24
September, 2026

A News 365Times Venture

24
Thursday
September, 2026

A News 365Times Venture

ಕಷ್ಟದಲ್ಲಿರುವ ಕಲಾವಿದರಿಗೆ ಗುಡ್ ನ್ಯೂಸ್: ‘ಮಾಸಾಶನ’ ಹೆಚ್ಚಿಸಿ ಅನುದಾನ ಬಿಡುಗಡೆ ಮಾಡಿದ ಸರ್ಕಾರ

Date:

ಬೆಂಗಳೂರು,ಜೂನ್,25,2025 (www.justkannada.in): ಸಂಕಷ್ಟದಲ್ಲಿರುವಕಲಾವಿದರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಕಲಾವಿದರ ಮಾಸಾಶನ ಹೆಚ್ಚಿಸಿ ಅದಕ್ಕಾಗಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಕಲಾವಿದರ ಮಾಶಾಸನವನ್ನ 2 ಸಾವಿರ ರೂ.ಗಳಿಂದ 2500 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದಕ್ಕಾಗಿ 32.94 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.

ಈ ಕುರಿತು ಆದೇಶ ಹೊರಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್ ಗೀತಾಬಾಯಿ, ‘ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗುವುದು ಎಂಬ ಘೋಷಣೆಯನ್ನು 2025-26ರ ಆಯವ್ಯಯ ಸೂಚನೆ ದಿನಾಂಕ:09.04.2025ರಲ್ಲಿ ತಿಳಿಸಿರುವಂತೆ 2025-26ನೇ ಸಾಲಿನ ಲೆಕ್ಕಶೀರ್ಷಿಕೆ:2205-00-102-1-8-251ರಡಿ ಒದಗಿಸಿರುವ ರೂ.4392.82 ಲಕ್ಷಗಳ ಅನುದಾನದಿಂದ ಅನುಷ್ಠಾನಗೊಳಿಸಲು ಸಹಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

2025-26ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ- 374ರಂತೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲು ಸರ್ಕಾರದ ತಾತ್ವಿಕ ಅನುಮೋದನೆ ನೀಡಲಾಗಿದೆ.

ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನ ಪಾವತಿಸಲು ತಗಲುವ ವೆಚ್ಚವನ್ನು 2025-26ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಲೆಕ್ಕಶೀರ್ಷಿಕೆ: ರೂ.32,94,61,000/-(ರೂಪಾಯಿ ಮೂವತ್ತೆರಡು ಕೋಟಿ ತೊಂಬತ್ತಾಲ್ಕು ಲಕ್ಷದ ಅರವತ್ತೊಂದು ಸಾವಿರಗಳು ಮಾತ್ರಗಳನ್ನು ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಗೆ ಬಿಡುಗಡೆ ಮಾಡಲು ಸರ್ಕಾರ ಮಂಜೂರಾತಿ ನೀಡಿರುವುದಾಗಿ ತಿಳಿಸಿದ್ದಾರೆ.vtu

Key words: Good news, artists, government, increase

The post ಕಷ್ಟದಲ್ಲಿರುವ ಕಲಾವಿದರಿಗೆ ಗುಡ್ ನ್ಯೂಸ್: ‘ಮಾಸಾಶನ’ ಹೆಚ್ಚಿಸಿ ಅನುದಾನ ಬಿಡುಗಡೆ ಮಾಡಿದ ಸರ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ട്രംപ്-ഷി ധാരണയ്ക്ക് പിന്നാലെ ഏഷ്യയില്‍ സ്വാധീനം ശക്തമാക്കാന്‍ ചൈന

ബീജിങ്: അമേരിക്കന്‍ പ്രസിഡന്റ് ഡൊണാള്‍ഡ് ട്രംപും ചൈനീസ് പ്രസിഡന്റ് ഷി ജിന്‍പിങ്ങും...

“ஈரானைத் தவிர்க்க ‘IMEC’ பொருளாதாரப் பாதை" – முழு ஆதரவு தெரிவித்த ட்ரம்ப்

மத்திய கிழக்கு நாடுகளின் மீது ஈரான் நடத்தி வரும் கடல்வழித் தாக்குதல்களை...

Mamata Banerjee: బెంగాల్‌లో మళ్లీ ఎన్నికలు, జ్ఞానేశ్ కుమార్‌ అరెస్టు.. మమత సంచలన డిమాండ్..

Mamata Banerjee: కేంద్ర ఎన్నికల సంఘం నిర్వహించిన స్పెషల్ ఇంటెన్సివ్ రివిజన్(SIR)పై...

കേരളത്തില്‍ സി.ജെ.പിയുടെ ഫ്യൂച്ചര്‍ പ്ലാന്‍: ഏതെല്ലാം വിഷയം ഏറ്റെടുക്കും, സ്‌കൂള്‍ ഠീക് കരോ എവിടെയെല്ലാം

കോക്രോച്ച് ജനതാ പാര്‍ട്ടി (സി.ജെ.പി) രാജ്യത്താകെ അവരുടെ പ്രവര്‍ത്തനം വ്യാപിപ്പിക്കാനൊരുങ്ങുകയാണ്. ഇതിന്റെ...