14
March, 2026

A News 365Times Venture

14
Saturday
March, 2026

A News 365Times Venture

ಕೇಂದ್ರಕ್ಕೆ ಅಪವಾದ ತರಲು ವ್ಯಾಪಾರಿಗಳಿಗೆ ನೋಟಿಸ್: ಇದು ಸ್ವಯಂಕೃತ ಅಪರಾಧ- ಛಲವಾದಿ ನಾರಾಯಣಸ್ವಾಮಿ

Date:

ಬೆಂಗಳೂರು,ಜುಲೈ,23, 2025 (www.justkannada.in): ಕೇಂದ್ರ ಸರ್ಕಾರಕ್ಕೆ ಅಪವಾದ ತರಲು ರಾಜ್ಯ ಸರ್ಕಾರ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡುತ್ತಿದೆ.  ಇದು ಸ್ವಯಂಕೃತ ಅಪರಾಧ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಮುಡಾ ಕೇಸ್ ನಲ್ಲಿ ಸುಪ್ರೀಂಕೋರ್ಟ್ ಆದೇಶ ಗೌರವಿಸುತ್ತೇವೆ. ಸಿದ್ದರಾಮಯ್ಯ ನಿರಪರಾಧಿ ಅಂತಾ ಕ್ಲೀನ್ ಚಿಟ್ ಕೊಟ್ಟಿದ್ದಾರಾ?  ಕ್ಲಿನ್ ಚಿಟ್ ಕೊಟ್ಟಿದ್ದರೆ ಕಾಂಗ್ರೆಸ್ ವಿಜೃಂಭಿಸಬೇಕು. ಆದರೆ ಸಿದ್ದರಾಮಯ್ಯನವರೇ ನೀವು ಈಗಲೂ ಕೂಡ ಅಪರಾಧಿಯೇ..? ಇವತ್ತಲ್ಲ ನಾಳೆ ನೀವು ಸಿಕ್ಕಿ ಬೀಳುತ್ತೀರಿ.  ಸಿಎಂ ಅವರೇ ನೀವು ದಾಖಲೆಗಳನ್ನ ಮುಚ್ಚಿಟ್ಟಿದ್ದರಿಂದ  ಕೋರ್ಟ್ ನಲ್ಲಿ ದಾಖಲೆ ಕೊಡಲು ಕಷ್ಟವಾಯಿತು ಎಂದರು.

ವಿಧಾನಮಂಡ ಮಂಡಲ ಅಧಿವೇಶನ 11 ದಿನ ಮಾತ್ರ ಕರೆದಿದ್ದಾರೆ. ಇದರಲ್ಲಿ ಮೊದಲ ದಿನ ಲೆಕ್ಕವೇ ಇಲ್ಲ.  8 ದಿನ ಮಾತ್ರ ಅಧಿವೇಶನ ನಡೆಯಲಿದೆ.  ಕೆಲವು ವಿಧೇಯಕಗಳನ್ನ ಪಾಸ್ ಮಾಡಿಕೊಳ್ಳಲು ಸರ್ಕಾರ ನುಣುಚಿಕೊಳ್ಳಲು ಅಧೀವೇಶನ ಕರೆದಂತಿದೆ.  ಪೊಲೀಸ್ ಇಲಾಖೆ,  ಕಾಂಗ್ರೆಸ್ ನವರು ಮಾಡಿದ ಅನಾಹುತಗಳು, ಭ್ರಷ್ಟಾಚಾರಿಗಳಿಗೆ ಕ್ಲಿನ್ ಚಿಟ್ ಕೊಡಲು ಮಾತ್ರ ಬಳಕೆಯಾಗುತ್ತಿದೆ   ಹಿಂದೂ ದೇವಸ್ಥಾನಗಳನ್ನ ಟಾರ್ಗೆಟ್ ಮಾಡುವ ಕೆಲಸ ಮಾಡುತ್ತಿದ್ದಾರೆ.  ಕೇರಳ ಪೊಲೀಸರು ಬಂದು ತನಿಖೆ ಮಾಡುವಂತೆ ಕಮ್ಯುನಿಸ್ಟ್ ಗಳು ಪತ್ರ ಬರೆಯುತ್ತಿದ್ದಾರೆ . ಈ ಎಲ್ಲಾ ವಿಚಾರಗಳನ್ನ ಸದನದಲ್ಲಿ ಪ್ರಸ್ತಾಪ ಮಾಡಬೇಕಿದೆ.  ಸಿದ್ದರಾಮಯ್ಯ ಸರ್ಕಾರ ಸುಳ್ಳು ಮೋಸ ವಂಚನೆಗೆ ಹೆಸರಾಗಿದೆ ಎಂದು ವಾಗ್ದಾಳಿ ನಡೆಸಿದರು.vtu

Key words: Notice, traders, self-inflicted crime, Chalavadi Narayanaswamy

The post ಕೇಂದ್ರಕ್ಕೆ ಅಪವಾದ ತರಲು ವ್ಯಾಪಾರಿಗಳಿಗೆ ನೋಟಿಸ್: ಇದು ಸ್ವಯಂಕೃತ ಅಪರಾಧ- ಛಲವಾದಿ ನಾರಾಯಣಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮಾ.28ಕ್ಕೆ ಒಳಮೀಸಲಾತಿ ಬಗ್ಗೆ ಸಭೆ: ಅಂದು ಸಮಸ್ಯೆ ಬಗೆಹರಿಯುತ್ತೆ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾರ್ಚ್,14,2026 (www.justkannada.in): ಮಾರ್ಚ್ 28ಕ್ಕೆ ಸಿಎಂ ಸಿದ್ದರಾಮಯ್ಯ ಒಳಮೀಸಲಾತಿ ಬಗ್ಗೆ...

ഹോട്ടലുകള്‍ കല്‍ക്കരിയിലേക്കും വീടുകള്‍ക്ക് പി.എന്‍ജിയിലേക്കും മാറണം; എല്‍.പി.ജി ക്ഷാമം പരിഹരിക്കാന്‍ സര്‍ക്കാരിന്റെ പുതിയ നിര്‍ദേശം

ന്യൂദല്‍ഹി: ഇറാനെതിരായ ഇസ്രഈല്‍-അമേരിക്ക യുദ്ധത്തിന്റെ അനന്തരഫലമായി ഇന്ധന ക്ഷാമം രൂക്ഷമാവുന്ന സാഹചര്യത്തില്‍...

Mahmudullah: భారత్ చేతిలో ఆ ఓటమి ఇప్పటికీ మర్చిపోలేము.. ఆటగాళ్లందరం బోరున ఏడ్చేశాం.!

Mahmudullah: 2016 టీ20 వరల్డ్‌కప్‌ లో భారత్‌ తో జరిగిన మ్యాచ్‌...