29
March, 2026

A News 365Times Venture

29
Sunday
March, 2026

A News 365Times Venture

ವರುಣ, ಕನಕಪುರ ಯಾವುದೇ ಕ್ಷೇತ್ರವಾಗಲಿ, ಅಕ್ರಮ ಆಗಿದ್ದರೆ ಕ್ರಮ ಕೈಗೊಳ್ಳಲಿ- ಡಿಕೆ ಶಿವಕುಮಾರ್

Date:

ಬೆಂಗಳೂರು,ಆಗಸ್ಟ್,8,2025 (www.justkannada.in): ನಾವು ಅನ್ಯಾಯದ ವಿರುದ್ದ ಹೋರಾಡಿದ್ದೇವೆ. ವರುಣ ಕ್ಷೇತ್ರವಾಗಲಿ, ಕನಕಪುರ ಕ್ಷೇತ್ರವೇ ಆಗಲಿ ಯಾವುದೇ ಕ್ಷೇತ್ರದಲ್ಲಿ ಮತದಾನ ಅಕ್ರಮವಾಗಿದ್ದರೇ ಕ್ರಮ ಕೈಗೊಳ್ಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಮುಖ್ಯ ಚುನಾವಣಾ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ನಾವು ಅನ್ಯಾಯದ ವಿರುದ್ದ ಹೋರಾಡಿದ್ದೇವೆ. ಮುಖ್ಯ ಚುನಾವಣಾಧಿಕಾರಿ ಭೇಟಿ ಮಾಡಿದ್ದೇವೆ . ಇಂದು ಇಡೀ ದೇಶ ನೋಡುವ ಪ್ರತಿಭಟನೆ ಮಾಡಿದ್ದೇವೆ.  ಇಂದು ಹಬ್ಬ ಇದ್ದರೂ ಮತದಾನದ ಹಕ್ಕಿಗಾಗಿ ಪ್ರತಿಭಟನೆ  ಮಾಡಿದ್ದೇವೆ ಎಂದರು.

ಯಾವ ರೀತಿ ಅನ್ಯಾಯ ಆಗಿದೆ ಎಂದು ನಿನ್ನೆ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ.  ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ದ ಕ್ರಮ ಆಗಬೇಕು. ಅಕ್ರಮ ನಡೆದಿರುವುದಕ್ಕೆ ಬೇಕಾದಷ್ಟು ದಾಖಲೆಗಳಿವೆ ಆಯೋಗಕ್ಕೆ ಮನವಿ ಪತ್ರ ನೀಡಿದ್ದೇವೆ ವಿಸ್ತೃತವಾಗಿ ನೀಡಿಲ್ಲ. ನಾವು ಕೂಡ ರಿಸರ್ಚ್ ಮಾಡಿದ್ದೇವೆ. ವರುಣ ಕ್ಷೇತ್ರ ಆಗಲಿ ಕನಕಪುರ ಕ್ಷೇತ್ರವೇ ಆಗಲಿ ಯಾವುದೇ ಕ್ಷೇತ್ರದಲ್ಲಿ ಅಕ್ರಮ ಆಗಿದ್ದರೂ ಕ್ರಮ ಕೈಗೊಳ್ಳಲಿ ಅಕ್ರಮ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: illegal Voting, DCM, DK Sivakumar, Election office, visit

The post ವರುಣ, ಕನಕಪುರ ಯಾವುದೇ ಕ್ಷೇತ್ರವಾಗಲಿ, ಅಕ್ರಮ ಆಗಿದ್ದರೆ ಕ್ರಮ ಕೈಗೊಳ್ಳಲಿ- ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪ್ರತಿಯೊಬ್ಬರೂ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

  ಮೈಸೂರು :ಮಾರ್ಚ್ -28: ಪ್ರತಿಯೊಬ್ಬರೂ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು....

ഒഡീഷയില്‍ രാമനവമി ആഘോഷങ്ങള്‍ക്കിടെ വെടിയുതിര്‍ത്ത് ബി.ജെ.പി എം.എല്‍.എ; പരിഭ്രാന്തരായി ജനക്കൂട്ടം; വ്യാപക അക്രമങ്ങള്‍

ഭുവനേശ്വര്‍: ഒഡീഷയില്‍ നടന്നരാമനവമി ആഘോഷങ്ങള്‍ക്കിടയില്‍ ബി.ജെ.പി എം.എല്‍.എ വെടിയുതിര്‍ത്ത് ആള്‍ക്കൂട്ടത്തിനിടയില്‍ പരിഭ്രാന്തി...

'மாற்றுக் கட்சி சீனியர்கள்..' ஸ்டாலின், உதயநிதிக்கு எதிராக விஜய் டிக் அடித்திருக்கும் அந்த இருவர்!

திமுகவின் வேட்பாளர் பட்டியல் வெளியாகியிருக்கிறது. 164 வேட்பாளர்கள் திமுக சார்பில்...

Iran Warning: భూతల దాడులు చేస్తే… అమెరికాకు అదే గతి.. ఇరాన్ పత్రిక వార్నింగ్

పశ్చిమాసియా యుద్ధం ప్రారంభమైన నెల రోజుల తర్వాత మరింత తీవ్ర రూపం...