31
March, 2026

A News 365Times Venture

31
Tuesday
March, 2026

A News 365Times Venture

ಸೆ.23ರಿಂದ ಯುವ ದಸರಾ:  ಟಿಕೆಟ್ ದರ, ಕಾರ್ಯಕ್ರಮಗಳ ಪಟ್ಟಿ ಹೀಗಿದೆ ನೋಡಿ..

Date:

ಮೈಸೂರು,ಸೆಪ್ಟಂಬರ್,17,2025 (www.justkannada.in): ವಿಶ್ವವಿಖ್ಯಾತ ಮೈಸೂರು  ದಸರಾ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ದಸರಾ ಮಹೋತ್ಸವಗಳಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ಸೆಪ್ಟಂಬರ್ 23ರಿಂದ ಪ್ರಾರಂಭವಾಗಲಿದೆ.

ಮೈಸೂರು ದಸರಾದ ಅಂಗವಾಗಿ ನಡೆಯುವ ಯುವ ದಸರಾ ಉದ್ಘಾಟನೆಯು ದಿನಾಂಕ 23-09-2025 ರ ಸಂಜೆ 6.00 ಗಂಟೆಗೆ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಹತ್ತಿರ, ಉತ್ತನಹಳ್ಳಿ, ರಿಂಗ್ ರೋಡ್ ಪಕ್ಕದ ಮೈದಾನದಲ್ಲಿ ನೆರವೇರಲಿದೆ.

ಸೆಪ್ಟಂಬರ್ 23 ರಿಂದ ಸೆ.27ರವರೆಗೆ ಸಂಜೆ 5.30ರಿಂದ ರಾತ್ರಿ 10.30ರವರೆಗೆ ಯುವದಸರಾ ನಡೆಯಲಿದ್ದು ವಿವಿಧ ಕಾರ್ಯಕ್ರಮಗಳು ನೆರವೇರಲಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಪ್ರತೇಕ 5 ಸಾವಿರ ಮತ್ತು 2.5 ಸಾವಿರ ರೂಪಾಯಿಗಳ ಟಿಕೆಟ್‌ನ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು ಬುಕ್ ಮೈ ಶೋ (Book My Show) ನಲ್ಲಿ ಕಾಯ್ದಿರಿಸಬಹುದಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ನಗರದ ವಿವಿಧ ಕಡೆಗಳಿಂದ ಬಸ್‌ಗಳ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಆಹಾರ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ದಸರಾ ವಿಶೇಷಾಧಿಕಾರಿ ಹಾಗೂ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದ್ದಾರೆ.

ಯುವ ದಸರಾ ಕಾರ್ಯಕ್ರಮಗಳ ವಿವರ ಹೀಗಿದೆ.

ಸೆಪ್ಟಂಬರ್ 23 ರಂದು  ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಂಯೋಜನಕ ಅರ್ಜುನ್ ಜನ್ಯ ಮತ್ತು ಗಾಯಕ ತಂಡ, ಲಗೋರಿ ಬ್ಯಾಂಡ್ ಖ್ಯಾತ ಗಾಯಕರ ತಂಡ

ಸೆಪ್ಟಂಬರ್ 24 ರಂದು  ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಹಾಗೂ ಸಂಯೋಜಕರು ಮತ್ತು ಗಾಯಕರು ಪ್ರೀತಮ್ ಮತ್ತು ಶೋರ್ ಪೊಲೀಸ್ (ಖ್ಯಾತ ಗಾಯಕರ ತಂಡ)

ಸೆಪ್ಟಂಬರ್ 25 ರಂದು ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕ ಜುಬಿನ್ ನೌಟಿಯಲ್ ಹಾಗೂ  ಖ್ಯಾತ ಗಾಯಕ ಶ್ರೀರಾಮಚಂದ್ರರಿಂದ ಕಾರ್ಯಕ್ರಮ

ಸೆಪ್ಟಂಬರ್ 26 ರಂದು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಂಯೋಜಕರು ಮತ್ತು ಗಾಯಕರು ದೇವಿಶ್ರೀ ಪ್ರಸಾದ್(DSP) ಮತ್ತು ಆಸೀಸ್ ಕೌರ್ ಖ್ಯಾತ ಗಾಯಕರಿಂದ ಕಾರ್ಯಕ್ರಮ.

ಸೆಪ್ಟಂಬರ್ 27 ರಂದು  ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕರು ಸುನಿಧಿ ಚೌಹಾಣ್ ಮತ್ತು ಬೆಸ್ಟ್ ಕಪ್ಟ್ ಸಿಕ್ರೇಟ್ ಖ್ಯಾತ ಗಾಯಕರ ತಂಡದಿಂದ  ಕಾರ್ಯಕ್ರಮ

Key words: Mysore dasara,  Yuva Dasara, ticket price, programs

The post ಸೆ.23ರಿಂದ ಯುವ ದಸರಾ:  ಟಿಕೆಟ್ ದರ, ಕಾರ್ಯಕ್ರಮಗಳ ಪಟ್ಟಿ ಹೀಗಿದೆ ನೋಡಿ.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಉಜ್ವಲ ಹೋಯ್ತು, ಈಗ ಸೌದೆ ಯೋಜನೆ ಸ್ಟಾರ್ಟ್ ಮಾಡಿದ್ದಾರೆ- ಡಿಸಿಎಂ ಡಿಕೆಶಿ ಟೀಕೆ

ಬೆಂಗಳೂರು,ಮಾರ್ಚ್,31,2026 (www.justkannada.in):  ಗ್ಯಾಸ್ ಸಿಲಿಂಡರ್ ಸಿಗದ ಹೋಟೆಲ್ ನವರು ಪರದಾಡುತ್ತಿದ್ದಾರೆ....

വെല്ലുവിളിച്ചത് ഫേസ്ബുക്ക് സംവാദത്തിന്; തയ്യാറല്ലെന്ന് വി.ഡി. സതീശന്‍ പറഞ്ഞിട്ടില്ല മുഖ്യമന്ത്രി

കൊല്ലം: പ്രതിപക്ഷ നേതാവ് വി.ഡി. സതീശന്റെ സംവാദത്തിനുള്ള വെല്ലുവിളിയില്‍ വിശദീകരവുമായി മുഖ്യമന്ത്രി...

IPS Couple Wedding: అప్పగింతల సమయంలో వెక్కి వెక్కి ఏడ్చిన ఐపీఎస్ పెళ్లికూతురు అన్షికా వర్మ

ఉత్తరప్రదేశ్‌కు ప్రముఖ ఐపీఎస్ అధికారుల జంట ఆదివారం రాత్రి పెళ్లితో ఒక్కటయ్యారు....