25
September, 2026

A News 365Times Venture

25
Friday
September, 2026

A News 365Times Venture

ಚಿಲುಮೆ ಪ್ರತಿಷ್ಠಾನದಿಂದ ನಾಡಪ್ರಭು ಜಯಂತ್ಯುತ್ಸವ: ಅದ್ದೂರಿ ಸ್ಮರಣೆ ಸಂಪನ್ನ

Date:

ಬೆಂಗಳೂರು,ಜೂನ್,27,2025 (www.justkannada.in): ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವದ ಅಂಗವಾಗಿ ಚಿಲುಮೆ ರವಿಕುಮಾರ್ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಕಾರ್ಯಕ್ರಮ  ಸಂಪನ್ನಗೊಂಡಿತು.

ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರು ಬುನಾದಿ ಹಾಕಿದ ಸ್ಥಳವಾದ ಅವಿನ್ಯೂ ರಸ್ತೆಯ ದೊಡ್ಡಪೇಟೆ ವೃತ್ತದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ, ಕೆಂಪೇಗೌಡರ ವೇಷಭೂಷಣ ಧರಿಸಿ ಕುದುರೆ ಏರಿ ಸೇನೆಯೊಂದಿಗೆ ಆಗಮಿಸುವ ದೃಶ್ಯವನ್ನು ಮರುಸೃಷ್ಟಿಸಲಾಗಿತ್ತು. ಬೆಂಗಳೂರು ನಗರದ ನಿರ್ಮಾಣದ ಬಗ್ಗೆ ಕೆಂಪೇಗೌಡರು ಹೊಂದಿದ್ದ ಪರಿಕಲ್ಪನೆ ಆಧರಿಸಿ ಅಭಿನಯ ಪ್ರಸ್ತುತ ಪಡಿಸಲಾಯಿತು..

ಡೊಳ್ಳು ಕುಣಿತ, ನಗಾರಿ ವಿದ್ಯಾ, ತಾಳ ಅರೇವಾದ್ಯ, ಪೂಜಾ ಕುಣಿತ, ಕಹಳೆ ವಾದ್ಯಗಳು ಆಕರ್ಷಿಸಿದವು.  ರಾಜಾಜಿನಗರದ ಇಎಸ್ ಐ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಹಣ್ಣುಹಂಪಲು, ಬ್ರೆಡ್, ಬಿಸ್ಕೆಟ್ ವಿತರಿಸಲಾಯಿತು.

ಮಾಗಡಿ ಕೆಂಪಾಪುರದಲ್ಲಿಅಲಂಕೃತ ನಾಡಪ್ರಭು ಸಮಾಧಿ ಬಳಿ ಸಂಜೆ 165 ದೀಪಗಳನ್ನು ಬೆಳಗಿಸಲಾಯಿತು.  ಇದೇ ವೇಳೆ ನೆರೆದವರು ಕೆಂಪೇಗೌಡರ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಜಯಂತೋತ್ಸವ ಪ್ರಯುಕ್ತ ಮಂಗಳವಾರ ಮಾಗಡಿ ಕೆಂಪಾಪುರದಲ್ಲಿ ‘ನಾಡಪ್ರಭು ಕೆಂಪೇಗೌಡ ಸಮಾಧಿ ಪರಿಸರ ಶುದ್ಧಿ ಅಭಿಯಾನ’ ಹಮ್ಮಿಕೊಳ್ಳಲಾಗಿತ್ತು. ಬುಧವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗವಿ ಗಂಗಾಧರೇಶ್ವರ ಗುಡಿ ಸೇರಿ ಆರು ಸ್ಥಳಗಳಲ್ಲಿ ಪುಷ್ಟಾರ್ಚನೆ ಸಲ್ಲಿಸಲಾಗಿತ್ತು.

ಕೊಡಗು ಜಿಲ್ಲಾ ಒಕ್ಕಲಿಗ ಯುವಘಟಕದ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಬಿಐಟಿ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಡಾ.ಮಧುಸೂದನ್ ಎಂ., ಚಿಲುಮೆ ಟ್ರಸ್ಟ್ ಅಧ್ಯಕ್ಷ ಕೊಟ್ರೇಶ್, ವಿಜಯ್ ಹೊಸಪಾಳ್ಯ, ಕೆಂಪಾಪುರ ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಯ್ಯ, ಗ್ರಾಮಸ್ಥರು, ಸ್ವಯಂಸೇವಕರು ಹಾಗೂ ಪ್ರತಿಷ್ಠಾನದ ಸದಸ್ಯರು ಭಾಗಿಯಾಗಿದ್ದರು.

Key words: Nadaprabhu Jayanthiyastava, chilume Foundation

The post ಚಿಲುಮೆ ಪ್ರತಿಷ್ಠಾನದಿಂದ ನಾಡಪ್ರಭು ಜಯಂತ್ಯುತ್ಸವ: ಅದ್ದೂರಿ ಸ್ಮರಣೆ ಸಂಪನ್ನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബീഹാറില്‍ മാത്രമല്ല അമേരിക്കയിലും ജപ്പാനിലും നടക്കുന്നുണ്ട്; ലൈംഗികാതിക്രമങ്ങളെ ന്യായീകരിച്ച് ബീഹാര്‍ മന്ത്രി

പട്‌ന: ബീഹാറില്‍ നടന്ന പെണ്‍കുട്ടികള്‍ക്കെതിരായ ലൈംഗികാതിക്രമ സംഭവങ്ങളെ ന്യായീകരിച്ച് മന്ത്രി അശോക്...

ஜெம் வீரமணி பாலியல் வழக்கு: 4 பெண் அதிகாரிகளை கொண்ட சிறப்பு புலனாய்வுக் குழு! – யார் அவர்கள்?

ஜெம் கிரானைட்ஸ் வீரமணி பாலியல் வழக்கில் நாளுக்கு நாள் வருகின்ற செய்திகள்...

Massive Cloud: భారత్ నుంచి చైనా వరకు భారీ మేఘాలు.. వెలుగులోకి ఉపగ్రహ చిత్రాలు

వర్షాకాలం ముగుస్తున్న తరుణంలో దేశంలో భారీ మేఘాలు కమ్ముకున్నాయి. ఎల్‌నినో కారణంగా...

പ്രസംഗം തുടങ്ങും മുന്‍പേ ഇറങ്ങിപ്പോയി പ്രതിനിധികള്‍; പരിഹസിച്ച് നെതന്യാഹു

ന്യൂയോര്‍ക്ക്: എതിരാളികളെയും സഖ്യകക്ഷികളെയും ഒരുപോലെ ആക്രമിച്ചുള്ള ഇസ്രഈല്‍ പ്രധാനമന്ത്രി ബെഞ്ചമിന്‍ നെതന്യാഹുവിന്റെ...