29
April, 2026

A News 365Times Venture

29
Wednesday
April, 2026

A News 365Times Venture

ಮಹಾನಗರ ಪಾಲಿಕೆ ನೌಕರರ ಮುಷ್ಕರ:  MLC ಕೆ.ವಿವೇಕಾನಂದ ಬೆಂಬಲ

Date:

ಮೈಸೂರು,ಜುಲೈ,9,2025 (www.justkannada.in):  ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಅವರು ಮೈಸೂರು ಮಹಾನಗರ ಪಾಲಿಕೆ ಕಚೇರಿಗೆ ಬುಧವಾರ ಭೇಟಿ ನೀಡಿ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

ರಾಜ್ಯದ ಎಲ್ಲ 10 ಮಹಾನಗರ ಪಾಲಿಕೆಗಳ ಅಧಿಕಾರಿಗಳು, ಸಿಬ್ಬಂದಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದು, ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ ವಿವೇಕಾನಂದ ಅವರು, ಧರಣಿನಿರತ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಮಾತನಾಡಿ ಮನವಿಗಳನ್ನು ಆಲಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆಗಳ ಅಧಿಕಾರಿಗಳು ನ್ಯಾಯಯುತವಾಗಿ ತಮಗೆ ಸಿಗಬೇಕಿರುವ ಸೌಲಭ್ಯಗಳನ್ನೇ ಕೇಳುತ್ತಿದ್ದಾರೆ. 7ನೇ ವೇತನ ಆಯೋಗದನ್ವಯ ಸಂಪೂರ್ಣ ಸಂಬಳ, ಕೆಜಿಐಡಿ ಮತ್ತು ಜಿಪಿಎಫ್ ಅಡಿಯಲ್ಲಿ ವಿಮಾ ಸೌಲಭ್ಯ, ಆರೋಗ್ಯ ವಿಮೆಗಳನ್ನು ಕೇಳುತ್ತಿದ್ದಾರೆ. ಈ ಎಲ್ಲ ಬೇಡಿಕೆಗಳೂ ಸರ್ಕಾರದ ಬೇರೆ ಇಲಾಖೆಗಳಿಗೆ ನೀಡುತ್ತಿರುವ ಸೌಲಭ್ಯಗಳೇ ಆಗಿವೆ. ಇವುಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ವಿಸ್ತರಿಸುವುದು ಸರ್ಕಾರಕ್ಕೆ ಕಠಿಣವಾಗಲಾರದು.

ನಮ್ಮ ವ್ಯವಸ್ಥೆಯಲ್ಲಿ ಪೌರಕಾರ್ಮಿಕರೇ ಅತ್ಯಂತ ಮಹತ್ವದ ಕಾರ್ಯ ನಿರ್ವಹಿಸುವುದರಿಂದ ಪ್ರತಿಭಟನಾಕಾರರ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ನಾನು ವಿಧಾನ ಪರಿಷತ್ತಿನಲ್ಲೂ ಚರ್ಚೆ ಮಾಡುವುದಾಗಿ ವಿವೇಕಾನಂದ ಅವರು ಮಾಹಿತಿ ನೀಡಿದರು.vtu

Key words: Mysore, City Corporation, employees, strike, MLC, K. Vivekananda

The post ಮಹಾನಗರ ಪಾಲಿಕೆ ನೌಕರರ ಮುಷ್ಕರ:  MLC ಕೆ.ವಿವೇಕಾನಂದ ಬೆಂಬಲ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇറാന്‍ ബുദ്ധിപൂര്‍വം പെരുമാറണം, പെട്ടന്ന് കരാറിലെത്തണമെന്ന് തോക്കുമായി ട്രംപ്; തുറമുഖങ്ങള്‍ക്കെതിരായ ഉപരോധം നീട്ടാന്‍ യു.എസ്

വാഷിങ്ടണ്‍: ഇറാന്‍ ഭരണകൂടം എത്രയും വേഗം കരാറിലെത്തണമെന്ന് അമേരിക്കന്‍ പ്രസിഡന്റ് ഡൊണാള്‍ഡ്...

‘மின்மாற்றிகள் கொள்முதலில் எந்த தவறும் நடக்கவில்லை!’ – செந்தில் பாலாஜி சொல்லும் விளக்கம்

மின்சாரத்துறை அமைச்சராக செந்தில் பாலாஜி இருந்தபோது மின்மாற்றிகள் கொள்முதல் செய்ததில் அரசுக்கு...

Kerala Election Exit poll 2026: కేరళలో హస్తం హవా.. పినరయికి గుడ్ బై..

Kerala Elections Exit poll 2026: నాలుగు రాష్ట్రాలు, ఒక కేంద్రపాలిత...

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಬೆಂಗಳೂರು,ಏಪ್ರಿಲ್,29,2026 (www.justkannada.in):  ಬಿಸಿಲಿನ ತಾಪದಿಂದ ಬಸವಳಿದಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ...