30
March, 2026

A News 365Times Venture

30
Monday
March, 2026

A News 365Times Venture

ಮೈಸೂರು ದಸರಾ: ಕುಸ್ತಿ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

Date:

ಮೈಸೂರು, ಸೆಪ್ಟೆಂಬರ್,22,2025 (www.justkannada.in): ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಸ್ತಿಪಟುಗಳಿಗೆ ಬೆನ್ನು ತಟ್ಟುವ ಮೂಲಕ  ಚಾಲನೆ ನೀಡಿದರು.

ನಗರದ ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರ ಆವರಣ ಡಿ.ದೇವರಾಜು ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿರುವ ದಸರಾ ಕುಸ್ತಿ ಪಂದ್ಯಾವಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀಕ್ಷಿಸಿ ಕುಸ್ತಿ ಪಟುಗಳಿಗೆ  ಪ್ರೋತ್ಸಾಹ ನೀಡಿದರು.

ಮೈಸೂರಿನ ಮಹದೇಪುರ ಪೈಲ್ವಾನ್ ವಿಕಾಸ್ ಹಾಗೂ ದಾವಣಗೆರೆ ಕ್ರೀಡಾನಿಲಯದ ಪೈಲ್ವಾನ್ ಕಿರಣ್ ನಡುವೆ ನಡೆದ 30 ನಿಮಿಷದ ಮೊದಲ ಕುಸ್ತಿಯು ಪೈಪೋಟಿಯಿಂದ ನಡೆಯಿತು. ಅಂತಿಮವಾಗಿ 22 ನಿಮಿಷದಲ್ಲಿ ಪೈಲ್ವಾನ್ ವಿಕಾಸ್ ಜಯಶೀಲರಾದರು.

ಮಹಿಳಾ ಕುಸ್ತಿ ಪಟುಗಳಾದ ಬೆಂಗಳೂರಿನ ಪುಷ್ಪ ಹಾಗೂ ಬೆಳಗಾವಿಯ ನಂದಿನಿ ನಡುವೆ ನಡೆದ ಕುಸ್ತಿಯಲ್ಲಿ 1 ನಿಮಿಷ 10 ಸೆಕೆಂಡ್ ನಲ್ಲಿ  ನಂದಿನಿ ಜಯಗಳಿಸಿದರು. ಅಥಣಿಯ ಪೈಲ್ವಾನ್ ಸುರೇಶ್ ಲಂಕೋಟಿ ಹಾಗೂ ದಾವಣಗೆರೆ ಕ್ರೀಡಾ ನಿಲಯದ ಪೈಲ್ವಾನ್ ಹನುಮಂತ ವಿಠಲ ಬೇವಿನ ಮರ ನಡುವೆ ಕುಸ್ತಿ ರೋಚಕತೆಯಿಂದ ಕೂಡಿತ್ತು.

ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಚಾಮರಾಜ ನಗರ ಲೋಕಸಭಾ ಸದಸ್ಯ ಸುನೀಲ್ ಬೋಸ್, ಶಾಸಕ ಎ.ಆರ್.ಕೃಷ್ಣಮೂರ್ತಿ, ರವಿಶಂಕರ್ ಡಿ, ಶ್ರೀವತ್ಸ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಗ್ಯಾರೆಂಟಿ ಯೋಜನೆ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪಾವತಿ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಇತರರು ಇದ್ದರು.

Key words: Mysore Dasara, CM Siddaramaiah, inaugurates, wrestling

The post ಮೈಸೂರು ದಸರಾ: ಕುಸ್ತಿ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಶಾಸಕರಿಗೆ 3 IPL ಟಿಕೆಟ್ ಕೊಡಲು ಕೆಎಸ್ ಸಿಎ ಒಪ್ಪಿಗೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು ,ಮಾರ್ಚ್,30,2026 (www.justkannada.in):  ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ  ಜನರಿಂದ...

ഹോര്‍മുസ് തുറന്നില്ലെങ്കില്‍ ഇറാന്റെ എണ്ണക്കിണറുകളും പവര്‍ പ്ലാന്റും ബോബിട്ട് നശിപ്പിക്കും; അന്ത്യശാസനവുമായി ട്രംപ്

വാഷിങ്ടണ്‍: ഹോര്‍മുസ് കടലിടുക്ക് ഉടനടി തുറന്നുകൊടുത്തില്ലെങ്കില്‍ ഇറാന്റെ എണ്ണക്കിണറുകളും പവര്‍ പ്ലാന്റുകളും...