27
August, 2026

A News 365Times Venture

27
Thursday
August, 2026

A News 365Times Venture

ಧರ್ಮಸ್ಥಳದ ಬಗ್ಗೆ ಅಪಪ್ರಚಾರ : ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ನಿರ್ಧಾರ.

Date:

ಬೆಂಗಳೂರು,ಆಗಸ್ಟ್,22,2025 (www.justkannada.in): ಧರ್ಮಸ್ಥಳ ಬಗ್ಗೆ ಅಪಪ್ರಚಾರವನ್ನ ಖಂಡಿಸಿ ರಾಜ್ಯಾದ್ಯಂತ ‘’ಧರ್ಮಯುದ್ಧ” ಹೆಸರಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಎಸ್‌ ಐಟಿ ತನಿಖೆಯ ನೆಪದಲ್ಲಿ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಹಾಗೂ ಇದಕ್ಕೆ ಬೆಂಬಲವಾಗಿ ನಿಂತಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಧರ್ಮದ ಉಳಿವಿಗಾಗಿ “ಧರ್ಮಯುದ್ಧ” ಹೆಸರಿನಲ್ಲಿ ಪ್ರತಿಭಟನೆ ನಡೆಯಲಿದೆ.

ಕಾಂಗ್ರೆಸ್ ಮತ್ತು ಎಡಪಂಥೀಯರ ಷಡ್ಯಂತ್ರದ ವಿರುದ್ಧ ಸಮಾಜವೂ ಜಾಗೃತಗೊಳ್ಳಬೇಕಾಗಿದೆ. ಹಿಂದೂ ಶ್ರದ್ಧಾ ಕೇಂದ್ರಗಳನ್ನು ಅನುಮಾನಿಸುವ, ಅವಮಾನಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ, ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಎಸ್‌ ಐಟಿ ರಚಿಸಬೇಕೆಂದು ಹೇಳಿದ್ದೇ ನಗರ ನಕ್ಸಲರು. ನಂತರದಲ್ಲಿ ನಡೆದ ಪುಣ್ಯಕ್ಷೇತ್ರದ ತೇಜೋವಧೆ, ಅಪಪ್ರಚಾರಗಳಿಗೆ ಕಾಂಗ್ರೆಸ್ ಸರ್ಕಾರ ಕಾರಣ. ಇದರ ವಿರುದ್ಧ ಬಿಜೆಪಿ ಎಲ್ಲಾ ಕ್ಷೇತ್ರದಲ್ಲೂ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Key words: Dharmasthala, BJP, decides, protest, across, state

The post ಧರ್ಮಸ್ಥಳದ ಬಗ್ಗೆ ಅಪಪ್ರಚಾರ : ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ನಿರ್ಧಾರ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಆ.29ಕ್ಕೆ ಮೈಸೂರು ನೂತನ ಪತ್ರಕರ್ತರ ಭವನದ ಕಾಮಗಾರಿಗೆ ಚಾಲನೆ: ವಾರ್ಷಿಕ ಪ್ರಶಸ್ತಿಗಳು ಪ್ರಕಟ

ಮೈಸೂರು,ಆಗಸ್ಟ್,26,2026 (www.justkannada.in):  ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಕರ್ತರ ನೂತನ...

നേപ്പാള്‍ പ്രളയം: കേരളത്തില്‍ നിന്നുള്ളവര്‍ക്കായി ഹെല്‍പ്‌ഡെസ്‌ക് തുടങ്ങി

തിരുവനന്തപുരം: നേപ്പാളിലുണ്ടായ മിന്നല്‍ പ്രളയവുമായി ബന്ധപ്പെട്ട് കേരളീയര്‍ക്ക് അടിയന്തിര സഹായവും സേവനങ്ങളും...

"சட்டமன்றத்தில் லாவணி கச்சேரி நடந்துக்கொண்டிருக்கிறது" – தவெக, திமுக-வை தாக்கும் பெ.சண்முகம்

மார்க்ஸிஸ்ட் கம்யூனிஸ்ட் மாநிலச் செயலாளர் பெ.சண்முகம் செய்தியாளர்களைச் சந்தித்து பேசியிருக்கிறார். அப்போது,...

Karnataka: ఆకస్మిక తనిఖీలో షాకింగ్ సీన్.. ఆస్పత్రి రూమ్‌లో ప్రియురాలితో అడ్డంగా బుక్కైన..!

కర్ణాటకలో ఓ న్యాయమూర్తికి షాకింగ్ ఘటన ఎదురైంది. ఆస్పత్రిలోని ఓ గదిలో...