26
April, 2026

A News 365Times Venture

26
Sunday
April, 2026

A News 365Times Venture

ಅಭಿಮಾನ್ ಸ್ಟುಡಿಯೋ ಜಾಗ ಅರಣ್ಯ ಇಲಾಖೆಗೆ ಸೇರಬೇಕು: ಸಚಿವ ಈಶ್ವರ್ ಖಂಡ್ರೆ

Date:

ಬೆಂಗಳೂರು,ಆಗಸ್ಟ್,30,2025 (www.justkannada.in): ಅಭಿಮಾನ್ ಸ್ಟುಡಿಯೋ ಜಾಗ ಅರಣ್ಯ ಇಲಾಖೆಗೆ ಸೇರಬೇಕು. 10 ಎಕರೆ ಜಾಗವನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡು ಅರಣ್ಯ ಇಲಾಖೆಗೆ ನೀಡಬೇಕಿದೆ. ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಇಂದು ವಿಷ್ಣುಸೇನೆ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ವಿಷ್ಣುವರ್ಧನ್ ಸಮಾಧಿ ನಿರ್ಮಾಣಕ್ಕೆ ಅಭಿಮಾನ್ ಸ್ಟುಡಿಯೋನಲ್ಲಿ ಜಾಗ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಬಳಿಕ ಮಾತನಾಡಿದ ಸಚಿವ ಈಶ್ವರ ಖಂಡ್ರೆ, 1970 ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಕಂದಾಯ ಇಲಾಖೆಯ ಮೂಲಕ ಸ್ಟುಡಿಯೋ ನಿರ್ಮಾಣಕ್ಕಾಗಿ ಬಾಲಣ್ಣ ಅವರಿಗೆ ನೀಡಲಾಗಿತ್ತು. ಆ ಸಮಯದಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಆ ಷರತ್ತುಗಳನ್ನು ಪಾಲಿಸದೇ ಉಲ್ಲಂಘನೆ ಮಾಡಲಾಗಿದ್ದು, ಈಗ ಪ್ರತಿ ಎಕರೆಗೆ 14.37 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಸಹ ಷರತ್ತಿನ ಉಲ್ಲಂಘನೆಯಾಗಿದೆ. ಹೀಗಾಗಿ ಆ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಒಪ್ಪಿಸಬೇಕೆಂದು ನಾವು ಈಗಾಗಲೇ ಕಂದಾಯ ಇಲಾಖೆಗೆ ಕೇಳಿದ್ದೇವೆ ಎಂದರು.

ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅದೇ ಹತ್ತು ಎಕರೆಯಲ್ಲಿ ಜಾಗ ನೀಡುವಂತೆ  ಮನವಿ ಕುರಿತು ಪ್ರತಿಕ್ರಿಯಿಸಿದ  ಸಚಿವ ಈಶ್ವರ್ ಖಂಡ್ರೆ, ‘ವಿಷ್ಣುವರ್ಧನ್ ಅವರು ಎಲ್ಲರ ಮೆಚ್ಚಿನ ನಟ, ಅವರ ಬಗ್ಗೆ ನಮಗೆ ಅಪಾರ ಗೌರವ ಇದೆ. ಈಗ ಶ್ರೀನಿವಾಸ್ ಅವರು ಜಾಗ ಕೇಳಿದ್ದಾರೆ. ಈ ವಿಷಯವನ್ನು ಸಿಎಂ ಸಿದ್ದರಾಮಯ್ಯ  ಅವರ ಜೊತೆ ಚರ್ಚಿಸುತ್ತೇನೆ ಎಂದರು.

Key words: Abhiman Studio, land, Forest Department, Minister, Ishwar Khandre

The post ಅಭಿಮಾನ್ ಸ್ಟುಡಿಯೋ ಜಾಗ ಅರಣ್ಯ ಇಲಾಖೆಗೆ ಸೇರಬೇಕು: ಸಚಿವ ಈಶ್ವರ್ ಖಂಡ್ರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബി.ജെ.പിയിലേക്കുള്ള കൂടുമാറ്റം; രാഘവ് ഛദ്ദയ്ക്ക് 24 മണിക്കൂറുകൊണ്ട് നഷ്ടമായത് 10 ലക്ഷം ഫോളോവെഴ്‌സ്

ന്യൂദൽഹി: ആം ആദ്മി പാർട്ടിവിട്ട് ബി.ജെ.പിയിലേക്ക് ചേക്കേറിയ രാജ്യസഭാ എം.പി രാഘവ്...

தெலங்கானா : 'அப்பா முன்ன மாதிரி இல்ல!' – புது கட்சி தொடங்கிய சந்திரசேகர் ராவின் மகள் கவிதா!

தெலங்கானாவில் பாரதிய ராஷ்டிர சமிதி கட்சியின் தலைவர் சந்திரசேகர் ராவ்வின் மகள்...

Barrier Free Tolling: భారత్‌లో కొత్త రకం టోల్ విధానం.. వాహనాలు ఆపాల్సిన అవసరం లేకుండా…

జాతీయ రహదారులపై ప్రయాణాన్ని మరింత వేగంగా, సులభతరం చేసేందుకు కేంద్ర ప్రభుత్వం...

ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ- ಸಚಿವ ಕೆ.ವೆಂಕಟೇಶ್

ಬೆಳಗಾವಿ,ಏಪ್ರಿಲ್,25,2026 (www.justkannada.in): ‘ರಾಜ್ಯದಲ್ಲಿ  ಸಿಎಂ ಕುರ್ಚಿ ಖಾಲಿ ಇಲ್ಲ. ‘ಅಧಿಕಾರ...