25
April, 2026

A News 365Times Venture

25
Saturday
April, 2026

A News 365Times Venture

ಮೈಸೂರಿನಲ್ಲಿ ಆ.31 ರಂದು ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’ ಪ್ರದರ್ಶನ

Date:

ಮೈಸೂರು,ಆಗಸ್ಟ್,31,2025 (www.justkannada.in): ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ  ಆಗಸ್ಟ್ 31 ರಂದು ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’ ನಾಟಕ ಪ್ರದರ್ಶನಗೊಳ್ಳಲಿದೆ.

ನಟನ ರಂಗಶಾಲೆಯಲ್ಲಿ ಮತ್ತು ಬುಕ್ ಮೈಶೋನಲ್ಲಿ ಟಿಕೆಟ್ ಲಭ್ಯವಿರಲಿದೆ. ಬಾಲ್ಯದ ಮುಗ್ಧತೆ, ಯೌವನದ ತುಂಟಾಟ, ಪ್ರೌಢಾವಸ್ಥೆಯ ಏಳುಬೀಳುಗಳು. ಇವುಗಳ ಮಧ್ಯೆ ಮೂಡುವ ಗೆಳೆತನ, ಅರಳುವ ಪ್ರೀತಿ, ಕಾಡುವ ನೆನಪು, ಅಗಲಿಕೆ , ಸಂತಸ, ನೋವು..ಇವೆಲ್ಲವೂ ನಿಮ್ಮ ಪತ್ರಗಳಲ್ಲಿ ದಾಖಲಾಗಿದ್ದರೆ?! ಒಂದಿಡೀ ಜೀವನದ ಪಿಸುಮಾತುಗಳು, ಹಂಚಿಕೊಂಡ ಗುಟ್ಟುಗಳು , ಜೊತೆಗೆ ಕಂಡ ಕನಸುಗಳು, ಖುಷಿಯ ಚೀತ್ಕಾರದ ಜೊತೆಗೆ ದು:ಖದ ನಿಟ್ಟುಸಿರು. ದೂರವಿದ್ದರೂ ಜೊತೆಗೆ ಸಾಗಿದ ದಾರಿಗಳು. ಇವೆಲ್ಲವೂ ಒಬ್ಬರಿಗೊಬ್ಬರು ಬರೆದ ಪತ್ರಗಳಲ್ಲಿ ಬಿಚ್ಚಿಕೊಳ್ಳುವ ಪ್ರೇಮ ಕಥಾನಕವೇ ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’.

ಈ ನಾಟಕವನ್ನ ಎ.ಆರ್‌.ಗರ್ನಿಯವರು ಬರೆದಿದ್ದು, ವೆಂಕಟೇಶ್ ಪ್ರಸಾದ್ ರೂಪಾಂತರ ಮತ್ತು ನಿರ್ದೇಶನ ಮಾಡಿದ್ದಾರೆ.  ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ನಿರ್ದೇಶಕ ವೆಂಕಟೇಶ್ ಪ್ರಸಾದ್  ಈ ವರ್ಷದ ಮಾರ್ಚ್ ನಲ್ಲಿ ‘ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮೆನ್ಸ್’ ಸಂಸ್ಥೆಯು ತನ್ನ ಹೊಸ ನಾಟಕೋತ್ಸವಕ್ಕೆ ನಮ್ಮ ತಂಡವನ್ನು ಆಹ್ವಾನಿಸಿ, ಹೊಸ ನಾಟಕವೊಂದನ್ನು ಮಾಡಲು ಕೇಳಿಕೊಂಡಿತು. ಹೊಸ ಜಾಗದಲ್ಲಿ ಈ ನಾಟಕೋತ್ಸವ ನಡೆಯಬೇಕಾದ್ದರಿಂದ , ಸಮಯವೂ ಕಡಿಮೆ ಇದ್ದಿದ್ದರಿಂದ ನಾವು ಕಡಿಮೆ ನಟರಿರುವ ನಾಟಕಗಳಿಗೆ ಹುಡುಕಾಟ ಶುರು ಮಾಡಿದೆವು. ಆಗ ಅಕಾಸ್ಮಾತ್ತಾಗಿ ಕಣ್ಣಿಗೆ ಬಿದ್ದಿದ್ದೇ ಎ.ಆರ್‌.ಗರ್ನಿಯವರು ಬರೆದ ‘ಲವ್ ಲೆಟರ್ಸ್’ ನಾಟಕ. 1986 ರಲ್ಲಿ ಪ್ರಕಟವಾದ ಈ ನಾಟಕ ಸುಮಾರು ದೇಶಗಳಲ್ಲಿ ಪ್ರದರ್ಶನ ಕಂಡು ಜನಪ್ರಿಯಯಾದ ನಾಟಕ‌. ಪ್ರೇಮಿಗಳಿಬ್ಬರು ತಮ್ಮ ಇಡೀ ಜೀವನದ ಘಟನೆಗಳನ್ನು, ನೋವು ನಲಿವುಗಳನ್ನು , ಗೆಲುವು ಸೋಲುಗಳನ್ನು , ತಾವು ಪರಸ್ಪರ ಬರೆದುಕೊಂಡ ಪತ್ರಗಳ ಮೂಲಕ‌ ಪ್ರೇಕ್ಷಕರ ಮುಂದೆ ತೆರೆದಿಡುತ್ತಾ ಹೋಗುತ್ತಾರೆ‌. ಇದೊಂದು ಪ್ರೇಮ ಕಥೆ, ಇಬ್ಬರೇ ಕಲಾವಿದರು ಅಭಿನಯಿಸುವ ಕಥೆ‌. ನಮಗೆ ಬೇಕಾದ ನಾಟಕ ಸಿಕ್ಕಾಗಿತ್ತು‌

