29
September, 2026

A News 365Times Venture

29
Tuesday
September, 2026

A News 365Times Venture

ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗನ ವಿರುದ್ದ ಗಂಭೀರ ಆರೋಪ

Date:

ಬೆಳಗಾವಿ,ಆಗಸ್ಟ್,12,2025 (www.justkannada.in):  ಕೆಲಸ ಕೊಡಿಸುವುದಾಗಿ ಹೇಳಿ 16 ಜನರಿಂದ  34 ಲಕ್ಷಕ್ಕೂ ಹೆಚ್ಚು ಹಣವನ್ನ ಪಡೆದು ವಂಚನೆ ಮಾಡಿರುವ ಆರೋಪ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗ ಮಂಜುನಾಥ್ ವಿರುದ್ದ ಕೇಳಿಬಂದಿದೆ.

ಸಾಮಾಜಿಕ ಕಾರ್ಯಕರ್ತ ಜಯಂತ ತೀನೇಕರ್ ಎಂಬುವವರು ಈ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು,  ಸಚಿವೆ ಲಕ್ಷ್ಮೀ ಹೆಬ್ಬಾಳ್ಕ ರ್ ಬೆಂಬಲಿಗ ಮಂಜುನಾಥ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 16 ಜನರಿಗೆ ವಂಚನೆ ಮಾಡಿದ್ದಾರೆ.  34 ಲಕ್ಷಕ್ಕೂ ಅಧಿಕ ಹಣ ಪಡದು ವಂಚನೆ ಮಾಡಿದ್ದಾರೆ. ರಾಜ್ಯಪಾಲರ ಆದೇಶ ನಕಲಿ ಪತ್ರಗಳನ್ನ ನೀಡಿ ವಂಚಿಸಿದ್ದಾರೆ. ಅಲ್ಲದೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ  ನಕಲಿ ಸಹಿ ಮಾಡಿ ಆದೇಶ ಪ್ರತಿ ವಿತರಿಸಿದ್ದು, ಬೆಳಗಾವಿ ಬೈಲಹೊಂಗಲ ಖಾನಾಪುರ ಸೇರಿ ಹಲವೆಡೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಳರ್ ಅವರ ಖಾಸಗಿ ಪಿಎ ಸಂಗನಗೌಡ ಹೆಸರು ತಳಕು ಹಾಕಲಾಗಿದೆ.  ನಾವು ಕೊಟ್ಟ ದೂರನ್ನು ಪೊಲೀಸರು ಸ್ವೀಕರಿಸದ ಹಿನ್ನೆಲೆ ಗಂದಿಗವಾಡದ ಕಾವ್ಯ ಯಲ್ಲೂರಿಂದ ವಂಚನೆ ಕುರಿತು ಕೋರ್ಟ್ ನಲ್ಲಿ ದೂರು ನೀಡಲಾಗಿದೆ.  ನಾವು ಕೋರ್ಟ್ ನಲ್ಲಿ ಕೇಸ್ ಹಾಕಿದ್ದೇವೆ.  ಕಿತ್ತೂರು ಠಾಣೆ ವ್ಯಾಪ್ತಿಗೆ ಈ ಘಟನೆ ಬರದಿದ್ದರೂ ಕಿತ್ತೂರು ಪೊಲೀಸರಿಂದ ನಿರಂತರ ಕಿರಿಕಿರಿಯಾಗುತ್ತಿದೆ.  ಈ ಬಗ್ಗೆ ರಾಜ್ಯಪಾಲರು ಸಿಎಂ, ಗೃಹಸಚಿವರಿಗೂ ದೂರು ನೀಡಿದ್ದೇವೆ ಎಂದು ಜಯಂತ್ ತಿನೇಕರ್ ತಿಳಿಸಿದ್ದಾರೆ.

Key words: Fraud, allegations, against, Minister Lakshmi Hebbalkar’s, supporter

The post ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗನ ವಿರುದ್ದ ಗಂಭೀರ ಆರೋಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Honor Smart Phone: 200MP కెమెరా, 11,000mAh బ్యాటరీ.. మార్కెట్లోకి కొత్త స్మార్ట్ ఫోన్ లాంచ్..

హానర్ సంస్థ తన కొత్త మ్యాజిక్ 9 సిరీస్‌లో భాగంగా ‘హానర్...

ನೈಸ್ ದಾರಿ ತಪ್ಪುವುದಕ್ಕೆ  HDK ಅಂಡ್ ಫ್ಯಾಮಿಲಿ ಕಾರಣ-ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆ ಅಕ್ರಮ ವಿಚಾರವಾಗಿ ಸಿಎಂ ಡಿಕೆ...

മോദിയെ വിമർശിച്ചതിന് പിന്നാലെ നടപടി; കാർട്ടൂണിസ്റ്റ് സതീഷ് ആചാര്യയുടെ ഇൻസ്റ്റാഗ്രാം പേജ് ഇന്ത്യയിൽ ബ്ലോക്ക് ചെയ്തു

ന്യൂദൽഹി: പ്രമുഖ രാഷ്ട്രീയ കാർട്ടൂണിസ്റ്റ് സതീഷ് ആചാര്യയുടെ ഇൻസ്റ്റാഗ്രാം അക്കൗണ്ടിന് ഇന്ത്യയിൽ...

"நான் அவர்களை குறிப்பிடவில்லை, மோகன் குமாரமங்கலம் எனக்கு தோழர்.!"- சர்ச்சைக்கு ராஜ்மோகன் விளக்கம்

தேர்தல் ஆணையர் ஞானேஷ் குமார் தன்னிச்சையாக செயல்பட்டிருப்பதால் அவர் பதவி விலக...