22
September, 2026

A News 365Times Venture

22
Tuesday
September, 2026

A News 365Times Venture

‘ಕೈ’ ನಾಯಕ ರಾಹುಲ್ ಗಾಂಧಿಗೆ ಜನರು ‘ಝೀರೋ  ಮಾರ್ಕ್ಸ್’ ಕೊಟ್ಟಿದ್ದಾರೆ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Date:

ರಾಯಚೂರು,ಜೂನ್,16,2025 (www.justkannada.in):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 11 ವರ್ಷದ ಆಡಳಿತಾವಧಿಗೆ ಸಿಎಂ ಸಿದ್ದರಾಮಯ್ಯ ಶೂನ್ಯ ಅಂಕ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜನರು ಝೀರೋ  ಮಾರ್ಕ್ಸ್’ ಕೊಟ್ಟಿದ್ದಾರೆ ಎಂದು ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ರಾಹುಲ್ ಗಾಂಧಿಗೆ ಜನರು ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ತಮ್ಮ ಖುರ್ಚಿ ಉಳಿಸಿಕೊಳ್ಳಲು ಕೇಂದ್ರ ಸರ್ಕಾರದ ಆಡಳಿತಕ್ಕೆ ಶೂನ್ಯ ಮಾರ್ಕ್ಸ್ ಕೊಟ್ಟಿದ್ದಾರೆ. 2014 ರಿಂದ 30ರಿಂದ 32 ಸಾರಿ ರಾಹುಲ್ ಗಾಂಧಿ ಲಾಂಚ್ ಆದರು. ಚಂದ್ರಯಾನ ಒಂದು ಸಾರಿ ಫೇಲ್ ಆದ ಮೇಲೆ ಲಾಂಚಿಂಗ್ ಯಶಸ್ವಿಯಾಯಿತು. ಆದರೆ ರಾಹುಲ್ ಗಾಂಧಿ ಯಶಸ್ವಿಯಾಗಿಲ್ಲ, ಜನ ಝಿರೋ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ನವರಿಗೆ ಸಾಮಾಜಿಕ ಬದ್ದತೆಯಿಲ್ಲ. ನೆಹರು ಅವರಿಂದ ರಾಜೀವ್ ಗಾಂಧಿ ತನಕ ಮೀಸಲಾತಿಗೆ ವಿರೋಧಿಸಿದ್ದರು. ಮೀಸಲಾತಿಗೆ ವಿರೋಧ ಮಾಡಿ ಅಂಬೇಡ್ಕರ್ ಗೆ ಅಪಮಾನ ಮಾಡಿದ್ದರು. ಪಾರ್ಲಿಮೆಂಟ್ ನಲ್ಲಿ ರಾಜೀವ್ ಗಾಂಧಿಯ ಅತೀ ದೊಡ್ಡ ಭಾಷಣ ಮೀಸಲಾತಿಯ ವಿರುದ್ದವೇ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  ತಿಳಿಸಿದರು.vtu

Key words: People, Rahul Gandhi,  Zero Marks, Union Minister, Prahlad Joshi

The post ‘ಕೈ’ ನಾಯಕ ರಾಹುಲ್ ಗಾಂಧಿಗೆ ಜನರು ‘ಝೀರೋ  ಮಾರ್ಕ್ಸ್’ ಕೊಟ್ಟಿದ್ದಾರೆ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ஜெம் வீரமணி வழக்கு: "திமுக-வும், தவெக-வும் வாதிட்டுக் கொண்டு காலந்தாழ்த்தாமல்..!"- வானதி சீனிவாசன்

"ஜெம் நிறுவனர் வீரமணி மீதான வழக்கில் திமுக-வும், ஆளுங்கட்சியான தவெக-வும் ஒருவருக்கொருவர்...

Off The Record: రేవంత్‌కు ఒక న్యాయం.. మహేష్ గౌడ్‌కు ఇంకో న్యాయమా?

Off The Record: తెలంగాణ కాంగ్రెస్‌లో ప్రస్తుతం ఓ ఆసక్తికరమైన చర్చ...

ഗസ അനുകൂല പ്രതിഷേധം: പ്രോസിക്യൂഷന് തിരിച്ചടി; വിദ്യാര്‍ത്ഥികള്‍ക്കെതിരായ ക്രിമിനല്‍ കേസുകള്‍ ഒഴിവാക്കി

കാലിഫോര്‍ണിയ: ഗസയില്‍ ഇസ്രഈല്‍ നടത്തുന്ന ആക്രമണങ്ങളില്‍ സ്റ്റാന്‍ഫോര്‍ഡ് സര്‍വകലാശാലയില്‍ പ്രതിഷേധിച്ച അഞ്ച്...

தாராபுரம்: தவெக வேட்பாளருக்கு வலுக்கும் எதிர்ப்பு; போலீஸார் பாதுகாப்புடன் நடைபெறும் பிரசாரம்!

தமிழ்நாட்டில் மதுராந்தகம், தாராபுரம் ஆகிய இரண்டு தொகுதிகளுக்கான இடைத்தேர்தல் அக்டோபர் 6...