27
April, 2026

A News 365Times Venture

27
Monday
April, 2026

A News 365Times Venture

ಬೆಸ್ಕಾಂ ಸ್ಮಾರ್ಟ್ ಮೀಟರ್ ಕಡ್ಡಾಯ ಪ್ರಶ್ನಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Date:

ಬೆಂಗಳೂರು, ಆಗಸ್ಟ್ ,13,2025 (www.justkannada.in): ಬೆಸ್ಕಾಂ ಸ್ಮಾರ್ಟ್ ಮೀಟರ್ ಕಡ್ಡಾಯ ಪ್ರಶ್ನಿಸಿದ್ದ ರಿಟ್ ಅರ್ಜಿಯನ್ನ ಕರ್ನಾಟಕ ಹೈಕೋರ್ಟ್  ವಜಾಗೊಳಿಸಿದೆ.

ಬೆಸ್ಕಾಂ ಸ್ಮಾರ್ಟ್ ಮೀಟರ್ ಕಡ್ಡಾಯ ಪ್ರಶ್ನಿಸಿದ್ದ ರಿಟ್ ಅರ್ಜಿಯನ್ನು ಹಲವು ದಿನಗಳಿಂದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಂತಿಮವಾಗಿ ವಾದ ಪ್ರತಿವಾದ ಆಲಿಸಿತ್ತು. ಇದೀಗ ಹಳೆಯ ಮೀಟರ್ ಬದಲಿಸುವುದಿಲ್ಲವೆಂದು ಎಜಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ವಿಭಾಗೀಯ ಪೀಠದಲ್ಲಿ ಈ ವಿಚಾರಕ್ಕೆ ಪಿಐಎಲ್ ದಾಖಲಾಗಿದೆ ಎಂದು ಹೇಳಿ ಜಯಲಕ್ಷ್ಮಿ, ಪಿ.ಎಂ.ಹರೀಶ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ದೊಡ್ಡಬಳ್ಳಾಪುರದ ಟಿ.ಬಿ ನಾರಾಯಣಪ್ಪ ಲೇಔಟ್​ ನಿವಾಸ ಎಂ ಜಯಲಕ್ಷ್ಮೀ ಅವರು ಹೊಸದಾಗಿ ನಿರ್ಮಿಸಿರುವ ತಮ್ಮ ಮನೆಗೆ ಸಿಂಗಲ್ ಫೇಸ್​ ನಿಂದ ತ್ರೀ ಫೇಸ್​ ಗೆ ಮೀಟರ್ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಬೆಸ್ಕಾಂ ಅಧಿಕಾರಿಗಳು, ಸ್ಮಾರ್ಟ್​ ಮೀರ್ಟ್ ಅವಳವಸಿಕೊಳ್ಳಬೇಕು ಎಂದು ತಾಕೀತು ಮಾಡಿ ಪತ್ರವೊಂದನ್ನು ನೀಡಿದ್ದರು.

ಈ ಕುರಿತು ದೊಡ್ಡಬಳ್ಳಾಪುರ ನಗರ ಉಪವಿಭಾಗ ಸಹಾಯ ಕಾರ್ಯನಿರ್ವಾಹಕ ಇಂಜಿನಿಯರ್ ನೀಡಿದ್ದ ಪತ್ರವನ್ನು ಪ್ರಶ್ನಿಸಿ ವಿಯಲಕ್ಷ್ಮೀ ಹೈಕೋರ್ಟ್​​ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸ್ಮಾರ್ಟ್ ಮೀಟರ್ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸಿದ್ದರು.

Key words: High Court, dismisses , writ petition,s mart meter, mandate

The post ಬೆಸ್ಕಾಂ ಸ್ಮಾರ್ಟ್ ಮೀಟರ್ ಕಡ್ಡಾಯ ಪ್ರಶ್ನಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഉക്രൈനെതിരായ ‘വിശുദ്ധ യുദ്ധത്തില്‍’ റഷ്യയ്ക്ക് പൂര്‍ണ പിന്തുണ; നിലപാട് ആവര്‍ത്തിച്ച് ഉത്തര കൊറിയ

പ്യോങ്‌യാങ്: ഉക്രൈനെതിരായ യുദ്ധത്തില്‍ റഷ്യയ്ക്ക് പൂര്‍ണ പിന്തുണ പ്രഖ്യാപിച്ച് ഉത്തര കൊറിയന്‍...

தேர்தல் முடிந்த சூட்டோடு விநாயகர், காளி கோயிலில் சாமி தரிசனம்; சொந்த ஊரில் வைகோ

தமிழக சட்டப்பேரவைத் தேர்தல் முடிந்து விட்ட சூழலில் பதிவான அதிக வாக்கு...

CM Revanth Reddy : BRS ఒక చచ్చిపోయిన శవం.. దానికి భవిష్యత్తు లేదు

CM Revanth Reddy : ముఖ్యమంత్రి రేవంత్ రెడ్డి బీఆర్ఎస్ పార్టీపై...

ಸಂಪುಟ ಪುನಾರಚನೆಯಾಗಿ ಬೇರೆಯವರಿಗೂ ಅವಕಾಶ ಸಿಗಬೇಕು- ಸಚಿವ ದಿನೇಶ್ ಗುಂಡೂರಾವ್

ಹುಬ್ಬಳ್ಳಿ,ಏಪ್ರಿಲ್,27,2026 (www.justkannada.in): ಸಚಿವ ಸಂಪುಟ ಪುನಾರಚನೆಯಾಗಿ ಬೇರೆಯವರಿಗೂ ಅವಕಾಶ  ಸಿಗಬೇಕು...