14
May, 2026

A News 365Times Venture

14
Thursday
May, 2026

A News 365Times Venture

ಇವಳೆಂತಹ ತಾಯಿ..!  ಮದ್ಯದ ಅಮಲಿನಲ್ಲಿ ತನ್ನ ಮಗುವಿಗೆ ಮನಬಂದಂತೆ ಥಳಿಸಿ ಹತ್ಯೆಗೆ ಮುಂದಾದ ಮಹಿಳೆ

Date:

ಮೈಸೂರು,ಜೂನ್,14,2025 (www.justkannada.in): ತಾಯಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಆದರೆ ಇಲ್ಲೊಬ್ಬ ಆದಿವಾಸಿ ಮಹಿಳೆ ಕಂಕುಳಲ್ಲಿ ಪುಟ್ಟ ಕಂದಮ್ಮನ ಹಿಡಿದಿರುವುದನ್ನ ಮರೆತು ಮದ್ಯ ಅಮಲಿನಲ್ಲಿ ತೇಲಾಡುವುದಲ್ಲದೆ ಮಗುವಿಗೆ ಮನಬಂದಂತೆ ಥಳಿಸಿದ್ದಾಳೆ.

ಬಾಣಂತಿ‌ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದು ಕಂಕುಳಲ್ಲಿ ಪುಟ್ಟ ಕಂದಮ್ಮನ ಹಿಡಿದಿರುವುದನ್ನ ಮರೆತು ಎರಡು ಕ್ವಾರ್ಟರ್ ಕೊಡಿಸಿ ಸಾಕು ಏನೂ ಬೇಡ ಎನ್ನುತ್ತಿದ್ದಾಳೆ. ಮದ್ಯದ ಚಟಕ್ಕೆ ಬಲಿಯಾಗಿ ಮಹಿಳೆ ತನ್ನ ಒಂಬತ್ತು ತಿಂಗಳ ಹಸುಗೂಸಿನ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ಸದ್ಯ ಸ್ಥಳೀಯರ ನೆರವಿನಿಂದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ, ಪೊಲೀಸರ ನೆರವಿನಿಂದ ಮಗುವನ್ನ ರಕ್ಷಣೆ ಮಾಡಿದ್ದಾರೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ‌ ಚಿಕ್ಕೆರೆಹಾಡಿಯ ಪಾರ್ವತಿ ಎಂಬ ಆದಿವಾಸಿ ಮದ್ಯವ್ಯಸನಿ ಮಹಿಳೆ ಈ  ರಂಪಾಟ ನಡೆಸಿದ್ದಾಳೆ. ಮದ್ಯದ ಅಮಲಿನಲ್ಲಿ ತನ್ನದೇ ಕರುಳುಬಳ್ಳಿಗೆ ಮನಬಂದಂತೆ ಥಳಿಸಿದ್ದು ಮಗು ಹತ್ಯೆಗೆ ಮುಂದಾಗಿದ್ದ ವೇಳೆ ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ಮಗುವಿಗೆ ಹೊಡೆದು ಬುದ್ಧಿ ಕಲಿಸುತ್ತೀವಿ ಎಂದು ಆದಿವಾಸಿ ಮಹಿಳೆ 9 ತಿಂಗಳ ಪುಟ್ಟ ಕಂದಮ್ಮನ ಮೇಲೆ ಹಲ್ಲೆಗೆ ಯತ್ನಿಸಿದ್ದು, ಅಲ್ಲದೆ ನಾನು ಎಣ್ಣೆ ಕುಡಿದೇ ಕುಡಿತೀನಿ ನನಗೆ ಎರಡು ಕ್ವಾರ್ಟರ್ ಎಣ್ಣೆ ಕೊಡಿಸಿ. ಕೊನೇ ಪಕ್ಷ‌ 90 ಎಣ್ಣೆಯಾದರೂ ಕೊಡಿ ಎಂದು ಅಂಗಲಾಚಿದ್ದಾಳೆ. ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಮಹಿಳೆ ಮೊಂಡಾಟ ನಡೆಸಿದ್ದು, ಪೊಲೀಸರಿಗೂ ಕ್ಯಾರೆ ಎನ್ನದೆ ಮದ್ಯದ ಅಮಲಿನಲ್ಲಿ  ತೇಲಾಡಿದ್ದಾಳೆ.

ಆದಿವಾಸಿಗಳು, ಚಿಲ್ಲರೆ ಅಂಗಡಿಗಳಲ್ಲಿ‌ ಮದ್ಯ ಮಾರಾಟ ಮಾಡುತ್ತಿರುವ ಎಫೆಕ್ಟ್ ನಿಂದಾಗಿ ಇಂತಹ ಘಟನೆಗಳು ನಡೆಯುತ್ತಿದ್ದು ಅಕ್ರಮ ಮದ್ಯದ ಅಮಲಿನಲ್ಲಿ ಬಡ ಆದಿವಾಸಿಗಳು ತೇಲುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟಕ್ಕೆಅವಕಾಶ ನೀಡಿ  ಈ ಮೂಲಕ ಕಾಡಂಚಿನ ಗ್ರಾಮದ ಜನರ ಜೊತೆ ರಾಜಕಾರಣಿಗಳು, ಅಧಿಕಾರಿಗಳ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಕೇಳೀ ಬಂದಿದೆ.vtu

Key words: Mysore, woman, beat, child, drunk

 

The post ಇವಳೆಂತಹ ತಾಯಿ..!  ಮದ್ಯದ ಅಮಲಿನಲ್ಲಿ ತನ್ನ ಮಗುವಿಗೆ ಮನಬಂದಂತೆ ಥಳಿಸಿ ಹತ್ಯೆಗೆ ಮುಂದಾದ ಮಹಿಳೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

எஸ்.பி.வேலுமணி பதவி பறிப்பு; அரசியல் களத்திற்கு மீண்டும் வரும் செ.ம.வேலுசாமி – பின்னணி என்ன?

கோவை மாவட்டம் சூலூர் அருகேயுள்ள செங்கத்துறை பகுதியை சேர்ந்தவர் செ.ம.வேலுசாமி. அ.தி.மு.க-வின்...

Aasara Pensions: గుడ్‌న్యూస్.. తెలంగాణలో ఆసరా పింఛన్లపై బిగ్ అప్‌డేట్..

తెలంగాణ రాష్ట్రంలో సామాజిక భద్రతే లక్ష్యంగా ప్రభుత్వం అడుగులు వేస్తోంది. ముఖ్యంగా...

ಮಣ್ಣಲ್ಲಿ ಮಣ್ಣಾದ ನಟ, ನಿರ್ದೇಶಕ ದಿಲೀಪ್ ರಾಜ್

ರಾಮನಗರ,ಮೇ,13,2026 (www.justkannada.in):  ಹೃದಯಾಘಾತದಿಂದ ಇಂದು ಬೆಳಗ್ಗಿನ ಜಾವ ನಿಧನರಾದ ನಟ...