ಆದರೆ ಕೇವಲ ಇಬ್ಬರು ಕಲಾವಿದರೆಂಬ ಕಾರಣಕ್ಕೆ ಈ ನಾಟಕ ತೆಗೆದುಕೊಂಡದ್ದಲ್ಲ. ಬೇರೆ ಕಾರಣಗಳೂ ಸೇರಿಕೊಂಡವು. ಮೊದಲಿಗೆ ಇದೊಂದು ಭಾವನಾತ್ಮಕ ಪ್ರೇಮ ಕಥೆ. ನಮ್ಮ ಸುತ್ತಲಿನ ಇಡೀ ಜಗತ್ತು ಗದ್ದಲ, ಗೊಂದಲದಲ್ಲಿ ಸಿಲುಕಿರುವಾಗ, ದ್ವೇಷದ ಗಾಳಿಯನ್ನೇ ಉಸಿರಾಡಬೇಕಾದ ಸಂದರ್ಭದಲ್ಲಿ , ಒಂದು ಸೌಮ್ಯವಾದ, ಶಾಂತವಾದ ಪ್ರೀತಿಯ ಕಥೆಯೊಂದನ್ನು ಸಮಾಧಾನದಿಂದ ಪ್ರೇಕ್ಷಕರ ಮುಂದೆ ಹೇಳಬೇಕೆನಿಸಿತ್ತು‌.  ಹಲವು ಹತ್ತು ಅಭಿಪ್ರಾಯಗಳಿಂದ ದೂರವಾಗಿ ದ್ವೀಪಗಳಾದ ನಮ್ಮನ್ನು ಕೊನೆಗೂ ಪ್ರೀತಿ ಮಾತ್ರ ಬೆಸೆಯಲು ಸಾಧ್ಯ. ಅದು ಈ ನಾಟಕ ಮಾಡಲು ಮೊದಲ ಕಾರಣ. ಮತ್ತೊಂದು ಕಾರಣ, ನಾವೆಲ್ಲರೂ ಆಗಾಗ ಕೇಳುವ ಮಾತು – personal is political ಎಂದು. ಅದೇನೆಂದು ಈ ನಾಟಕದಲ್ಲಿ ನೋಡಬಹುದು.  ಮನುಷ್ಯರ ಬದುಕಿನ ವೈಯಕ್ತಿಕ ಬೇರೆ, ಸಾಮಾಜಿಕ ಬೇರೆ ಎಂದು ಮೇಲ್ನೋಟಕ್ಕೆ ಅನಿಸಿದರೂ,  ವ್ಯಕ್ತಿಯ ಸಾಮಾಜಿಕ ಶ್ರೇಣಿ, ಲಿಂಗ, ಸ್ಥಾನಮಾನಗಳು, ಬಾಲ್ಯದ ಅನುಭವಗಳು ಆ ವ್ಯಕ್ತಿಯ personal ಅಂದರೆ ವೈಯುಕ್ತಿಕವನ್ನೂ ನಿರ್ಧರಿಸುತ್ತದೆ‌ ಎಂಬುದು ವಾಸ್ತವ. ಅದು ಈ ನಾಟಕದಲ್ಲಿ ಪ್ರಮುಖವಾಗಿ ಕಾಣುವ ಮತ್ತೊಂದು ಅಂಶ‌ ಎಂದು ನಿರ್ದೇಶಕ ವೆಂಕಟೇಶ್ ಪ್ರಸಾದ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇವೆಲ್ಲದರ ಜೊತೆಗೆ ಇದೊಂದು ಪತ್ರ ವಿನಿಮಯದ ನಾಟಕ. ಹೆಸರೇ ಹೇಳುವಂತೆ ಇಬ್ಬರು ಪ್ರೇಮಿಗಳು ತಮ್ಮ ಜೀವನದುದ್ದಕ್ಕೂ ಬರೆದುಕೊಂಡ ಪತ್ರಗಳು ಈ ನಾಟಕದ ಜೀವಾಳ‌. ಮೊಬೈಲ್ ಮೆಸೇಜುಗಳು, ಸೋಷಿಯಲ್ ಮೀಡಿಯಾಗಳ ಇಂದಿನ ಜಗತ್ತಿನಲ್ಲಿ ಪತ್ರಗಳನ್ನು, ಬರೆಯುವ , ಓದುವ ಅನುಭವ ಖಂಡಿತಾ ಮುದ ನೀಡುವಂತದ್ದು. ಬಾಲ್ಯದಲ್ಲಿ ಪತ್ರಗಳನ್ನು ಬರೆದವರಿಗೆ ಈ ನಾಟಕ ಪತ್ರಗಳ ನೆನಪನ್ನು ತಂದರೆ , ಪತ್ರಗಳನ್ನು ಬರೆಯುವ ಅಭ್ಯಾಸವೇ ಇಲ್ಲದ ಇಂದಿನ ಕಿರಿಯರಿಗೆ ಇದು ಪತ್ರಗಳ ಲೋಕದ ಅಚ್ಚರಿಯನ್ನು ದಾಟಿಸಬಲ್ಲುದೇನೋ !

