7
March, 2026

A News 365Times Venture

7
Saturday
March, 2026

A News 365Times Venture

ಎಸ್ ಐಟಿ ತನಿಖೆ ಒಪ್ಪಿಕೊಂಡಿದ್ದ ಬಿಜೆಪಿ ಈಗ ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡ್ತಿದ್ದಾರೆ- ಸಚಿವ ಸಂತೋಷ್ ಲಾಡ್

Date:

ಬೆಂಗಳೂರು,ಆಗಸ್ಟ್,29,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐ ಟಿ ತನಿಖೆಯನ್ನು ಅಂದು ಸ್ವಾಗತಿಸಿದ್ದ ಬಿಜೆಪಿ ಇದೀಗ ವಿರೋಧ ಮಾಡುತ್ತಿರುವುದು ಏಕೆ? ಎಸ್ ಐಟಿ ತನಿಖೆ ಒಪ್ಪಿಕೊಂಡಿದ್ದ ಬಿಜೆಪಿ ಈಗ ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡ್ತಿದ್ದಾರೆ  ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂತೋಷ್ ಲಾಡ್,  ಎಸ್ ಐಟಿಗೆ ಸ್ವಾಗತ ಮಾಡಿದ್ದು ಇವರೇ, ಇದೀಗ ಪ್ರತಿಭಟನೆ ನಡೆಸುವುದಾದರೆ ಅಂದು ಎಸ್ ಐಟಿ ತನಿಖೆಯನ್ನು ಯಾಕೆ ಸ್ವಾಗತ‌ಮಾಡಿದರು. ರಾತ್ರೋರಾತ್ರಿ ಯಾರೋ ಒಬ್ಬ ವ್ಯಕ್ತಿ ಬಂದು ಕೆಲವೊಂದು ಆರೋಪಗಳನ್ನು ಮಾಡುತ್ತಾನೆ. ಈ ವಿಚಾರ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗಿದೆ. ಆದರೆ ಎಸ್ ಐಟಿ ತನಿಖೆಯನ್ನು ಒಪ್ಪಿಕೊಂಡಿದ್ದ ಬಿಜೆಪಿ ನಾಯಕರು ಇದೀಗ ರಾಜಕೀಯ ಲಾಭಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಸಂಸತ್ ಭವನ ಉದ್ಘಾಟನೆಯ ವೇಳೆ ರಾಷ್ಟ್ರಪತಿ ದ್ರೌಪತಿ ಮುರ್ಮಾ ಅವರನ್ನು ಏಕೆ ಕರೆದೊಯ್ಯಲಿಲ್ಲ? ಶಿಷ್ಠಾಚಾರದ ಪ್ರಕಾರ ಅವರು ಮುಂದೆ ಇರಬೇಕಿತ್ತು ಅಲ್ಲವೇ? ಅವರು  ಎಸ್ ಟಿ ಸಮುದಾಯಕ್ಕೆ ಸೇರಿದವರು ಅಂತಾಲೋ, ವಿಧವೆ ಅಂತ ಕರೆದೊಯ್ಯಲಿಲ್ವಾ?ಯಾಕೆ ಅವರನ್ನ ಕರೆದೊಯ್ಯಲಿಲ್ಲ ಎಂದು  ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದರು. ಆಗ ಮುಸ್ಲಿಂ ಅನ್ನೋ ಪದ ಬರಲಿಲ್ವಾ? ಹಿಂದೂಗಳ ಬಗ್ಗೆ ಮಾತನಾಡ್ತಾರೆ. ರಾಮಮಂದಿರ ಜನರ ದುಡ್ಡಿನಿಂದ ಕಟ್ಟಿದ್ದು. ಇವರ ಹಣದಲ್ಲಿ ಅದನ್ನ ಕಟ್ಟಿದ್ದಾರಾ? ಎಂದು  ಸಚಿವ ಸಂತೋಷ್ ಲಾಡ್ ಟಾಂಗ್ ಕೊಟ್ಟರು.

Key words: BJP, SIT, probe, political, Minister, Santosh Lad

The post ಎಸ್ ಐಟಿ ತನಿಖೆ ಒಪ್ಪಿಕೊಂಡಿದ್ದ ಬಿಜೆಪಿ ಈಗ ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡ್ತಿದ್ದಾರೆ- ಸಚಿವ ಸಂತೋಷ್ ಲಾಡ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

UPSC ಪರೀಕ್ಷೆ ಫಲಿತಾಂಶ ಪ್ರಕಟ: ಅನುಜ್​ ಅಗ್ನಿಹೋತ್ರಿ ದೇಶಕ್ಕೇ ನಂ.1

ನವದೆಹಲಿ,ಮಾರ್ಚ್,6,2026 (www.justkannada.in): ಕೇಂದ್ರ ಲೋಕಸೇವಾ ಸೇವಾ ಆಯೋಗದ (ಯುಪಿಎಸ್​ಸಿ) 2025ನೇ ಸಾಲಿನ...

സ്വന്തം ഊര്‍ജ ആവശ്യങ്ങള്‍ നിറവേറ്റാന്‍ ഇന്ത്യയ്ക്ക് മറ്റൊരു രാജ്യത്തിന്റെ അനുമതി എന്തിന്? സ്റ്റാലിന്‍

ചെന്നൈ: പശ്ചിമേഷ്യയില്‍ സംഘര്‍ഷം തുടരുന്ന സാഹചര്യത്തില്‍ റഷ്യയില്‍ നിന്നും എണ്ണ വാങ്ങുന്നതിനായി...

Vande Bharat Express: రైల్వే ప్రయాణికులకు అలర్ట్.. ఈ వందే భారత్ ట్రైన్ టైమింగ్స్‌ మారాయ్..

హిందూపూర్ స్టేషన్‌లో కాచిగూడ–యశ్వంతపూర్ వందే భారత్ ఎక్స్‌ప్రెస్ సమయాల్లో మార్పులు చేస్తూ...