7
March, 2026

A News 365Times Venture

7
Saturday
March, 2026

A News 365Times Venture

ಆ.30 ರಂದು ‘ಸುದ್ದಿಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಠಿಕೋನ’ ವಿಚಾರ ಸಂಕಿರಣ

Date:

ಚಿತ್ರದುರ್ಗ,ಆಗಸ್ಟ್,28,2025 (www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಎಸ್.ಸಿ, ಎಸ್ ಟಿ ಪತ್ರಿಕಾ ಸಂಪಾದಕರ ಸಂಘ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 30 ರಂದು ‘ಸುದ್ದಿಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಠಿಕೋನ’ ಎಂಬ ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಚಿತ್ರದುರ್ಗದ ಪತ್ರಕರ್ತರ ಭವನದ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಈ ವಿಚಾರಣ ಸಂಕಿರಣ ಆಯೋಜಿಸಲಾಗಿದ್ದು, ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಆಗಮಿಸಲಿದ್ದಾರೆ. ಗೋಷ್ಠಿ 1ರಲ್ಲಿ ಅಂಬೇಡ್ಕರ್ ಅವರ ಪತ್ರಿಕಾ ವೃತ್ತಿ ಬಗ್ಗೆ  ಶಿವಮೊಗ್ಗ ಟೆಲೆಕ್ಸ್ ದಿನಪತ್ರಿಕೆಯ ಸಂಪಾದಕ ರವಿಕುಮಾರ್ ಎನ್,  ಹಾಗೆಯೇ ‘ಪತ್ರಕರ್ತರಾಗಿ ಅಂಬೇಡ್ಕರ್ ಅವರ ಬರವಣಿಗೆಗಳ’ ಬಗ್ಗೆ ಸಾಮಾಜಿಕ ಚಿಂತಕ ವಿ.ಎಲ್ ನರಸಿಂಹಮೂರ್ತಿ  ತಿಳಿಸಿಕೊಡಲಿದ್ದಾರೆ.

ಗೋಷ್ಠಿ 2ರಲ್ಲಿ ಅಂಬೇಡ್ಕರ್ ದೃಷ್ಠಿಯಲ್ಲಿ ಲಿಂಗಸಮಾನತೆ ಬಗ್ಗೆ ಶಿವಮೊಗ್ಗದ  ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಭಾರತಿದೇವಿ. ಪಿ ಅವರು ಮಾತನಾಡಲಿದ್ದು, ಪತ್ರಕರ್ತರಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆ ಬಗ್ಗೆ ಬೆಳಗಾವಿಯ ದಿ ಹಿಂದೂ ಹಿರಿಯ ಸಹಾಯಕ ಸಂಪಾದಕ ರಿಷಿಕೇಶ್ ಬಹದ್ದೂರು ದೇಸಾಯಿ ಚರ್ಚಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಡಿ. ಉಮಾಪತಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಉಪಸ್ಥಿತರಿರಲಿದ್ದಾರೆ.

Key words: Seminar, BR Ambedkar, Perspective, Media, August 30

 

The post ಆ.30 ರಂದು ‘ಸುದ್ದಿಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಠಿಕೋನ’ ವಿಚಾರ ಸಂಕಿರಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

UPSC ಪರೀಕ್ಷೆ ಫಲಿತಾಂಶ ಪ್ರಕಟ: ಅನುಜ್​ ಅಗ್ನಿಹೋತ್ರಿ ದೇಶಕ್ಕೇ ನಂ.1

ನವದೆಹಲಿ,ಮಾರ್ಚ್,6,2026 (www.justkannada.in): ಕೇಂದ್ರ ಲೋಕಸೇವಾ ಸೇವಾ ಆಯೋಗದ (ಯುಪಿಎಸ್​ಸಿ) 2025ನೇ ಸಾಲಿನ...

സ്വന്തം ഊര്‍ജ ആവശ്യങ്ങള്‍ നിറവേറ്റാന്‍ ഇന്ത്യയ്ക്ക് മറ്റൊരു രാജ്യത്തിന്റെ അനുമതി എന്തിന്? സ്റ്റാലിന്‍

ചെന്നൈ: പശ്ചിമേഷ്യയില്‍ സംഘര്‍ഷം തുടരുന്ന സാഹചര്യത്തില്‍ റഷ്യയില്‍ നിന്നും എണ്ണ വാങ്ങുന്നതിനായി...

Vande Bharat Express: రైల్వే ప్రయాణికులకు అలర్ట్.. ఈ వందే భారత్ ట్రైన్ టైమింగ్స్‌ మారాయ్..

హిందూపూర్ స్టేషన్‌లో కాచిగూడ–యశ్వంతపూర్ వందే భారత్ ఎక్స్‌ప్రెస్ సమయాల్లో మార్పులు చేస్తూ...