3
May, 2026

A News 365Times Venture

3
Sunday
May, 2026

A News 365Times Venture

ಸುಪ್ರೀಂ ತೀರ್ಪು: ಇನ್ನಾದರೂ ಬಿಜೆಪಿ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲಿ- ಸಚಿವ ಹೆಚ್.ಸಿ ಮಹದೇವಪ್ಪ

Date:

ಬೆಂಗಳೂರು,ಜುಲೈ,22, 2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದ ಸಂಬಂಧ ಇನ್ನಾದರೂ ಬಿಜೆಪಿ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವ ಕೆಲಸ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತಾಡಿದ ಸಚಿವ ಡಾ ಹೆಚ್ ಸಿ ಮಹಾದೇವಪ್ಪ, ಮುಡಾ ಪ್ರಕರಣಕ್ಕೆ ಸಂಬಂಧಿದಂತೆ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ರಾಜಕೀಯ ವಿಷಯಗಳಿಗೆ ಸರ್ಕಾರಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದಕ್ಕೆ  ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದೆ. ಇನ್ನಾದರೂ ರಾಜ್ಯದ ಬಿಜೆಪಿ ನಾಯಕರು ತಮ್ಮ ಮೊಂಡುವಾದವನ್ನು ಬಿಡಬೇಕು. ಬಿಜೆಪಿ ಸರ್ಕಾರ ಸಾಂವಿಧಾನಿಕ ಸಂಸ್ಥೆಯನ್ನ ದುರ್ಬಳಕೆ ಮಾಡಿಕೊಂಡಿದೆ. ಪಾದಯಾತ್ರೆ ಮಾಡಿ ಸರ್ಕಾರ ಅಸ್ಥಿರ ಗೊಳಿಸುವ ಕೆಲಸ ಮಾಡಿದರು ಈಗ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ ಬಿಜೆಪಿ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಲಿ ಎಂದರು.

ಸಿದ್ದರಾಮಯ್ಯ ಅವರನ್ನ  40 ವರ್ಷಗಳಿಂದ ಬಲ್ಲೆ, ಅವರು ಯಾವತ್ತೂ ಸ್ವಜನ ಪಕ್ಷಾಪಾತ ಮಾಡಿದವರಲ್ಲ. ವಿನಾಕಾರಣ ಬಿಜೆಪಿ ನಾಯಕರು ಅವರ ಮತ್ತು ಕುಟುಂಬದವರ ನೆಮ್ಮದಿಯನ್ನು ಹಾಳು ಮಾಡಿದರು, ಸಿದ್ದರಾಮಯ್ಯ ಒಬ್ಬ ವ್ಯಕ್ತಿಯಲ್ಲ, ಒಂದು ಸರ್ಕಾರದ ಮುಖ್ಯಸ್ಥ, ಪ್ರಜಾಪ್ರಭುತ್ವವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ ಅನ್ನೋದು ಅವರು ಆಡುವ ಆಟಗಳಿಂದ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.vtu

Key words: Muda case, Supreme Court, ED,  BJP – Minister, HC Mahadevappa

The post ಸುಪ್ರೀಂ ತೀರ್ಪು: ಇನ್ನಾದರೂ ಬಿಜೆಪಿ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲಿ- ಸಚಿವ ಹೆಚ್.ಸಿ ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അമേരിക്കന്‍ ഭീഷണികള്‍ ചൈനയ്ക്ക് മേല്‍ വിലപ്പോകില്ല; റിഫൈനറികള്‍ക്കുള്ള യു.എസ് ഉപരോധം നടപ്പിലാക്കാനാവില്ലെന്ന് വാണിജ്യകാര്യ മന്ത്രാലയം

ഷാങ്ഹായ്: ഇറാനിയന്‍ എണ്ണ വാങ്ങിയതായി ആരോപിച്ച് ചൈനീസ് റിഫൈനറിക്കെതിരെ യു.എസ് ഏര്‍പ്പെടുത്തിയ...

"சேவை செய்யவே சீருடை" – நடுரோட்டில் பாஜக அமைச்சருடன் வாக்குவாதம் செய்த பெண்ணின் புது வீடியோ வைரல்

கடந்த வாரம் பாராளுமன்றத்தில் மகளிர் இட ஒதுக்கீடு மசோதா தோல்வி அடைந்ததற்கு...

Raashii Khanna: పోలీస్ ఆఫీసర్‌గా రాశీ ఖన్నా.. ‘లుఖ్కే’ వెబ్ సిరీస్ క్రేజీ అప్‌డేట్!

టాలీవుడ్ బ్యూటీ రాశీ ఖన్నా ఇప్పుడు పవర్‌ఫుల్ పోలీస్ ఆఫీసర్‌గా తన...

ವಿದ್ಯುತ್‌ ವ್ಯತ್ಯಯ ದೂರಿಗೆ ವಾಟ್ಸ್‌ ಆಪ್‌, ಸಾಮಾಜಿಕ ಜಾಲತಾಣ ಬಳಸಿ: ಬೆಸ್ಕಾಂ ಮನವಿ

ಬೆಂಗಳೂರು,ಮೇ,2,2026 (www.justkannada.in): ವಿದ್ಯುತ್‌ ಸಂಬಂಧಿತ ದೂರುಗಳನ್ನು ದಾಖಲಿಸಲು ವಾಟ್ಸಪ್‌ ಸಹಾಯವಾಣಿ...