14
March, 2026

A News 365Times Venture

14
Saturday
March, 2026

A News 365Times Venture

ರಸಗೊಬ್ಬರ ಕೊರತೆ: ಬಿಜೆಪಿಗೆ ಧಮ್, ತಾಕತ್ತಿದ್ದರೇ ಕೇಂದ್ರದ ಮೇಲೆ ಒತ್ತಡ ಹಾಕಲಿ- ಸಚಿವ ಚಲುವರಾಯಸ್ವಾಮಿ

Date:

ಬೆಂಗಳೂರು,ಜುಲೈ,28,2025 (www.justkannada.in): ಬಿಜೆಪಿಗೆ ಧಮ್, ತಾಕತ್ತಿದ್ದರೇ ರಾಜ್ಯಕ್ಕೆ  ರಸಗೊಬ್ಬರ ಪೂರೈಸಲು ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ  ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ರಸಗೊಬ್ಬರ ಸಿಗದೆ ರೈತರ ಪರದಾಟ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಈ ಬಗ್ಗೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯದ  ಡಿಸಿಗಳು ಕಾರ್ಯದರ್ಶಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ.  ಕೇಂದ್ರ ಸರ್ಕಾರವೇ ನಮಗೆ ಯೂರಿಯಾ ಒದಗಿಸುತ್ತದೆ ಹೀಗಾಗಿ ನಾವು ಇದರಲ್ಲಿ ರಾಜಕೀಯ ಮಾಡಲು ಹೋಗಿರಲಿಲ್ಲ. ಬಿಜೆಪಿಗರು ರಾಜಕೀಯವಾಗಿ ಮಾತಾಡಿದರೆ ಏನು ಮಾಡಲು ಆಗಲ್ಲ ಬಿಜೆಯವರಿಗೆ ಕೇಂದ್ರದ ಬಳಿ ಹೋಗಿ ಹೇಳುವ ಧಮ್ ಇಲ್ಲ ಎಂದು ಕುಟಕಿದರು.

ರೈತರಿಗೆ ರಸಗೊಬ್ಬರ ಕೊಡುತ್ತಿದ್ದೇವೆ  ಕೊಪ್ಪಳದಲ್ಲೂ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.  ರೈತರ ಸಮಸ್ಯೆಗಳ ಮೇಲೆಯೂ ರಾಜಕಾರಣ ಮಾಡುತ್ತಾರೆ ಇದಕ್ಕೆ ಏನು ಮಾಡಲು ಆಗಲ್ಲ. ರೈತರ ಪರ ನಾವು ಇದ್ದೇವೆ.  ಕೇಂದ್ರದಿಂದ ಬರಬೇಕಾದ ಬಾಕಿ ಯೂರಿಯಾಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ.  ಬಿಜೆಪಿಗೆ ಧಮ್ ತಾಕತ್ತಿದ್ದರೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಚಾಲೆಂಜ್ ಮಾಡಿದರು.vtu

Key words: Fertilizer, shortage, BJP, Central Government, Minister, Chaluvarayaswamy

The post ರಸಗೊಬ್ಬರ ಕೊರತೆ: ಬಿಜೆಪಿಗೆ ಧಮ್, ತಾಕತ್ತಿದ್ದರೇ ಕೇಂದ್ರದ ಮೇಲೆ ಒತ್ತಡ ಹಾಕಲಿ- ಸಚಿವ ಚಲುವರಾಯಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕೃಷ್ಣ ಮೇಲ್ದಂಡೆ ಯೋಜನೆ: ಸರ್ವಪಕ್ಷ ಸಭೆ ಕರೆದಿದ್ದೇವೆ- ಡಿಸಿಎಂ ಡಿಕೆ ಶಿವಕುಮಾರ್

ಬಾಗಲಕೋಟೆ,ಮಾರ್ಚ್,14,2026 (www.justkannada.in) : ಕೃಷ್ಣ ಮೇಲ್ದಂಡೆ ಯೋಜನೆ ಸಂಬಂಧ ನವದೆಹಲಿಯಲ್ಲಿ...

കരുതലിന്റെ കാതല്‍; വയനാട് ടൗണ്‍ഷിപ്പിലെ താമസക്കാര്‍ക്ക് സാധന സാമഗ്രികള്‍ വാങ്ങാന്‍ ഒരു ലക്ഷം വീതം

തിരുവനന്തപുരം: ഒരുക്കിയ വയനാട് ടൗണ്‍ഷിപ്പിലെ താമസക്കാര്‍ക്ക് കൂടുതല്‍ ധനസഹായവുമായി സംസ്ഥാന സര്‍ക്കാര്‍....

"தேர்தலில் போட்டியிடும்படி மோடியின் பிரதிநிதி என்னை சந்தித்தார்" – எம்.பி ஆக ஆசைப்படும் ஐ.எம்.விஜயன்

கேரளாவில் விரைவில் சட்டசபை தேர்தல் நடைபெற உள்ளது. கேரளாவைச் சேர்ந்த இந்தியக்...

War Effect : తెలంగాణలో వార్ ఎఫెక్ట్.. చరిత్ర సృష్టించిన విద్యుత్ శాఖ

తెలంగాణ రాష్ట్ర విద్యుత్ రంగం సరికొత్త చరిత్రను లిఖించింది. రాష్ట్ర చరిత్రలో...