಾಣಾ ಹೊಯ್ಸಳ ಸಿಬ್ಬಂದಿಯವರು ಆ ದಿನ ಸದರಿ ಸ್ಥಳದಲ್ಲಿ ಉಮೇದರಾಮ್ ಹಿಡಿದುಕೊಂಡಿದ್ದ ಆರೋಪಿ ಮಹಿಳೆಯನ್ನು ಪೊಲೀಸರು ಪ್ರಕರಣದಲ್ಲಿ ಬಂಧಿಸಿ ಮಾಡಿ ಆರೋಪಿತೆಯಿಂದ ಕಳವು ಮಾಡಿದ ಮಾಲನ್ನು ಅಮಾನತ್ತುಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Key words: Saree shop, owner, assistant, arrest, assaulting, woman
The post ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಸೀರೆ ಅಂಗಡಿ ಮಾಲೀಕ ಮತ್ತು ಆತನ ಸಹಾಯಕ ಅರಸ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





