12
March, 2026

A News 365Times Venture

12
Thursday
March, 2026

A News 365Times Venture

ಮಹಿಳೆ ಶವ ಹೂತಿಟ್ಟ ಕೇಸ್: ಮಾಜಿ ಪ್ರಿಯಕರನ ಮನೆ ಮೇಲೆ ದಾಳಿ, ವಸ್ತುಗಳು ದ್ವಂಸ

Date:

ಚಾಮರಾಜನಗರ,ಜೂನ್,23,2025 (www.justkannada.in): ಕೊಳ್ಳೇಗಾಲ  ತಾಲೋಕು ಹಳೇ ಹಂಪಾಪುರದಲ್ಲಿ  ಹೊಳೆ ದಡದಲ್ಲಿ ಮಹಿಳೆ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಇದೀಗ ಪ್ರಿಯಕರನ ಮನೆ ಮೇಲೆ ಮಹಿಳೆಯ ಸಂಬಂಧಿಕರು ದಾಳಿ ನಡೆಸಿ ಮನೆ ಮೇಲೆ ಕಲ್ಲೂತೂರಟ ನಡೆಸಿದ್ದು ವಸ್ತುಗಳನ್ನ ಧ್ವಂಸ ಮಾಡಿದ ಘಟನೆ ನಡೆದಿದೆ.

ಕೊಳ್ಳೇಗಾಲ ತಾಲ್ಲೂಕು ಹಳೇ ಹಂಪಾಪುರದಲ್ಲಿ  ಮಹಿಳೆಯನ್ನು ಮಾಜಿ ಪ್ರಿಯಕರ ಮಾದೇಶ ಕೊಲೆ ಮಾಡಿ ಹೂತು ಹಾಕಿದ್ದ. ಇದೀಗ ಕೊಲೆಯಾದ ಮಹಿಳೆಯ ಸಂಬಂಧಿಕರು ಕೊಳ್ಳೇಗಾಲ ಮೋಳೆ ಗ್ರಾಮದಲ್ಲಿರುವ  ಮಾದೇಶನ ಮನೆ ಮೇಲೆ ಕಲ್ಲು  ತೂರಾಟ ನಡೆಸಿ ಮನೆ ಜಖಂಗೊಳಿಸಿದ್ದು, ಮನೆಗೆ ನುಗ್ಗಿ ಮನೆಯಲ್ಲಿದ್ದ ಟವಿ ಮತ್ತಿತರ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ. ಇಷ್ಟೆಲ್ಲಾ ಘಟನೆಗಳು ಆದರೂ ಕಲ್ಲು ತೂರಾಟ ಹಾಗೂ ದ್ವಂಸದ ಬಗ್ಗೆ ಮಾದೇಶನ ಕುಟುಂಬಸ್ಥರು ಯಾವ ಯಾವುದೇ ದೂರು ನೀಡಿಲ್ಲ.

ಇತ್ತೀಚೆಗೆ ಸುವರ್ಣಾವತಿ ಹೊಳೆ ದಡದಲ್ಲಿ ಗ್ರಾಮದ ಸೋನಾಕ್ಷಿ ಶವ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹತ್ಯೆ ಮಾಡಿದ್ದ ಮಾಜಿ ಪ್ರಿಯಕರ ಮಾದೇಶನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಸೋನಾಕ್ಷಿ ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದಳು. ಈ ಕುರಿತು ಎರಡು ವಾರದ ಹಿಂದೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ನಡುವೆ ಸೋನಾಕ್ಷಿ ಪತ್ತೆಗೆ ಪೊಲೀಸರು ಮುಂದಾಗಿದ್ದರು.

ಸೋನಾಕ್ಷಿ ಮತ್ತೊಬ್ಬ ಪರಪುರುಷನೊಂದಿಗೆ ಟಿ. ನರಸೀಪುರದಲ್ಲಿರುವ ಬಗ್ಗೆ ಪೊಲೀಸರಿಗೆ ಮಾಜಿ ಪ್ರಿಯಕರ ಮಾದೇಶ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ತನ್ನ ಬಗ್ಗೆ ಮಾಹಿತಿ ನೀಡಿದ ಮಾದೇಶನೊಂದಿಗೆ ಸೋನಾಕ್ಷಿ ಜಗಳ ತೆಗೆದಿದ್ದು ಈ ವೇಳೆ ಸೋನಾಕ್ಷಿ ತಲೆಗೆ ಮಾದೇಶ ಹೊಡೆದಿದ್ದನು. ಈ ವೇಳೆ ಸೋನಾಕ್ಷಿ ಕುಸಿದು ಬಿದ್ದು ಸಾವನ್ನಪ್ಪಿದ್ದು ಸೋನಾಕ್ಷಿ ಶವವನ್ನು ಮಾದೇಶ ಬೈಕ್‌ನಲ್ಲಿ ಸಾಗಿಸಿ ತರಾತುರಿಯಲ್ಲಿ ಎರಡು ಅಡಿ ಗುಂಡಿ ತೆಗೆದು ಸೋನಾಕ್ಷಿ ಶವ ಹೂತು ಹಾಕಿದ್ದನು.vtu

Key words: Kollegal, Woman, Murder case, Ex-boyfriend,  house, attacked

The post ಮಹಿಳೆ ಶವ ಹೂತಿಟ್ಟ ಕೇಸ್: ಮಾಜಿ ಪ್ರಿಯಕರನ ಮನೆ ಮೇಲೆ ದಾಳಿ, ವಸ್ತುಗಳು ದ್ವಂಸ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಹಿರಿಯ ಪತ್ರಕರ್ತ ಕೆ ಜೆ. ಕುಮಾರ್ ನಿಧನ: ಇಂದು ಅಂತ್ಯಕ್ರಿಯೆ

ಮೈಸೂರು,ಮಾರ್ಚ್,12,2026 (www.justkannada.in):  ನಿನ್ನೆ ಹೃದಯಾಘಾತದಿಂದ ನಿಧನರಾದ ಹಿರಿಯ ಪತ್ರಕರ್ತ ಕೆ...

മലയാളം എവിടെ? ചങ്ങനാശ്ശേരി റെയില്‍വേ സ്‌റ്റേഷനിലെ ഹിന്ദി ബോര്‍ഡിനെതിരെ സോഷ്യല്‍ മീഡിയ

കോട്ടയം: ചങ്ങനാശ്ശേരി റെയില്‍വേസ്റ്റ്ഷനിലെ പുതുക്കിയ പ്രവേശന കവാടത്തിലും കെട്ടിടത്തിലും ഹിന്ദിയില്‍ ബോര്‍ഡ്...

Suryakumar Yadav: డ్రెస్సింగ్ రూమ్ సీక్రెట్స్ బయటపెట్టిన సూర్య.. గంభీర్ స్పీచ్‌తో ప్లేయర్లలో పూనకాలు!

Suryakumar Yadav: భారత్ ప్రపంచ క్రికెట్‌లో ఆధిపత్యం చెలాయిస్తోంది. మూడు సార్లు...