7
March, 2026

A News 365Times Venture

7
Saturday
March, 2026

A News 365Times Venture

DASARA 2025: ಬಾನು ಮುಷ್ತಾಕ್ ಉದ್ಘಾಟಿಸಲು ತಕರಾರಿಲ್ಲ: ಸಂಸದ ಯದುವೀರ್.

Date:

ಮೈಸೂರು,ಆಗಸ್ಟ್,25,2025 (www.justkannada.in): ಸಾಹಿತಿ ಬಾನು ಮುಷ್ತಾಕ್  ಅವರಿಂದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ  ತಕರಾರಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನ ಆಯ್ಕೆ ಮಾಡಿದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಸಂಸದ ಯದುವೀರ್, ಬಾನು ಮುಸ್ತಾಕ್ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಆಯ್ಕೆಯಲ್ಲಿ ನನಗೆ ಯಾವುದೇ ಅಭಿಪ್ರಾಯ ಇಲ್ಲ. ಆದರೆ ತಾಯಿ ಚಾಮುಂಡೇಶ್ವರಿ ಗೌರವ ಕೊಟ್ಟರೆ ನಮ್ಮದೇನು ತಕರಾರು ಇಲ್ಲ ಎಂದಿದ್ದಾರೆ.

ನಮ್ಮ ಕನ್ನಡದ ಧ್ವಜದ ಬಣ್ಣಗಳ ಕುರಿತು ಅವರ ಹೇಳಿಕೆ ನೋಡಿದ್ದೇನೆ. ಅದು ತಪ್ಪು. ಅದಕ್ಕಾಗಿಯೇ ಕೆಲವರು ವಿರೋಧ ಮಾಡುತ್ತಿದ್ದಾರೆ. ನಮ್ಮ ಧರ್ಮಕ್ಕೆ ವಿರೋಧಿಸದೆ ಅವರು ಉದ್ಘಾಟನೆ ಮಾಡಲಿ. ನಮ್ಮ ಧಾರ್ಮಿಕ ಭಕ್ತಿಗೆ ಧಕ್ಕೆ ಬರಬಾರದು. ಚಾಮುಂಡೇಶ್ವರಿಗೆ ಗೌರವ ಕೊಡಬೇಕು ಅದಷ್ಟೇ ನಮ್ಮ ಅಭಿಪ್ರಾಯ. ನಮ್ಮ ಪಾರ್ಟಿಯ ನಿಲುವಿಗೆ ನನ್ನ ನಿಲುವು ಒಂದೇ. ನಮ್ಮ ಧರ್ಮ ಗೌರವಿಸಿ ಚಾಮುಂಡೇಶ್ವರಿಗೆ ಕೊಡಬೇಕಾದ ಗೌರವವನ್ನು ಮುಸ್ತಾಕ್ ಅವರು ನೀಡಲಿ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.

Key words: DASARA 2025,  No objection, inaugurating, Banu Mushtaq, MP Yaduveer.

The post DASARA 2025: ಬಾನು ಮುಷ್ತಾಕ್ ಉದ್ಘಾಟಿಸಲು ತಕರಾರಿಲ್ಲ: ಸಂಸದ ಯದುವೀರ್. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಅದು ಬಜೆಟ್ ನಲ್ಲಿ ಘೋಷಿಸುವ ಹಣವಲ್ಲ: ಗುತ್ತಿಗೆದಾರರು ಕಾಯಬೇಕಷ್ಟೆ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಮಾರ್ಚ್,7,2026 (www.justkannada.in): ಬಾಕಿ ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿ ಗುತ್ತಿಗೆದಾರರು...

ഇറാന്‍ വിഷയത്തില്‍ നയതന്ത്ര നിലപാട് കടുപ്പിച്ച് ഇന്തോനേഷ്യ; ബോര്‍ഡ് ഓഫ് പീസില്‍ നിന്ന് പിന്മാറി

ജാക്കാര്‍ത്ത: ഇറാനിലെ വ്യോമാക്രമണത്തിന് പിന്നാലെ യു.എസ് പ്രസിഡന്റ് ആരംഭിച്ച ഗസ ബോര്‍ഡ്...

Christopher Tilak: "உழைக்கும் தொண்டனுக்கும் கிடைத்த வெற்றியாகக் கருதுகிறேன்" – கிறிஸ்டோபர் திலக்

அகில இந்திய காங்கிரஸ் கமிட்டியின் செயலாளரும், திருச்சி மாவட்டத்தைச் சேர்ந்தவருமான கிறிஸ்டோபர்...