26
June, 2026

A News 365Times Venture

26
Friday
June, 2026

A News 365Times Venture

ನಾಡ ಬಾಂಬ್ ಸ್ಪೋಟ:  ಮಹಿಳೆಯ ಮುಖ ಛಿದ್ರ ಛಿದ್ರ

Date:

ಮೈಸೂರು,ಜುಲೈ,25,2025 (www.justkannada.in): ನಾಡ ಬಾಂಬ್ ಸ್ಪೋಟಗೊಂಡು ಮಹಿಳೆಯ ಮುಖ ಛಿದ್ರ ಛಿದ್ರವಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹುಳಲಾಲು ಗ್ರಾಮದಲ್ಲಿ ನಡೆದಿದೆ.

ಕಮಲಮ್ಮ (55) ಗಂಭೀರ ಗಾಯಗೊಂಡ ಮಹಿಳೆ. ಅಡಿಕೆಕಾಯಿ ಎಂದು ಭಾವಿಸಿ  ಮಹಿಳೆ ನಾಡ ಬಾಂಬ್ ಚೆಚ್ಚಿದ್ದು ಈ ವೇಳೆ ಗಂಭೀರ ಗಾಯಗೊಂಡಿದ್ದಾರೆ.

ಮನೆಯ ಮುಂಭಾಗದಲ್ಲಿರುವ ತೋಟದಲ್ಲಿ ಅಡಿಕೆಕಾಯಿ ಬಿದ್ದಿರಬಹುದು ಎಂದು ತಿಳಿದುಕೊಂಡಿದ್ದ ಮಹಿಳೆ ಅಡಿಕೆಕಾಯಿ ಎಂದು ಚಚ್ಚಿದ್ದಾರೆ. ಕಾಡು ಹಂದಿಗಳ ಹಾವಳಿ ತಪ್ಪಿಸಲು ರೈತರು ನಾಡ ಬಾಂಬ್ ಇಟ್ಟಿದ್ದರು ಎನ್ನಲಾಗಿದೆ.  ಅದನ್ನು ಅಡಿಕೆಕಾಯಿ ಎಂದು ಕಮಲಮ್ಮ ಮನೆಗೆ ತಂದಿದ್ದರು ಎನ್ನಲಾಗಿದೆ.

ಸುತ್ತಿಗೆಯಿಂದ ಚಚ್ಚಿದ ವೇಳೆ ಮುಖ ಕೈಕಾಲು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಗಾಯಾಳು ಕಮಲಮ್ಮಗೆ ಚಿಕಿತ್ಸೆ ನೀಡಲಾಗುತ್ತಿದೆ.

Key words: Nada bomb, blast, Woman, Injury, Mysore

The post ನಾಡ ಬಾಂಬ್ ಸ್ಪೋಟ:  ಮಹಿಳೆಯ ಮುಖ ಛಿದ್ರ ಛಿದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Ayodhya: అయోధ్య రామాలయ విరాళాల కుంభకోణంలో కీలక పరిణామం.. ట్రస్ట్ కీలక సభ్యులు రాజీనామా..

Ayodhya: అయోధ్య రామాలయ విరాళాల దుర్వినియోగం వ్యవహారంలో ముఖ్యమంత్రి యోగి ఆదిత్యనాథ్...

ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ರೆ ಕಠಿಣ ಕ್ರಮ ಅನಿವಾರ್ಯ-ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜೂನ್,26,2026 (www.justkannada.in): ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ದರೆ...

എസ്.ഐ.ആര്‍ ഒരുവര്‍ഷം പിന്നിട്ടപ്പോള്‍ വോട്ടര്‍ പട്ടികയില്‍ നിന്ന് പുറത്താക്കിയത് ആറ് കോടിയോളം വോട്ടര്‍മാരെ

ന്യൂദല്‍ഹി: രാജ്യത്തെ തീവ്ര വോട്ടര്‍ പട്ടിക പുനപരിശോധന (എസ്.ഐ.ആര്‍) ഒരു വര്‍ഷം...

`கர்நாடக அரசின் பிராக்ஸி அரசா இந்த அரசு?' – ஜனநாயகன் பட தயாரிப்பாளர் நியமனத்திற்கு அதிமுக எதிர்ப்பு

தமிழ்நாடு அரசின் டெல்லி சிறப்புப் பிரதிநிதியாக ஜனநாயகன் திரைப்படத்தின் தயாரிப்பாளரான கே.வெங்கட...