26
June, 2026

A News 365Times Venture

26
Friday
June, 2026

A News 365Times Venture

ಈ ಬಾರಿ ದಸರಾ ‘ದೀಪಾಲಂಕಾರ, ಡ್ರೋಣ್ ಶೋ’ ಮತ್ತಷ್ಟು ಆಕರ್ಷಣೀಯ- ಮುನಿಗೋಪಾಲ ರಾಜು

Date:

ಮೈಸೂರು,ಸೆಪ್ಟಂಬರ್,4,2025 (www.justkannada.in): ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಮತ್ತು ಡ್ರೋಣ್ ಶೋ ವನ್ನ ಮತ್ತಷ್ಟು ಆಕರ್ಷಣೀಯವಾಗಿ ಮಾಡಬೇಕೆಂದು ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಸೆಸ್ಕ್ ನ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜು ತಿಳಿಸಿದರು.

ಇಂದು ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಸೆಸ್ಕ್ ನ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜು ಅವರು, ಈ ಬಾರಿಯ ದಸರಾ ಮಹೋತ್ಸವದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಮತ್ತಷ್ಟು ಮೆರಗು ನೀಡಲು ಸೆಸ್ಕ್ ಮುಂದಾಗಿದೆ. ಅರಮನೆ ದೀಪಾಲಂಕಾರಕ್ಕೆ ಪೂರಕವಾದ ಬಣ್ಣದಲ್ಲಿ ಮೈಸೂರು ನಗರದ ದೀಪಗಳು ಜಗಮಗಿಸಲಿವೆ.  ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 136 ಕಿ.ಮೀ ರಸ್ತೆಗಳವರೆಗೆ ದೀಪಾಲಂಕಾರ ಮಾಡಲಾಗುತ್ತದೆ.  ಸುಮಾರು 60ರಿಂದ 70 ಪ್ರತಿಕೃತಿಗಳನ್ನ ದೀಪಾಲಂಕಾರದಲ್ಲಿ ನಿರ್ಮಿಸುತ್ತಿದ್ದೇವೆ. ಈ ಬಾರಿ ದೀಪಾಲಂಕಾರದಲ್ಲಿ ವಿಶೇಷ ಅಂದರೆ ಕೊಲ್ಕತ್ತಾ ಮಾದರಿಯ ಮೂವಿಂಗ್ ಲೈಟ್ಸ್ ಪರಿಕಲ್ಪನೆ. ಬೇರೆ ಬೇರೆ ಕಡೆಗಳಿಂದಲೂ ಆಕರ್ಷಣಿಯ ದೀಪಗಳನ್ನ ತರಿಸಲಾಗುತ್ತದೆ. ಈ ಸಾರಿಯ ದೀಪಾಲಂಕಾರ ಅತ್ಯಾಕರ್ಷಕವಾಗಿರುತ್ತದೆ ಎಂದರು.

ಹಾಗೆಯೇ ದಸರಾ ಮಹೋತ್ಸವದಲ್ಲಿ ಡ್ರೋನ್ ಶೋ ಅಬ್ಬರ ಹೆಚ್ಚಾಗಲಿದೆ. ಕಳೆದ ವರ್ಷ 1500 ಡ್ರೋಣ್ ಉಪಯೋಗಿಸಿದ್ದವು. ಈ ಬಾರಿ 3 ಸಾವಿರ ಡ್ರೋಣ್ ಗಳನ್ನ ಬಳಸಿ ಬನ್ನಿಮಂಟಪದಲ್ಲಿ ಡ್ರೋಣ್ ಶೋ ಮಾಡುತ್ತಿದ್ದೇವೆ . ತಾಯಿ ಚಾಮುಂಡೇಶ್ವರಿ, ದಸರಾ ಅಂಬಾರಿ ವಿವಿಧ ಆಕೃತಿಗಳನ್ನ ಮೂಡಿಸಲಾಗುತ್ತದೆ. . ಈ ಕಾಮಗಾರಿಗಳಿಗೆ 9 ರಿಂದ 10 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮುನಿಗೋಪಾಲ ರಾಜು ತಿಳಿಸಿದರು.

Key words: Mysore  Dasara, Lighting, Drone Show, Munigopala Raju

The post ಈ ಬಾರಿ ದಸರಾ ‘ದೀಪಾಲಂಕಾರ, ಡ್ರೋಣ್ ಶೋ’ ಮತ್ತಷ್ಟು ಆಕರ್ಷಣೀಯ- ಮುನಿಗೋಪಾಲ ರಾಜು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

എസ്.ഐ.ആര്‍ ഒരുവര്‍ഷം പിന്നിട്ടപ്പോള്‍ വോട്ടര്‍ പട്ടികയില്‍ നിന്ന് പുറത്താക്കിയത് ആറ് കോടിയോളം വോട്ടര്‍മാരെ

ന്യൂദല്‍ഹി: രാജ്യത്തെ തീവ്ര വോട്ടര്‍ പട്ടിക പുനപരിശോധന (എസ്.ഐ.ആര്‍) ഒരു വര്‍ഷം...

`கர்நாடக அரசின் பிராக்ஸி அரசா இந்த அரசு?' – ஜனநாயகன் பட தயாரிப்பாளர் நியமனத்திற்கு அதிமுக எதிர்ப்பு

தமிழ்நாடு அரசின் டெல்லி சிறப்புப் பிரதிநிதியாக ஜனநாயகன் திரைப்படத்தின் தயாரிப்பாளரான கே.வெங்கட...

Saikrishna Lockup Death: సాయికృష్ణ లాకప్ డెత్ కేసులో సిట్ దూకుడు.. మరో ఇద్దరు పోలీసుల కోసం గాలింపు!

విజయవాడలో సంచలనం సృష్టించిన సాయికృష్ణ లాకప్ డెత్ కేసు దర్యాప్తును ప్రత్యేక...

ಟೌನ್ ಶಿಪ್ ಹೆಸರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುವುದು ತಪ್ಪು- ಪ್ರತಾಪ್ ಸಿಂಹ

ಹಾಸನ,ಜೂನ್,26,2026 (www.justkannada.in):  ಬಿಡದಿಯ ಟೌನ್ ಶಿಪ್ ನಿರ್ಮಾಣ ವಿಚಾರ ಜಟಾಪಟಿ...