13
March, 2026

A News 365Times Venture

13
Friday
March, 2026

A News 365Times Venture

ಮೈಸೂರು ದಸರಾ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

Date:

ಮೈಸೂರು,ಆಗಸ್ಟ್,19,2025 (www.justkannada.in): ಸೆಪ್ಟಂಬರ್ 22 ರಿಂದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನೀಡಲು ಕಲಾವಿದರಿಂದ/ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಮೈಸೂರು ದಸರಾ ಮಹೋತ್ಸವ 2025 ಸಾಂಸ್ಕೃತಿಕ ಉಪಸಮಿತಿಯ ಕಾರ್ಯರ್ಶಿ ಡಾ.ಎಂ.ಡಿ ಸುದರ್ಶನ್,  2025-26ನೇ ಸಾಲಿನಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ದಿನಾಂಕ: 22-09-2025 ರಿಂದ 02-10-2025ರ ವರೆಗೆ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಸಾಂಸ್ಕೃತಿಕ ಉಪಸಮಿತಿಯಿಂದ ನವರಾತ್ರಿ ದಿನಾಂಕ: 22-09-2025 ರಿಂದ 30-09-2025ರ ವರೆಗೆ ವಿವಿಧ ಕಲಾಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರಮನೆ ಹಾಗೂ ಇತರೆ ವೇದಿಕೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾವಿದರಿಂದ/ಕಲಾತಂಡಗಳಿಂದ ದಿನಾಂಕ: 20-08-2025 ರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-09-2025 ಆಗಿರುತ್ತದೆ. ಸದರಿ ಅರ್ಜಿಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕಲಾಮಂದಿರ, ವಿನೋಬಾ ರಸ್ತೆ, ಮೈಸೂರು-570005 ಇಲ್ಲಿಗೆ ನೇರವಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಮಿಂಚಂಚೆ ಮೂಲಕವು ccdasara23@gamail.com ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0821-2513225ಗೆ ಸಂಪರ್ಕಿಸಲು ತಿಳಿಸಿದೆ. ಹಾಗೂ ಕಲಾವಿದರಿಗೆ ಕಾರ್ಯಕ್ರಮ ಕೊಡಿಸುವುದಾಗಿ ಯಾವುದೇ ಮಧ್ಯವರ್ತಿಗಳು ಸಂಪರ್ಕಿಸಿ ಹಣದ ಬೇಡಿಕೆ ಇಟ್ಟಲ್ಲಿ ತಕ್ಷಣ ಮಾಹಿತಿ ಸಮೇತ ಮೇಲ್ಕಾಣಿಸಿದ ಸಹಾಯಕ ನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

Key words: Mysore Dasara,  Applications, invited, cultural programs

The post ಮೈಸೂರು ದಸರಾ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಭೀಕರ ಅಪಘಾತದಲ್ಲಿ ಮೂವರು ಸಾವು.

ಮಂಗಳೂರು, ಮಾರ್ಚ್,13,2026 (www.justkannada.in): ಕೆಎಸ್ ಆರ್ ಟಿಸಿ ರಾಜಹಂಸ ಬಸ್...

ഗസയിലെ വംശഹത്യ; ഐ.സി.ജെയിലെ കേസില്‍ കക്ഷി ചേര്‍ന്ന് നെതര്‍ലാന്‍ഡ്‌സും ഐസ്‌ലാന്‍ഡും

ഹേഗ്: ഗസയില്‍ ഇസ്രഈല്‍ നടത്തുന്ന വംശഹത്യ സംബന്ധിച്ച് ഹേഗിലെ അന്താരാഷ്ട്ര നീതിന്യായ...

ராஜீவ் காந்தி பதவிக்கு வேட்டு! – `டெண்டர் முதல் இன்ஸ்டா வரை…' – வெடித்துக் கிளம்பிய விவகாரம்!

தி.மு.க வின் மாணவர் அணிச் செயலாளராகச் செயல்பட்டு வந்த ராஜீவ் காந்தியை...

IndiGo: ఇరాన్ వార్ ఎఫెక్ట్.. పెరిగిన ఇండిగో టికెట్ ధరలు..

IndiGo: మధ్యప్రాచ్యంలోని ఇరాన్ యుద్ధ ప్రభావం దేశ విమానయాన రంగంపై పడింది....