ಇವೆಲ್ಲ ಕಾರಣಗಳಿಂದ ಈ ನಾಟಕ ಒಂದು ಆಪ್ತವಾದ , ಸುಂದರವಾದ , ಭಾವನಾತ್ಮಕವಾದ ಪ್ರೇಮ ಕಥಾನಕ . ನಾನು ಮೊದಲು ನಿರ್ದೇಶಿಸಿದ ನಾಟಕಗಳಿಗಿಂತ ಭಿನ್ನವಾದ ನಾಟಕವಾದರೂ ಅಷ್ಟೇ ಮುಖ್ಯವಾದ ನಾಟಕ ಇದೆಂದು ನನಗೆ ನಂಬಿಕೆ ಇದೆ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.

Key words: ‘Love Letters-My Beloved One, Drama, Mysore, August 31

The post ಮೈಸೂರಿನಲ್ಲಿ ಆ.31 ರಂದು ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’ ಪ್ರದರ್ಶನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബി.ജെ.പിയിലേക്കുള്ള കൂടുമാറ്റം; രാഘവ് ഛദ്ദയ്ക്ക് 24 മണിക്കൂറുകൊണ്ട് നഷ്ടമായത് 10 ലക്ഷം ഫോളോവെഴ്‌സ്

ന്യൂദൽഹി: ആം ആദ്മി പാർട്ടിവിട്ട് ബി.ജെ.പിയിലേക്ക് ചേക്കേറിയ രാജ്യസഭാ എം.പി രാഘവ്...

தெலங்கானா : 'அப்பா முன்ன மாதிரி இல்ல!' – புது கட்சி தொடங்கிய சந்திரசேகர் ராவின் மகள் கவிதா!

தெலங்கானாவில் பாரதிய ராஷ்டிர சமிதி கட்சியின் தலைவர் சந்திரசேகர் ராவ்வின் மகள்...

Barrier Free Tolling: భారత్‌లో కొత్త రకం టోల్ విధానం.. వాహనాలు ఆపాల్సిన అవసరం లేకుండా…

జాతీయ రహదారులపై ప్రయాణాన్ని మరింత వేగంగా, సులభతరం చేసేందుకు కేంద్ర ప్రభుత్వం...

ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ- ಸಚಿವ ಕೆ.ವೆಂಕಟೇಶ್

ಬೆಳಗಾವಿ,ಏಪ್ರಿಲ್,25,2026 (www.justkannada.in): ‘ರಾಜ್ಯದಲ್ಲಿ  ಸಿಎಂ ಕುರ್ಚಿ ಖಾಲಿ ಇಲ್ಲ. ‘ಅಧಿಕಾರ...