27
April, 2026

A News 365Times Venture

27
Monday
April, 2026

A News 365Times Venture

ರಾಜ್ಯದಲ್ಲಿ ಆ.15ರವರೆಗೆ ಭಾರಿ ಮಳೆ ಮುನ್ಸೂಚನೆ.

Date:

ಬೆಂಗಳೂರು,ಆಗಸ್ಟ್,12,2025 (www.justkannada.in):  ರಾಜ್ಯದಲ್ಲಿ ಆಗಸ್ಟ್ 15ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ಆಗಸ್ಟ್ 13 ರಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಮುಂದಿನ ವಾರ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಒಳನಾಡು ದಕ್ಷಿಣ ಒಳನಾಡಿನಲ್ಲಿ  ಆಗಸ್ಟ್ 15ರವರೆಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 16 ರಂದು ಕರಾವಳಿ ಜಿಲ್ಲೆಗಳು ಸೇರಿ ರಾಜ್ಯದಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಆಗಸ್ಟ್ 13 ರಿಂದ 17ರ ವರೆಗೆ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲೆಗಳ ಹಲವು ಕಡೆ ಭಾರಿ ಮಳೆ ಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಆಗಸ್ಟ್ 12 ರಿಂದ 18ರವರೆಗೆ ಬೆಂಗಳೂರಿನ ಕೆಲವೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹೇಳಲಾಗಿದೆ.

Key words: Heavy rains, forecast , state

The post ರಾಜ್ಯದಲ್ಲಿ ಆ.15ರವರೆಗೆ ಭಾರಿ ಮಳೆ ಮುನ್ಸೂಚನೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

വാക്ക് പാലിച്ച് മുസ്‌ലിം ലീഗ്; പൂജയും പ്രാര്‍ത്ഥനയുമായി ഗുണഭോക്താക്കള്‍, ലീഗ് നിര്‍മിച്ചുനല്‍കിയ വീടുകളുടെ ഗൃഹപ്രവേശനം നടന്നു

കല്‍പ്പറ്റ: വയനാട് ഉരുള്‍പ്പൊട്ടല്‍ ദുരന്തബാധിതരോടുള്ള വാക്ക് പാലിച്ച് മുസ്‌ലിം ലീഗ്. പുനരധിവാസ...

`பருத்தி விளைஞ்ச பூமி இது சாமி! இன்னும் எத்தன உசுரு?!' – அரசுக்குக் கேட்குமா சிவகாசியின் அபயக்குரல்?

சிவகாசி - குட்டி ஜப்பான்தமிழகத்தின் விருதுநகர் மாவட்டத்தில் அமைந்துள்ள சிவகாசி மற்றும்...

ಮೇ 15ಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಶಕ್ತಿ ಕೊಡುವ ಭರವಸೆ ಇದೆ-ಶಾಸಕ ರಂಗನಾಥ್

ಬೆಂಗಳೂರು,ಏಪ್ರಿಲ್,27,2026 (www.justkannada.in):  ಮೇ15 ರಂದು ಡಿಸಿಎಂ ಡಿಕೆ ಶಿವಕುಮಾರ್ ಹುಟ್ಟುಹಬ್ಬ...