3
May, 2026

A News 365Times Venture

3
Sunday
May, 2026

A News 365Times Venture

ಹಾಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರೆಸಿ- ಕೆ.ವಿವೇಕಾನಂದ ಮನವಿ

Date:

ಮೈಸೂರು,ಜುಲೈ,23,2025 (www.justkannada.in): ನ್ಯಾಯಾಲಯದಲ್ಲಿ ವ್ಯಾಜ್ಯ ಮುಗಿಯುವವರೆಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರೆಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರಿಗೆ ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ ಮನವಿ ಮಾಡಿದ್ದಾರೆ.

ಈ ಕುರಿತು ಸಚಿವ ಎಂ.ಸಿ ಸುಧಾಕರ್ ಅವರಿಗೆ ಪತ್ರ ಬರೆದಿರುವ ಎಂಎಲ್ ಸಿ ವಿವೇಕಾನಂದ, ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾ ಅವಧಿ ದಿನಾಂಕ:-2/8/2025 ರಂದು ಮುಗಿಯಲ್ಲಿದೆ.  ಏಕ ಕಾಲದಲ್ಲಿ ಸರಿ ಸುಮಾರು 10500 ಅತಿಥಿ ಉಪನ್ಯಾಸಕರು ಕರ್ತವ್ಯದಿಂದ ಬಿಡುಗಡೆ ಹೊಂದಲಿದ್ದಾರೆ. ಇದರಿಂದ ಕಾಲೇಜಿನಲ್ಲಿ ಪಾಠಪ್ರವಚನಕ್ಕೆ ತೊಂದರೆಯಾಗಲಿದ್ದು, ಅಲ್ಲದೆ ಸ್ಥಾನಕ್ಕೆ ಪರ್ಯಾಯವಾಗಿ ನೇಮಿಸಿಕೊಳ್ಳಲು ನ್ಯಾಯಾಲಯದಲ್ಲಿ ವ್ಯಾಜ್ಯವಿರುವುದರಿಂದ ಯಾವುದೇ ನೇಮಕಾತಿಯ ಕೌನ್ಸಿಲಿಂಗ್ ಪ್ರಕ್ರಿಯೆ ಕೈಗೊಂಡಿರುವುದಿಲ್ಲ.

ಈ ಕಾರಣದಿಂದಾಗಿ ಇಲಾಖೆಯು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದಿರುವುದರಿಂದ ಹಾಗೂ ವಿದ್ಯಾರ್ಥಿಗಳಿಗೆ ಇನ್ನೂ 2 ತಿಂಗಳಿಗೆ ಪರೀಕ್ಷೆ ಬರುವುದರಿಂದ. ವಿದ್ಯಾರ್ಥಿಗಳ & ಶೈಕ್ಷಣಿಕ ಹಿತದೃಷ್ಟಿಯಿಂದ ವ್ಯಾಜ್ಯವು ಇತ್ಯರ್ಥ ಆಗುವವರೆಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಗಳನ್ನು ಸೇವೆಯಲ್ಲಿ ಮುಂದುವರೆಸಲು ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.vtu

Key words: Continue, guest lecturers, service, MLC,  K.Vivekananda

 

The post ಹಾಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರೆಸಿ- ಕೆ.ವಿವೇಕಾನಂದ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മണ്ഡല പുനര്‍നിര്‍ണയത്തില്‍ സീറ്റുകള്‍ കുറഞ്ഞാലും കുഴപ്പമില്ല; രാജ്യസഭയെ യു.എസ് സെനറ്റ് മാതൃകയിലാക്കണമെന്ന് കെ. കവിത

  ഹൈദരാബാദ്: രാജ്യത്ത് മണ്ഡല പുനര്‍നിര്‍ണയം നടപ്പിലാക്കുമ്പോള്‍ ഉണ്ടാകാന്‍ സാധ്യതയുള്ള ഫെഡറല്‍...

ஈரான் Lock ஆன '5' விஷயங்கள்: ஹார்முஸ் ஜலசந்தியை அமெரிக்கா முற்றுகையிட்டதன் விளைவு!

ஈரான் - அமெரிக்கா போர் இன்னும் முடிந்தபாடில்லை. அமெரிக்காவிற்கு நெருக்கடி கொடுக்க...

Vaibhav Sooryavanshi: బిగ్ షాక్.. వైభవ్ సూర్యవంశీని ఐపీఎల్ నుంచి తొలగించాలంటూ డిమాండ్స్..

ఐపీఎల్ 2026 సీజన్‌లో రాజస్థాన్ రాయల్స్ (RR) తరపున సంచలన ఇన్నింగ్స్‌లతో...

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಬಗೆಹರಿದ ಬಳಿಕ ಗ್ಯಾಸ್ ಸಿಲಿಂಡರ್ ದರ ಇಳಿಕೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ದಾವಣಗೆರೆ,ಮೇ,2,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದ, ಹೋರ್ಮಜ್ ಜಲಸಂಧಿ ಬಿಕ್ಕಟ್ಟಿನಿಂದ ಗ್ಯಾಸ್...